ETV Bharat / bharat

ಸುಪ್ರೀಂ ಮಾಜಿ ನ್ಯಾಯಮೂರ್ತಿ ರಾಜ್ಯಪಾಲರಾಗಿ ನೇಮಕ..  ಟೀಕಾಕಾರರಿಗೆ ಕೇಂದ್ರ ಕಾನೂನು ಸಚಿವರ ತಿರುಗೇಟು - ETV Bharat kannada News

ಸುಪ್ರೀಂ ಕೋರ್ಟ್​ ಮಾಜಿ ನ್ಯಾಯಮೂರ್ತಿ ರಾಜ್ಯಪಾಲರಾಗಿ ನೇಮಕ - ಪ್ರತಿಪಕ್ಷಗಳಿಂದ ಟೀಕೆ - ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಪ್ರತಿಕ್ರಿಯೆ

Union Law Minister Kiren Rijiju
ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು
author img

By

Published : Feb 13, 2023, 2:47 PM IST

ನವದೆಹಲಿ : ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿಯೊಬ್ಬರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ರಾಜ್ಯಪಾಲರಾಗಿ ನೇಮಿಸಿದ್ದರು. ಈ ಕುರಿತು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿ ಪ್ರಶ್ನಿಸಿದ್ದವು. ಇದಕ್ಕೆ ಪ್ರಕಿಯಿಸಿರುವ ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಅವರು ತಮ್ಮ ಟ್ವೀಟ್​ ಮೂಲಕ ಯಾರ ಹೆಸರನ್ನು ತೆಗೆದುಕೊಳ್ಳದೇ ನೇರ ವಾಗ್ದಾಳಿ ನಡೆಸಿದ್ದಾರೆ . "ಇಡೀ ಪರಿಸರ ವ್ಯವಸ್ಥೆ" ಮತ್ತೊಮ್ಮೆ ಈ ವಿಷಯದ ಬಗ್ಗೆ "ಪೂರ್ಣ ಸ್ವಿಂಗ್" ನಲ್ಲಿದೆ ಎಂದು ಹೇಳಿದ್ದಾರೆ.

ರಾಜ್ಯಪಾಲರ ನೇಮಕದ ಮೇಲೆ ಇಡೀ ಪರಿಸರ ವ್ಯವಸ್ಥೆಯು ಮತ್ತೊಮ್ಮೆ ಪೂರ್ಣ ಸ್ವಿಂಗ್ ಆಗುತ್ತಿದೆ. ಅವರು ಭಾರತವನ್ನು ತಮ್ಮ ವೈಯಕ್ತಿಕ ಉಂಬಳಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಈಗ, ಭಾರತ ಸಂವಿಧಾನದ ನಿಬಂಧನೆಗಳ ಪ್ರಕಾರ ಭಾರತವು ಭಾರತದ ಜನರಿಂದ ಮಾರ್ಗದರ್ಶನ ಪಡೆಯುತ್ತಿದೆ ಎಂದು ಕಿರಣ್​ ರಿಜಿಜು ಅವರು ಟ್ವೀಟ್​ ಮಾಡಿದ್ದಾರೆ.

  • The Whole Eco-system is once again in full swing on the appointment of a Governor.
    They should better understand that, they can no more treat India as their personal fiefdom. Now, India will be guided by the people of India as per the provisions of the Constitution of India.

    — Kiren Rijiju (@KirenRijiju) February 12, 2023 " class="align-text-top noRightClick twitterSection" data=" ">

2019 ರಲ್ಲಿ ಇಡೀ ದೇಶವೇ ಕಾದು ಕುಳಿತ್ತಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪಿನ ಮತ್ತು ತ್ರಿವಳಿ ತಲಾಖ್​ನಂತ ಪ್ರಮುಖ ಮತ್ತು ಯಾವುದೇ ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಪೀಠದಲ್ಲಿ ನಿವೃತ್ತ ನ್ಯಾಯಾಧೀಶ ಎಸ್. ಅಬ್ದುಲ್​ ನಜೀರ್​ ಅವರು ಭಾಗವಾಗಿದ್ದರು. ಇವರ ದಕ್ಷ , ಪ್ರಾಮಾಣಿಕತೆಯನ್ನು ಪರಿಗಣಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಭಾನುವಾರ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ಎಸ್. ಅಬ್ದುಲ್​ ನಜೀರ್​ ಅವರು ಸುಪ್ರೀಂಕೋರ್ಟ್​ನಲ್ಲಿ 2017 ರಿಂದ 2023 ರವರೆಗೆ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತ್ತೊಂದು ಹೆಮ್ಮೆಯ ವಿಷಯ ಏನೆಂದರೆ ನಜೀರ್​ ಅವರು ಮೂಲತಃ ಕರ್ನಾಟಕದ ಮೂಡಬಿದಿರೆಯ ಬೆಳುವಾಯಿಯವರು.

ಕಳೆದ ತಿಂಗಳ ಜನವರಿ 4 ರಂದು ನಜೀರ್​ ಅವರು ನಿವೃತ್ತಿಯಾಗಿದ್ದರು. ಅದಾಗಿ ಕೇವಲ ಒಂದು ತಿಂಗಳ ನಂತರದಲ್ಲೇ ಆಂಧ್ರದ ರಾಜ್ಯಪಾಲರಾಗಿ ನೇಮಕವಾಗಿರುವುದು ಗಮನಾರ್ಹ. ನಿವೃತ್ತಿಯ ನಂತರ ಸರ್ಕಾರ ದಿಂದ ಯಾವುದೇ ಒಂದು ಹುದ್ದೆಗೆ ನೇಮಕ ಮಾಡಲ್ಪಟ್ಟ ಮತ್ತು ಪ್ರಮುಖ ತೀಪುಗಳಾದ ಅಯೋಧ್ಯೆ ಭೂ ಹಕ್ಕು ವಿವಾದದ ತೀರ್ಪು ನೀಡಿದ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳ ಪೈಕಿ ನಜೀರ್​ ಅವರು ಮೂರನೇಯವರಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಿಎಂ ಬೊಮ್ಮಾಯಿ ಅಭಿನಂದನೆ : ಇನ್ನು, ಅಂಧ್ರಪ್ರದೇಶದ ನೂತನ ರಾಜ್ಯಪಾಲರಾದ ಎಸ್​. ಅಬ್ದುಲ್​ ನಜೀರ್​ ಅವರಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಅಭಿನಂದನೆ ಸಲ್ಲಿಸಿದ್ದಾರೆ. ನೂತನವಾಗಿ ಆಂದ್ರ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಹೆಮ್ಮೆಯ ಕನ್ನಡಿಗ ಶ್ರೀ ಎಸ್‌. ಅಬ್ದುಲ್ ನಜೀರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಮೂಲತಃ ಮಂಗಳೂರಿನ ಬೆಳುವಾಯಿಯವರಾದ ಇವರು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದರು. ಇದೀಗ ರಾಜ್ಯಪಾಲರಾಗಿದ್ದು ಇವರಿಗೆ ಅಭಿನಂದನೆಗಳು ಎಂದು ಬೊಮ್ಮಾಯಿ ಮತ್ತು ನಳೀನ್​ ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ :12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.