ETV Bharat / bharat

ವಿವಾದಕ್ಕೀಡಾದ ಕಿರಣ್ ಖೇರ್ 'ದೇಣಿಗೆ' ವಿಚಾರ: ​ ವೆಂಟಿಲೇಟರ್​ ಖರೀದಿಗೆ 1 ಕೋಟಿ ನೀಡಿದ್ದ ನಟಿ - MPLADS

ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಕ್ಕೆ ಒಂದು ಕೋಟಿ ರೂಪಾಯಿಯನ್ನು ಸಂಸದರ ನಿಧಿಯಿಂದ ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಕಿರಣ್ ಖೇರ್​​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Kirron Kher allocates money from MPLADS for ventilators in Chandigarh
ವಿವಾದವಾದ ನಟಿ, ಸಂಸದೆ ಕಿರಣ್ ಖೇರ್​ ವೆಂಟಿಲೇಟರ್​ ಖರೀದಿಗೆ ನೀಡಿದ್ದ 1 ಕೋಟಿ 'ದೇಣಿಗೆ'..!
author img

By

Published : Apr 27, 2021, 10:03 PM IST

Updated : Apr 27, 2021, 10:52 PM IST

ಮುಂಬೈ: ಬಿಜೆಪಿ ಸಂಸದೆ ಮತ್ತು ಹಿರಿಯ ನಟಿ ಕಿರಣ್ ಕೇರ್ ತಮ್ಮ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ(ಎಂಪಿಎಲ್‌ಡಿಎಸ್) ಒಂದು ಕೋಟಿ ರೂಪಾಯಿಯನ್ನು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಕ್ಕೆ ವೆಂಟೀಲೇಟರ್​ಗಳ ಖರೀದಿಗೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.

ನನ್ನ ಹೃದಯದ ಭರವಸೆ ಮತ್ತು ಪ್ರಾರ್ಥನೆಯೊಂದಿಗೆ ಕೋವಿಡ್ ರೋಗಿಗಳಿಗೆ ತಕ್ಷಣವೇ ನೆರವಾಗಲು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಕ್ಕೆ ಒಂದು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಕಿರಣ್ ಖೇರ್​​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  • Some people mentioned that i should have written allocated (they are right). It is an allocation of the funds from MPLADS. Thank you for pointing it out. https://t.co/tEAPkcVo7V

    — Kirron Kher (@KirronKherBJP) April 27, 2021 " class="align-text-top noRightClick twitterSection" data=" ">

ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಕೆಲವು ಮಂದಿ ಕಿರಣ್ ಖೇರ್​ ದೇಣಿಗೆ ಎಂಬ ಪದ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕೆ ತಮ್ಮ ಜೇಬಿನಿಂದ ಹಣವನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿರಣ್ ಖೇರ್​ಗೆ ಹಂಚಿಕೆ ಮತ್ತು ದೇಣಿಗೆ ನಡುವಿನ ವ್ಯತ್ಯಾಸ ತಿಳಿದಿಲ್ಲ. ನಿಮ್ಮ ವೈಯಕ್ತಿಕ ಸಂಪನ್ಮೂಲಗಳಿಂದ ನೀಡಿದಾಗ ಅದು ದೇಣಿಗೆಯಾಗುತ್ತದೆ, ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿಯಿಂದ ನೀಡಿದ್ದಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, #resign_PM_Modi ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

"ಎಂಪಿಎಲ್ಎಡಿಎಸ್ ದಾನ ಮಾಡಲು ಅದು ಖಾಸಗಿಯಲ್ಲ. ಅದು ಸಾರ್ವಜನಿಕ ಕಲ್ಯಾಣಕ್ಕಾಗಿ ಬಿಡುಗಡೆ ಮಾಡುವ ಸಾರ್ವಜನಿಕ ಹಣ. ನೀವು ಬೇಗನೇ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇವೆ" ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಣ್ ಖೇರ್​ ' ಕೆಲವರು ಹೇಳಿರುವುದು ನಿಜ. ಅದು ಹಂಚಿಕೆ ಎಂದಾಗಬೇಕು. ಈ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಸದ್ಯಕ್ಕೆ ಕಿರಣ್ ಖೇರ್ ಪ್ರಸ್ತುತ ಪ್ಲಾಸ್ಮಾ ಕೋಶಗಳ ಕ್ಯಾನ್ಸರ್ ಆಗಿರುವ ಮಲ್ಟಿಪಲ್ ಮೈಲೋಮಾದೊಂದಿಗೆ ಹೋರಾಡುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : Apr 27, 2021, 10:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.