ETV Bharat / bharat

ಸಮಗ್ರ ಮಾಹಿತಿ: ಟೂಲ್​​​​ಕಿಟ್ ಎಂದರೇನು? 'ಛತ್ತೀಸಗಢ ಟೂಲ್​ ಕಿಟ್'ನಲ್ಲಿ ಏನಿದೆ? - MODI'S HOUSE

ಟೂಲ್ ಕಿಟ್ ಎಂಬುದು ಒಂದು ಡಿಜಿಟಲ್ ದಾಖಲಾತಿಯಾಗಿದೆ. ಸೋಷಿಯಲ್ ಮೀಡಿಯಾಗಳ ಮೂಲಕ ಇದನ್ನು ಹಂಚಿಕೊಳ್ಳಲಾಗುತ್ತದೆ. ಯಾವುದಾದರೂ ಒಂದು ನಿರ್ದಿಷ್ಟ ವಿಷಯದ ಮೇಲೆ ಟೂಲ್ ಕಿಟ್ ತಯಾರಿಸಲಾಗುತ್ತದೆ. ಇದರಲ್ಲಿ ಮುಂದೇನು ಮಾಡಬೇಕು ಎಂಬುದರ ಮಾಹಿತಿ ಇರುತ್ತದೆ. ಇನ್ನು ಆಗಾಗ ಹೊಸ ಮಾಹಿತಿಗಳನ್ನು ಇದಕ್ಕೆ ಜೋಡಿಸಲಾಗುತ್ತಿರುತ್ತದೆ.

know the toolkit case of Chhattisgarh
know the toolkit case of Chhattisgarh
author img

By

Published : May 21, 2021, 5:15 PM IST

Updated : May 21, 2021, 6:14 PM IST

ರಾಯಪುರ (ಛತ್ತೀಸಗಢ): ಕಾಂಗ್ರೆಸ್​ ತಯಾರಿಸಿದೆ ಎಂದು ಹೇಳಲಾದ ಟೂಲ್ ಕಿಟ್ ಬಗ್ಗೆ ಸದ್ಯ ದೇಶದಲ್ಲಿ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಕೆಡಿಸಲು ಕಾಂಗ್ರೆಸ್​ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದೇ ವಿಷಯವಾಗಿ ಬಿಜೆಪಿ ಹಲವಾರು ಮಾಹಿತಿಗಳನ್ನು ಇಂಟರನೆಟ್​ನಲ್ಲಿ ಪೋಸ್ಟ್ ಮಾಡುತ್ತಿದೆ. ಟೂಲ್​​ಕಿಟ್​ ನಲ್ಲಿ ತನ್ನದೇನೂ ಪಾತ್ರವಿಲ್ಲ ಎಂದಿರುವ ಕಾಂಗ್ರೆಸ್, ಬಿಜೆಪಿ ಈ ವಿಚಾರವನ್ನೆತ್ತಿಕೊಂಡು ಕಾಂಗ್ರೆಸ್ ವಿರುದ್ಧ ಕುತಂತ್ರ ಮಾಡುತ್ತಿದೆ ಎಂದು ಹೇಳಿದೆ. ನಕಲಿ ಟೂಲ್​ ಕಿಟ್​ ಮೂಲಕ ಬಿಜೆಪಿ ಕಾಂಗ್ರೆಸ್ಸನ್ನು ಗುರಿ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಟೂಲ್ ಕಿಟ್​ ಬಗ್ಗೆ ಪ್ರಚಲಿತದಲ್ಲಿರುವ ಕೆಲ ಮಾಹಿತಿಗಳನ್ನು ಇಲ್ಲಿ ಓದುಗರಿಗಾಗಿ ನೀಡುತ್ತಿದ್ದೇವೆ. ಆದರೆ, ಈ ಟೂಲ್​ ಕಿಟ್​ ನಲ್ಲಿರುವ ಮಾಹಿತಿಗಳೆಲ್ಲವೂ ಸತ್ಯ ಎಂಬುದರ ಬಗ್ಗೆ ಈಟಿವಿ ಭಾರತ ಖಚಿತಪಡಿಸುತ್ತಿಲ್ಲ ಎಂಬುದು ಗಮನದಲ್ಲಿರಲಿ.

