ETV Bharat / bharat

KMF Nandini: ನಂದಿನಿ ಹಾಲು ಮಾರಾಟಕ್ಕೆ ಕೇರಳದಲ್ಲಿ ವಿರೋಧ; ಮಳಿಗೆ ವಿಸ್ತರಿಸದಿರಲು ಕೆಎಂಎಫ್ ನಿರ್ಧಾರ - ಕರ್ನಾಟಕದಲ್ಲಿ ಅಮುಲ್ ಹಾಲು ಮತ್ತು ಮೊಸರು

ನೆರೆಯ ಕೇರಳ ರಾಜ್ಯದಲ್ಲಿ ನಂದಿನಿ ಮಾರಾಟ ಮಳಿಗೆಗಳನ್ನು ವಿಸ್ತರಿಸದಿರಲು ಕೆಎಂಎಫ್​ ನಿರ್ಧರಿಸಿದೆ.

milk war kerala karnataka
milk war kerala karnataka
author img

By

Published : Jun 28, 2023, 4:07 PM IST

ಬೆಂಗಳೂರು : ನೆರೆಯ ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ವಿಸ್ತರಿಸದಿರಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಿರ್ಧರಿಸಿದೆ ಎಂದು ಮೂಲಗಳು ಬುಧವಾರ ಖಚಿತಪಡಿಸಿವೆ. ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕೆಎಂಎಫ್ ಈ ನಿರ್ಧಾರ ತಳೆದಿದೆ. ಕೇರಳದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಜೆ. ಚಿಂಚು ರಾಣಿ ಮತ್ತು ಕೆಎಂಎಫ್ ಸಿಇಒ ನಡುವೆ ನಡೆದ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಂದಿನಿ ಹಾಲು ಮತ್ತು ಹಾಲು ಸಂಬಂಧಿತ ಉತ್ಪನ್ನಗಳು ಕೇರಳದಾದ್ಯಂತ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಈ ಬ್ರ್ಯಾಂಡ್ ವಿಶೇಷವಾಗಿ ಕರ್ನಾಟಕದ ಗಡಿ ಜಿಲ್ಲೆಗಳಾದ ಕಾಸರಗೋಡುಗಳಲ್ಲಿ ಜನಪ್ರಿಯವಾಗಿದೆ. ಆದರೆ ಕೆಎಂಎಫ್​ನ ಈ ನಿರ್ಧಾರದಿಂದ ಕೇರಳ ಗಡಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ನಿರಾಸೆಯಾಗಿದೆ. ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಹಾಲು ಒಕ್ಕೂಟದ ಹಾಲು, ಮೊಸರು ಮತ್ತು ಇತರ ಡೈರಿ ಉತ್ಪನ್ನಗಳ ಮಾರಾಟಕ್ಕೆ ಈ ಹಿಂದೆ ಕೇರಳ ಆಕ್ಷೇಪ ವ್ಯಕ್ತಪಡಿಸಿತ್ತು. ನಂದಿನಿ ಉತ್ಪನ್ನಗಳ ಮಾರಾಟದಿಂದ ಕೇರಳ ಹಾಲು ಸಹಕಾರಿ ಹಾಲು ಮಾರಾಟ ಒಕ್ಕೂಟ (ಕೆಸಿಎಂಎಂಎಫ್) ಬ್ರ್ಯಾಂಡ್ ಮಿಲ್ಮಾ ಮೇಲೆ ಪರಿಣಾಮ ಬೀರುತ್ತಿದೆ ಎಂದು ನೆರೆಯ ರಾಜ್ಯ ದೂರಿದೆ.

