ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಕಟ್ಟೂತಿಮೇಡು ಎಂಬ ಪ್ರವಾಸಿ ಸ್ಥಳದೊಂದಿಗೆ ಪುರಾಣ ಕಥೆಗಳು ಮತ್ತು ರುದ್ರ ರಮಣೀಯ ದೃಶ್ಯಗಳು ಹೆಣೆದುಕೊಂಡಿದ್ದು, ಇದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಕಟ್ಟೂತಿಮೇಡು ಶಿಖರ ಸಮುದ್ರ ಮಟ್ಟಕ್ಕಿಂತ ಸರಾಸರಿ ಸುಮಾರು 3000 ಅಡಿ ಎತ್ತರದಲ್ಲಿದೆ. ಮಲಯಾಳಂನಲ್ಲಿ ಗಾಳಿ ಬೀಸುವ ಪರ್ವತವಾದ ಕಟ್ಟೂತಿಮೇಡು ಎಂದರೆ ಮಲಯಾಳಂನಲ್ಲಿ ಗಾಳಿ ಬೀಸುವ ಪರ್ವತ ಎಂದು ಹೇಳಲಾಗುತ್ತದೆ. ಯಾವಾಗಲೂ ಇಲ್ಲಿ ಗಾಳಿ ಬೀಸುತ್ತಲೇ ಇರುತ್ತದೆ.
ಬಿರು ಬೇಸಿಗೆಯಲ್ಲಿಯೂ ಒಣಗದ ನೀರಿನ ಕೊಳ, ಕವು (ಪವಿತ್ರ ತೋಪು), ಹಚ್ಚ ಹಸಿರಿನ ಹುಲ್ಲುಗಾವಲುಗಳು ಮತ್ತು ಅದರ ಸುತ್ತಲಿನ ಎಲ್ಲ ದಂತಕಥೆಗಳು ಕಟ್ಟೂತಿಮೇಡುನಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಹರಡಿವೆ. ಕಟ್ಟೂತಿಮೇಡು ಕುರಿತಾದ ಜನರಿಗೆ ಪೌರಾಣಿಕ ಕಥೆಗಳು ಮತ್ತು ಆ ಜಾನಪದ ಕಥೆಗಳಲ್ಲಿ ನಂಬಿಕೆ ಇದೆ.
ಎಷ್ಟೋ ಶತಮಾನಗಳ ಹಿಂದೆ, ಕಟ್ಟೂತಿಮೇಡು ಕಣಿವೆಯಲ್ಲಿ ವಾಸಿಸುತ್ತಿದ್ದ ಮುತ್ತುವಾನ್ ಸಮುದಾಯದ ಬುಡಕಟ್ಟು ಜನಾಂಗದವರು ಇಲ್ಲಿರುವ ಬೆಟ್ಟದ ಮೇಲಿರುವ ಕೊಳದ ದಂಡೆಯಲ್ಲಿ ‘ಕನ್ನಿಮರಿಯಮ್ಮನ್ ಕರುಪ್ಪಸಾಮಿ’ ವಿಗ್ರಹವನ್ನು ಸ್ಥಾಪಿಸಿದರು. ಅಲ್ಲಿಂದೀಚೆಗೆ, ಕರುಪ್ಪಸಾಮಿ ಕಟ್ಟೂತಿಮೇಡುಗೆ ‘ರಕ್ಷಕ ದೇವರಾಗಿ' ಬದಲಾದರು. ಇಲ್ಲಿನ ಬುಡಕಟ್ಟು ಜನಾಂಗದ ಜನ ಕರುಪ್ಪಸಾಮಿ ತಮ್ಮ ಹಳ್ಳಿಗಳನ್ನು ಮತ್ತು ಕೃಷಿಭೂಮಿಯನ್ನು ಕಾಪಾಡುತ್ತಾನೆ ಎಂದು ನಂಬುತ್ತಾರೆ. ಉದ್ದವಾದ ಕೊಂಬಿನಂತಹ ಮೀಸೆ ಮತ್ತು ಕತ್ತಿಯನ್ನು ಹಿಡಿದಿರುವ ಕರುಪ್ಪಸಾಮಿ, ಕಟ್ಟೂತಿಮೇಡಿನ ಜನರು, ಅವರ ಜಮೀನು, ಊರುಗಳು, ಕಣಿವೆ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾನೆ ಅಂತಾರೆ ಕರುಪ್ಪಸಾಮಿಯ ಆರಾಧಕರು.
ಸಮಯ ಕಳೆದಂತೆ, ಮುತವನ್ ಸಮುದಾಯದ ಹೆಚ್ಚಿನ ಬುಡಕಟ್ಟು ಜನಾಂಗದವರು ಬೇರೆ ಸ್ಥಳಗಳಿಗೆ ವಲಸೆ ಹೋದರು. ಪ್ರಸ್ತುತ, ಈ ಪವಿತ್ರ ತೋಪು ಮತ್ತು ಕರುಪ್ಪಸಾಮಿ ಹಾಗೂ ಇತರ ದೇವಾಲಯಗಳನ್ನು ಹತ್ತಿರದ ಏಲಕ್ಕಿ ತೋಟದ ಕಾರ್ಮಿಕರು ನೋಡಿಕೊಳ್ಳುತ್ತಿದ್ದಾರೆ. ಈ ಕಾರ್ಮಿಕರೇ ಕಾವಲುಗಾರ ಕರುಪ್ಪಸಾಮಿಯ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಈ ದೇವಾಲಯದಲ್ಲಿ ಮುಖ್ಯ ಹಬ್ಬಗಳಾದ ಪೊಂಗಲ್ ಮತ್ತು ಮುಲಾ ಪಾರಿಗಳನ್ನು ಮಲಯಾಳಂ ತಿಂಗಳಲ್ಲಿ ಪೂರ್ಣ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ.