ಟೂಲ್ ಕಿಟ್​ನಲ್ಲಿವೆ ಎನ್ನಲಾದ 8 ಪ್ರಮುಖ ವಿಷಯಗಳು

  • ಹರಿದ್ವಾರದಲ್ಲಿ ಆಯೋಜಿಸಲಾದ ಕುಂಭ ಮೇಳವನ್ನು ಕೊರೊನಾ ಸೂಪರ್ ಸ್ಪ್ರೆಡರ್ ಎಂದು ಪ್ರಚಾರ ಮಾಡಲಾಗುವುದು
  • ದೇಶದ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುವುದು
  • ಕೊರೊನಾ ಸೋಂಕಿನ ವಿಷಯವನ್ನೇ ಮುಂದೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಳು ಮಾಡಬೇಕು
  • ಕೊರೊನಾ ವೈರಸ್​​ನ ರೂಪಾಂತರಿ ತಳಿಗಳನ್ನು ಉಲ್ಲೇಖಿಸುವಾಗ ಅವುಗಳಿಗೆ 'ಇಂಡಿಯನ್ ತಳಿ' ಎಂಬ ಹೆಸರು ಬಳಸುವುದು
  • ಕೊರೊನಾದಿಂದ ಸತ್ತವರ ಹೆಣಗಳನ್ನು ಸುಡುವ ದೃಶ್ಯಗಳನ್ನು ಬಳಸಿಕೊಂಡು ಅಂತ್ಯ ಸಂಸ್ಕಾರದ ಭೀತಿಯ ಚಿತ್ರಗಳನ್ನು ಮೂಡಿಸುವುದು
  • ಪಿಎಂ ಕೇರ್ಸ್​ ಫಂಡ್​ ವಿರುದ್ಧ ಪ್ರಚಾರ ಮಾಡುವುದು. ಬುದ್ಧಿಜೀವಿಗಳನ್ನು ಬಳಸಿಕೊಂಡು ಪಿಎಂ ಕೇರ್ಸ್​ ಫಂಡ್ ವಿರುದ್ಧ ಪ್ರಚಾರ ಮಾಡುವುದು. ಪಿಎಂ ಕೇರ್ಸ್​ ಪಂಡ್​ನಿಂದ ಪಂಜಾಬ್​​ ಹಾಗೂ ಛತ್ತೀಸಗಢಗಳಿಗೆ ನೀಡಲಾದ ವೆಂಟಿಲೇಟರುಗಳು ಸರಿಯಾಗಿಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ಒಟ್ಟಾರೆ ಎಲ್ಲ ವೆಂಟಿಲೇಟರುಗಳು ನಿರುಪಯುಕ್ತವಾಗಿವೆ ಎಂದು ಬಿಂಬಿಸುವುದು.
  • ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಪ್ರಧಾನ ಮಂತ್ರಿಗಳ ಖಾಸಗಿ ಮನೆ ಎಂದು ಬಿಂಬಿಸುವುದು. MODI'S HOUSE ಎಂದು ಪ್ರಚಾರ ಮಾಡುವುದು
  • ಕೊರೊನಾ ಸಂಕಷ್ಟದ ಸಮಯದಲ್ಲಿ ಗುಜರಾತ್ ರಾಜ್ಯಕ್ಕೆ ಪ್ರಧಾನಿಯು ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಭ್ರಮೆಯನ್ನು ಹುಟ್ಟು ಹಾಕುವುದು. ಗುಜರಾತಿಗೆ ಅತಿ ಹೆಚ್ಚು ಲಸಿಕೆಗಳನ್ನು ಕಳುಹಿಸಲಾಗಿದೆ ಎಂದು ಹೇಳುವುದು.

