ETV Bharat / bharat

ಲಖನೌದಲ್ಲಿ ಕಿಸಾನ್​ ಪಂಚಾಯತ್​.. ರೈತ ಹೋರಾಟದ ಬಗ್ಗೆ ನಿರ್ಧಾರ: ರಾಕೇಶ್​ ಟಿಕಾಯತ್​ - eco garden kisan mahapanchayat

ಕಿಸಾನ್​ ಮೋರ್ಚಾದ ಮುಖಂಡ ರಾಕೇಶ್​ ಟಿಕಾಯತ್​(Kisan Morcha leader Rakesh tikait) ನೇತೃತ್ವದಲ್ಲಿ ಉತ್ತರಪ್ರದೇಶದ ಲಖನೌದಲ್ಲಿ ಕಿಸಾನ್​ ಪಂಚಾಯತ್(kisan mahapanchayat) ಆಯೋಜಿಸಲಾಗಿದೆ. ರಾಜ್ಯದ ಮತ್ತು ದೇಶದ ವಿವಿಧೆಡೆಯಿಂದ ರೈತರು, ರೈತ ನಾಯಕರು ಸಭೆಗೆ ಆಗಮಿಸುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್​ ಒದಗಿಸಿದ್ದಾರೆ.

author img

By

Published : Nov 22, 2021, 12:22 PM IST

ಲಖನೌ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂಪಡೆಯಲಾಗುವುದು ಎಂದು ಘೋಷಿಸಿದರೂ, ರೈತರು ತಮ್ಮ ಪ್ರಮುಖ ಬೇಡಿಕೆಗಳನ್ನು ಪೂರೈಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಅದರ ಭಾಗವಾಗಿ ಉತ್ತರ ಪ್ರದೇಶದ ಲಖನೌದ ಇಕೋ ಗಾರ್ಡನ್​ನಲ್ಲಿ ಮಂಗಳವಾರ ಕಿಸಾನ್ ಪಂಚಾಯತ್​ ಸಭೆಯನ್ನು(kisan mahapanchayat) ಕರೆಯಲಾಗಿದೆ.

ಕಿಸಾನ್​ ಮೋರ್ಚಾದ ಮುಖಂಡ ರಾಕೇಶ್​ ಟಿಕಾಯತ್​ ನೇತೃತ್ವದಲ್ಲಿ ಈ ಸಭೆ (Kisan Morcha leader Rakesh tikait)ಆಯೋಜಿಸಲಾಗಿದೆ. ರಾಜ್ಯದ ಮತ್ತು ದೇಶದ ವಿವಿಧೆಡೆಯಿಂದ ರೈತರು, ರೈತ ನಾಯಕರು ಸಭೆಗೆ ಆಗಮಿಸುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್​ ಒದಗಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರ ಸಂಸತ್ತಿನಲ್ಲಿ ವಾಪಸ್​ ಪಡೆಯಬೇಕು. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ(ಎಂಎಸ್​ಪಿ)ಯ ಬಗ್ಗೆ ಕಾನೂನು ರೂಪಿಸಬೇಕು. ಹೋರಾಟದ ವೇಳೆ ಮೃತಪಟ್ಟ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಲಾಗಿದೆ ಎಂದು ರೈತ ಹೋರಾಟದ ನಾಯಕ ರಾಕೇಶ್​ ಟಿಕಾಯತ್​ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.