ಕರ್ನಾಟಕದಲ್ಲಿ ಅಮುಲ್ ಹಾಲು ಮತ್ತು ಮೊಸರು ಮಾರಾಟಕ್ಕೆ ಅನುಮತಿ ನೀಡಿದ ಹಿಂದಿನ ಬಿಜೆಪಿ ಸರ್ಕಾರದ ಕ್ರಮವನ್ನು ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಈ ಹಿಂದೆ ಬಲವಾಗಿ ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಧಾನಸಭೆ ಚುನಾವಣೆ ವೇಳೆ ಈ ವಿಚಾರ ಪ್ರಸ್ತಾಪವಾಗಿತ್ತು ಹಾಗೂ ಬಿಜೆಪಿ ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಿತ್ತು. ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸಲು ಅಂದಿನ ಬಿಜೆಪಿ ಸರ್ಕಾರ ಸಂಚು ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ನಂದಿನಿಯ ಹಾಲನ್ನು ಕೇರಳದಲ್ಲಿ ಮಾರಾಟ ಮಾಡಿದರೆ, ಕೇರಳದ ರೈತರು ಉತ್ಪಾದಿಸಿ ಮಿಲ್ಮಾಗೆ ಮಾರಾಟ ಮಾಡುವ ಹಾಲನ್ನು ಏನು ಮಾಡುವುದು ಎಂದು ಕೆಸಿಎಂಎಂಎಫ್ ಪ್ರಶ್ನಿಸಿತ್ತು. ರಾಷ್ಟ್ರೀಯ ಡೈರಿ ಕ್ಷೇತ್ರದ ಸಹಕಾರಿ ಚೌಕಟ್ಟನ್ನು ಕರ್ನಾಟಕ ಉಲ್ಲಂಘಿಸಿದೆ ಎಂದೂ ಅದು ಆಕ್ಷೇಪಿಸಿತ್ತು.

ಮಿಲ್ಮಾ ಬಗ್ಗೆ ಒಂದಿಷ್ಟು ಮಾಹಿತಿ: ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (KCMMF) ಅನ್ನು 1980 ರಲ್ಲಿ ರಾಷ್ಟ್ರೀಯ ಡೈರಿ ಕಾರ್ಯಕ್ರಮ 'ಆಪರೇಷನ್ ಫ್ಲಡ್' ನ ರಾಜ್ಯ ಸಂಯೋಜಕವಾಗಿ ರಚಿಸಲಾಯಿತು. ಇದು ಮೂರು ಹಂತದ ಸಂಸ್ಥೆಯಾಗಿದೆ. ತಳಮಟ್ಟದಲ್ಲಿ MILMA 31.03.2022 ರಂತೆ 3071 ಆನಂದ್ ಮಾದರಿ ಪ್ರಾಥಮಿಕ ಹಾಲು ಸಹಕಾರ ಸಂಘಗಳನ್ನು ಹೊಂದಿದ್ದು, 15.2 ಲಕ್ಷ ಸ್ಥಳೀಯ ಹಾಲು ಉತ್ಪಾದಕ ರೈತರು ಸದಸ್ಯರಾಗಿದ್ದಾರೆ.

ಕೆಎಂಎಫ್​ ಬಗ್ಗೆ ಒಂದಿಷ್ಟು ಮಾಹಿತಿ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KMF) ಕರ್ನಾಟಕದಲ್ಲಿ ಡೈರಿ ಸಹಕಾರ ಚಳುವಳಿಯ ಅಪೆಕ್ಸ್ ಬಾಡಿ ಆಗಿದೆ. ಇದು ದೇಶದ ಡೈರಿ ಸಹಕಾರಿ ಸಂಘಗಳಲ್ಲಿ ಎರಡನೇ ಅತಿ ದೊಡ್ಡ ಡೈರಿ ಸಹಕಾರಿಯಾಗಿದೆ. ದಕ್ಷಿಣ ಭಾರತದಲ್ಲಿ ಇದು ಸಂಗ್ರಹಣೆ ಮತ್ತು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ ಒಕ್ಕೂಟದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.

ಇದನ್ನೂ ಓದಿ : Covid-19: ಕೊರೊನಾವೈರಸ್​ ಚೀನಾದ ಜೈವಿಕ ಅಸ್ತ್ರ: ಸ್ಫೋಟಕ ಮಾಹಿತಿ ಬಹಿರಂಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.