ಬಿಜೆಪಿ ಆರೋಪಗಳು ಹೀಗಿವೆ:

ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ ಪಾತ್ರಾ ಕಾಂಗ್ರೆಸ್ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಈ ಟೂಲ್ ಕಿಟ್ ಮೂಲಕ ಕಾಂಗ್ರೆಸ್ ತನ್ನ ರಾಜಕೀಯ ಗುರಿಗಳನ್ನು ಈಡೇರಿಸಿಕೊಳ್ಳಲು ಬಯಸಿದೆ. ಈ ಟೂಲ್ ಕಿಟ್ ಮೂಲಕ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕೆಂಬುದನ್ನು ಹೇಳಿ ಕೊಡಲಾಗುತ್ತಿದೆ." ಎಂದು ಅವರು ಆರೋಪಿಸಿದ್ದಾರೆ.

  • कोरोना संकट के समय कांग्रेस की बिलो द बेल्ट राजनीति देखकर शर्म आती है।

    विदेशी मीडिया में देश को बदनाम करने @INCIndia कुंभ का दुष्प्रचार व जलती लाशों की फ़ोटो दिखाने का षड्यंत्र कर रही है।

    महामारी से साथ लड़ने के बजाय कांग्रेस लोगों को आपस मे लड़ा रही है#CongressToolkitExposed pic.twitter.com/8j5TyHHMpI

    — Dr Raman Singh (@drramansingh) May 18, 2021 " class="align-text-top noRightClick twitterSection" data=" ">

ಕಾಂಗ್ರೆಸ್​ನಿಂದ ಎಫ್​ಐಆರ್ ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಉಳಿಸಲು ಬಿಜೆಪಿಯು ನಕಲಿ ಟೂಲ್ ಕಿಟ್ ತಯಾರಿಸಿದೆ ಎಂದು ಆರೋಪಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಹಿರಿಯ ನಾಯಕರಾದ ಬಿ.ಎಲ್. ಸಂತೋಷ, ಸ್ಮೃತಿ ಇರಾನಿ, ಸಂಬಿತ ಪಾತ್ರಾ ಸೇರಿದಂತೆ ಇನ್ನೂ ಕೆಲವರು ಟೂಲ್ ಕಿಟ್​ 'ಕುತಂತ್ರ' ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಇವರೆಲ್ಲರ ವಿರುದ್ಧ ದೆಹಲಿಯಲ್ಲಿ ಎಫ್​ಐಆರ್ ದಾಖಲಿಸಿದೆ. ಕಾಂಗ್ರೆಸ್ಸಿನ ತನಿಖಾ ವಿಭಾಗದ ಮುಖ್ಯಸ್ಥ ರಾಜೀವ ಗೌಡ ಮತ್ತು ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥ ರೋಹನ ಗುಪ್ತಾ ಇವರು ದೆಹಲಿಯ ತುಘಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಳ್ಳು ಹರಡುತ್ತಿರುವ ಹಾಗೂ ಕುತಂತ್ರ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ತನಿಖೆ ನಡೆಸಬೇಕೆಂದು ದೂರಿನಲ್ಲಿ ಕೋರಲಾಗಿದೆ.

ಇಂಥ ಸುಳ್ಳುಗ​ಳನ್ನು ಹರಡುತ್ತಿರುವ ಬಿಜೆಪಿ ನಾಯಕರ ಸೋಷಿಯಲ್ ಮೀಡಿಯಾ ಅಕೌಂಟುಗಳನ್ನು ರದ್ದು ಮಾಡಬೇಕೆಂದು ಕೋರಿ ಪ್ರಮುಖ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಪತ್ರ ಬರೆಯಲಾಗುವುದು ಎಂದೂ ಕಾಂಗ್ರೆಸ್ ತಿಳಿಸಿದೆ.

ಛತ್ತೀಸಗಢದಲ್ಲೂ ಟೂಲ್ ಕಿಟ್ ರಾಜಕೀಯ

ಕಾಂಗ್ರೆಸ್ಸಿನದು ಎಂದು ಹೇಳಲಾದ ಪತ್ರವನ್ನು ಮಾಜಿ ಮುಖ್ಯಮಂತ್ರಿ ರಮಣ ಸಿಂಗ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ಇಂಥ ಪತ್ರದ ಮೂಲಕ ದೇಶದ ಶಾಂತಿ ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

"ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಕಾಂಗ್ರೆಸ್ ಸೊಂಟದ ಕೆಳಗಿನ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು. ವಿದೇಶದ ಮಾಧ್ಯಮಗಳಲ್ಲಿ ಭಾರತದ ಹೆಸರು ಕೆಡಿಸಲು ಕುಂಭ ಮೇಳ ಹಾಗೂ ಉರಿಯುತ್ತಿರುವ ಚಿತೆಗಳ ಚಿತ್ರಗಳನ್ನು ಬಳಸುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಬದಲು ಕಾಂಗ್ರೆಸ್​, ಜನರ ಮಧ್ಯೆಯೇ ಹೊಡೆದಾಟ ನಿರ್ಮಾಣ ಮಾಡುತ್ತಿದೆ." ಎಂದು ರಮಣ ಸಿಂಗ್ ಬರೆದಿದ್ದಾರೆ. ಇದಕ್ಕೆ #congresstoolkitexposed ಹ್ಯಾಶ್ ಟ್ಯಾಗನ್ನು ಅವರು ಬಳಸಿದ್ದಾರೆ.

ಟ್ರೆಂಡ್ ಆದ ಹ್ಯಾಶ್ ಟ್ಯಾಗ್

ಟೂಲ್ ಕಿಟ್​ ವಿಚಾರದಲ್ಲಿ ಬಿಜೆಪಿಯ ಬಹುತೇಕ ಎಲ್ಲ ಮುಖಂಡರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿಟ್ಟು ತೋರ್ಪಡಿಸಿಕೊಂಡಿದ್ದಾರೆ. ಕಾಂಗ್ರೆಸ್​ ಎಫ್​ಐಆರ್​ ದಾಖಲಿಸಿದ್ದನ್ನು ಖಂಡಿಸಿರುವ ಛತ್ತೀಸಗಢ ಬಿಜೆಪಿ, #भूपेश_हमें_भी_करो_गिरफ्तार, #भूपेश_मुझे_भी_गिरफ्तार_करो (ಭೂಪೇಶ ನಮ್ಮನ್ನೂ ಬಂಧಿಸಿ, ಭೂಪೇಶ ನನ್ನನ್ನೂ ಬಂಧಿಸು) ಎಂಬ ಹ್ಯಾಶ್​ ಟ್ಯಾಗಗಳನ್ನು ಟ್ರೆಂಡ್ ಮಾಡುತ್ತಿದೆ.

ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ

ಮಾಜಿ ಮುಖ್ಯಮಂತ್ರಿ ರಮಣ ಸಿಂಗ್ ನಕಲಿ ದಾಖಲೆಗಳ ಮೂಲಕ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಯಪುರದ ಸಿವಿಲ್ ಲೈನ್ಸ್​ ಪೊಲೀಸ್​ ಠಾಣೆಯಲ್ಲಿ ಎನ್​ಎಸ್​ಯುಐ ಮುಖಂಡರೊಬ್ಬರು ರಮಣ ಸಿಂಗ್ ಹಾಗೂ ಬಿಜೆಪಿ ವಕ್ತಾರ ಸಂಬಿತ ಪಾತ್ರಾ ವಿರುದ್ಧ ದೂರು ನೀಡಿದ್ದಾರೆ. 'ಸಂಬಿತ ಜೈಲಿಗೆ ಹೋಗುತ್ತಾರೆ' ಎಂಬ ಸೋಷಿಯಲ್ ಮೀಡಿಯಾ ಪೋಸ್ಟ್​ ಅನ್ನು ಛತ್ತೀಸಗಢ ಕಾಂಗ್ರೆಸ್​ ತನ್ನ ಟ್ವಿಟರ್ ಅಕೌಂಟಿನಲ್ಲಿ ಪಿನ್ ಮಾಡಿದೆ.

  • कांग्रेस पार्टी ने ट्विटर को पत्र लिखकर झूठ फैलाने के कारण नड्डा, पात्रा, संतोष और ईरानी के ट्विटर एकाउंड सस्पेंड करने का अनुरोध किया है।@TwitterIndia इन पर भी कार्यवाई हो। pic.twitter.com/Ysi22bEfqr

    — INC Chhattisgarh (@INCChhattisgarh) May 20, 2021 " class="align-text-top noRightClick twitterSection" data=" ">

ಟೂಲ್ ಕಿಟ್​ ಎಂದರೇನು? ಏನಿರುತ್ತೆ ಇದರಲ್ಲಿ?