ಕರುಪ್ಪಸಾಮಿಯಲ್ಲದೇ, ಇಲ್ಲಿರುವ ದೇವಾಲಯದಲ್ಲಿ ‘ಸಪ್ತ ಕನ್ಯಾಕಮರ್’ - ಏಳು ಕನ್ಯಾ ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಪೌರಾಣಿಕ ಕಥೆಯ ಪ್ರಕಾರ ಇಂದ್ರನ ಆಸ್ಥಾನದಲ್ಲಿ ನರ್ತಕಿಯಾಗಿದ್ದ ಏಳು ಕನ್ಯಾ ದೇವತೆಯರು ರಾತ್ರಿ ವೇಳೆ ಸ್ನಾನ ಮಾಡಲು ಮತ್ತು ಉಲ್ಲಸಿತರಾಗಲು ಕಟ್ಟೂತಿಮೇಡು ಕೊಳಕ್ಕೆ ಬರುತ್ತಿದ್ದರಂತೆ.
1972 ರಲ್ಲಿ, ಬುಡಕಟ್ಟು ಜನರಿಗೆ ಈ ಸಪ್ತ ಕನ್ಯೆಯರ ವಿಗ್ರಹ ಕೊಳದಲ್ಲಿ ಸಿಕ್ಕಿದ ನಂತರ ಸಪ್ತ ಕನ್ಯೆಯರಿಗಾಗಿಯೇ ಪ್ರತ್ಯೇಕ ದೇವಾಲಯ ನಿರ್ಮಿಸಲಾಗಿದೆ. ಇನ್ನು ಇಲ್ಲಿ ಇಲ್ಲಿನ ತೋಪುಗಳಿಗೆ ಕಾವಲಾಗಿ ನಿಂತಿರುವ ‘ಸರ್ಪಂ’ - ಹಾವಿನ ವಿಗ್ರಹವೂ ಇದೆ. ಈ ಕಾರಣಕ್ಕಾಗಿ ಯಾರನ್ನೂ ಈ ಪವಿತ್ರ ತೋಪುಗಳಲ್ಲಿ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ‘ಪರಿಶುದ್ಧ ಮನಸ್ಸು’ ಇರುವವರು ಮಾತ್ರ ಸರ್ಪಂ ನೋಡಲು ಸಾಧ್ಯ ಎಂಬುದು ಇಲ್ಲಿನ ನಂಬಿಕೆ.
ಈ ಕಟ್ಟೂತಿಮೇಡು ಶಿಖರ ಶಾಂತನ್ಪರ ಸೇನಾಪತಿ ರಸ್ತೆಯ ಪಲ್ಲಿಕ್ಕುನ್ನು ಜಂಕ್ಷನ್‌ನಿಂದ ಕೆಲವು ಸ್ವಲ್ಪ ದೂರದಲ್ಲಿದೆ. ಬೃಹತ್ ಮರಗಳಿಂದ ಕೂಡಿದ ರಸ್ತೆಯ ಮೂಲಕ ಪಾಲಿಕ್ಕುನ್ನುದಿಂದ ಸುಮಾರು 4 ಕಿ.ಮೀ ದೂರಕ್ಕೆ ಸಾಗಿದರೆ, ಕಟ್ಟೂತಿಮೇಡು ತಲುಪಬಹುದು ಮತ್ತು ಇಲ್ಲಿ ಬೀಸುವ ತಣ್ಣನೆ ಗಾಳಿಯ ಅನುಭವ ಪಡೆಯಬಹುದು. ಶಿಖರದ ತುದಿಯಿಂದ ನಿಂತು ನೋಡಿದರೆ ಚತುರಂಗಪರ, ರಾಮಕ್ಕಲ್ಮೇಡು, ಸೂರ್ಯನೆಲ್ಲಿ, ಚಿನ್ನಕಾನಲ್ ದೇವಿಕುಲಂ ಗ್ಯಾಪ್ ರಸ್ತೆ ಮತ್ತು ಕಟ್ಟೂತಿಮೆಡು ಸುತ್ತಮುತ್ತಲಿನ ಅನೇಕ ಪ್ರವಾಸಿ ಸ್ಥಳಗಳು ಕಾಣುತ್ತವೆ.. ಇನ್ನು ಸಪ್ತ ಕನ್ಯಾ ದೇವತೆಗಳನ್ನು ಮತ್ತು ಕಾವಲುಗಾರ ಕರುಪ್ಪಸಾಮಿಯ ದರುಶನ ಮಾಡಿದ ಬಳಿಕ ಕಟ್ಟೂತಿಮಾಲಾದಿಂದ ಚಾರಣ ಮಾಡಬಹುದು.