ETV Bharat / bharat

ಖ್ಯಾತ ಗಾಯಕ ಕುನ್ನತ್ ಹಠಾತ್​ ನಿಧನ.. ಸಾವಿಗೂ ಮುನ್ನದ ವಿಡಿಯೋ ವೈರಲ್​

ಕೋಲ್ಕತ್ತಾದ ರವೀಂದ್ರ ಸದನದಲ್ಲಿ ದಿ. ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೆಕೆ ಕುಟುಂಬ ಸದಸ್ಯರು ಅಂತಿಮ ನಮನ ಸಲ್ಲಿಸಿದರು.

KK last video before death at kolkata concert watch
ಕೃಷ್ಣಕುಮಾರ್ ಕುನ್ನತ್ ಕೊನೆಯ ಕ್ಷಣದ ವಿಡಿಯೋ ವೈರಲ್​
author img

By

Published : Jun 1, 2022, 5:00 PM IST

ಹೈದರಾಬಾದ್​/ಕೋಲ್ಕತ್ತಾ: ಮಂಗಳವಾರ ಹಠಾತ್​ ನಿಧನರಾದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರ ಕೊನೆಯ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋಲ್ಕತ್ತಾ ಸಂಗೀತ ಕಾರ್ಯಕ್ರಮದಿಂದ ಅವಸರದಲ್ಲೇ ಅವರು ಹೊರಗ ಬರುತ್ತಿರುವ ದೃಶ್ಯಗಳು ಇದಾಗಿದ್ದು, ಕೆಕೆ ಸಾವಿಗೂ ಮುನ್ನದ ವಿಡಿಯೋ ಎಂದು ಹೇಳಲಾಗುತ್ತಿದೆ.

ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ಹಾಡಿರುವ ಕೃಷ್ಣಕುಮಾರ್ ಕುನ್ನತ್ ಚಿತ್ರರಂಗದಲ್ಲಿ ಕೆಕೆ ಎಂದೇ ಜನಪ್ರಿಯರಾಗಿದ್ದರು. 53 ವರ್ಷದ ಕೆಕೆ ಗುರುದಾಸ್​ ಕಾಲೇಜಿನಲ್ಲಿ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಆದರೆ, ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಹೀಗಾಗಿ ತಕ್ಷಣವೇ ಅವರು ಅಲ್ಲಿಂದ ಹೊರಟು ಬಂದಿದ್ದಾರೆ. ಈ ವೇಳೆ ಕೆಲವರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿವೆ.

ಮಾರ್ಗ ಮಧ್ಯೆವೇ ಕೊನೆಯುಸಿರು: ಸಂಗೀತ ಕಾರ್ಯಕ್ರಮದ ನಡೆಯುತ್ತಿದ್ದ ಆಡಿಟೋರಿಯಂನಲ್ಲಿ ಅಸ್ವಸ್ಥಗೊಂಡಿದ್ದ ಕೆಕೆ ಅವರನ್ನು ತಕ್ಷಣವೇ ಸಿಎಂಆರ್‌ಐ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆದಲ್ಲೇ ಕೊನೆಯುಸಿರೆಳೆದರು. ಇವರ ನಿಧನಕ್ಕೆ ಎದೆನೋವು ಜೊತೆಗೆ ಪಾರ್ಶ್ವವಾಯು ಸಹ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೇ, ಕೆಕೆ ತಲೆಯ ಮೇಲೆ ಕೆಲ ಗಾಯದ ಗುರುತುಗಳು ಸಹ ಕಂಡುಬಂದಿವೆ ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಪಾರ್ಥಿವ ಶರೀರಕ್ಕೆ ಸಿಎಂ ಮಮತಾ ಬ್ಯಾನರ್ಜಿ ನಮನ

ಗಣ್ಯರಿಂದ ಅಂತಿಮ ನಮನ: ಎಸ್​ಎಸ್​ಎಂಕೆ ಆಸ್ಪತ್ರೆಯಲ್ಲಿ ಕೆಕೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂತರ ಆಸ್ಪತ್ರೆಯಿಂದ ರವೀಂದ್ರ ಸದನದಲ್ಲಿ ಪಾರ್ಥಿವ ಶರೀರ ಸ್ಥಳಂತರಿಸಲಾಗಿದ್ದು, ಇಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೆಕೆ ಕುಟುಂಬ ಸದಸ್ಯರು ಹಾಗೂ ಪ್ರಮುಖರು ಅಂತಿಮ ಗೌರವ ಸಲ್ಲಿಸಿದರು.

ಇದನ್ನೂ ಓದಿ: 'ಜೀವನ ಎಷ್ಟೊಂದು ದುರ್ಬಲ ಎಂಬುದಕ್ಕೆ ಮತ್ತೊಂದು ಉದಾಹರಣೆ': ಗಾಯಕ ಕೆಕೆ ನಿಧನಕ್ಕೆ ಗಣ್ಯರ ಕಂಬನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.