ಟೂಲ್ ಕಿಟ್ ಎಂಬುದು ಒಂದು ಡಿಜಿಟಲ್ ದಾಖಲಾತಿಯಾಗಿದೆ. ಸೋಷಿಯಲ್ ಮೀಡಿಯಾಗಳ ಮೂಲಕ ಇದನ್ನು ಹಂಚಿಕೊಳ್ಳಲಾಗುತ್ತದೆ. ಯಾವುದಾದರೂ ಒಂದು ನಿರ್ದಿಷ್ಟ ವಿಷಯದ ಮೇಲೆ ಟೂಲ್ ಕಿಟ್ ತಯಾರಿಸಲಾಗುತ್ತದೆ. ಇದರಲ್ಲಿ ಮುಂದೇನು ಮಾಡಬೇಕು ಎಂಬುದರ ಮಾಹಿತಿ ಇರುತ್ತದೆ. ಇನ್ನು ಆಗಾಗ ಹೊಸ ಮಾಹಿತಿಗಳನ್ನು ಇದಕ್ಕೆ ಜೋಡಿಸಲಾಗುತ್ತಿರುತ್ತದೆ. ಆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿನ ವಿಚಾರಣೆ, ಪ್ರತಿಭಟನಾಕಾರರ ಮಾಹಿತಿ, ಇದನ್ನು ಜನಾಂದೋಲನವಾಗಿ ಹೇಗೆ ಪರಿವರ್ತಿಸಬಹುದು ಎಂಬ ಬಗ್ಗೆ ಸಮಗ್ರ ಮಾರ್ಗಸೂಚಿಗಳು ಪ್ರಮುಖವಾಗಿ ಇದರಲ್ಲಿರುತ್ತವೆ. ಇದರಲ್ಲಿ ಒಂದು ನಿರ್ದಿಷ್ಟ ಕಾರ್ಯಸೂಚಿಯನ್ನು ನೀಡಿ ಅದರ ಪ್ರಕಾರವೇ ಎಲ್ಲ ಕೆಲಸಗಳನ್ನು ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್​ಗಳನ್ನು ಸಹ ಪ್ರಚಾರ ಮಾಡಲಾಗುತ್ತದೆ.

ಸರಳವಾಗಿ ಹೇಳುವುದಾದರೆ

ಸರಳ ಶಬ್ದಗಳಲ್ಲಿ ಹೇಳುವುದಾದರೆ ಇದೊಂದು ನಿರ್ದಿಷ್ಟ ವಿಷಯದ ಬಗ್ಗೆ ನೋಟ್ಸ್​ ಅಥವಾ ಡಾಕ್ಯುಮೆಂಟ್ ಇದ್ದಂತೆ. ಈ ನೋಟ್ಸ್​ ಅನ್ನು ಇಂಟರನೆಟ್​ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹಂಚಲಾಗುತ್ತದೆ. ಪ್ರತಿಭಟನೆ ಹಾಗೂ ಧರಣಿಗಳನ್ನು ಹುಟ್ಟು ಹಾಕಲು ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ. ಯಾವ ಸ್ಥಳಗಳಲ್ಲಿ ಹೆಚ್ಚು ಜನರನ್ನು ಸೇರಿಸಬಹುದು, ಯಾವೆಲ್ಲ ಘೋಷಣೆಗಳನ್ನು ಕೂಗಬಹುದು, ಸೋಷಿಯಲ್ ಮೀಡಿಯಾದಲ್ಲಿ ಯಾವ ಹ್ಯಾಶ್ ಟ್ಯಾಗ್ ಬಳಸುವುದು ಹಾಗೂ ಪ್ರತಿಭಟನೆ, ಆಂದೋಲನಗಳನ್ನು ಹೇಗೆ ಜೀವಂತವಾಗಿಡುವುದು ಮುಂತಾದ ಮಾರ್ಗಸೂಚಿಗಳು ಇದರಲ್ಲಿರುತ್ತವೆ.

Last Updated : May 21, 2021, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.