ಬೈಕುಂತ್ಪುರ(ಛತ್ತೀಸ್ಗಢ): ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿರುವುದಕ್ಕಿಂತಲೂ ಹೆಚ್ಚಾಗಿ ಮನೆ ಅಥವಾ ತಮ್ಮ ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿರುವುದೇ ಹೆಚ್ಚು. ಬಹುತೇಕ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡು ಬರುವ ದೃಶ್ಯ ಇದಾಗಿದೆ. ಸದ್ಯ ನಾವು ಹೇಳುತ್ತಿರುವ ಸ್ಟೋರಿ ಕೂಡ ಇದೇ ವಿಷಯಕ್ಕೆ ಸಂಬಂಧಪಟ್ಟಿದೆ.
ಛತ್ತೀಸ್ಗಢದ ಕೊರಿಯಾದ ಬೈಕುಂತ್ಪುರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಅವರ ಸಂಬಂಧಿಕರು ಸ್ಟ್ರೇಚರ್ನಲ್ಲಿ ವೈದ್ಯರ ನಿವಾಸಕ್ಕೆ ರೋಗಿ ಕರೆದುಕೊಂಡು ಹೋಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಸ್ಪತ್ರೆಯ ಸಿವಿಲ್ ಸರ್ಜನ್ ಕೆ.ಎಲ್ ಧ್ರುವ, ರೋಗಿಗೆ ಪ್ರಮುಖ ವೈದ್ಯರಿಂದ ಚಿಕಿತ್ಸೆ ನೀಡಬೇಕೆಂದು ಕುಟುಂಬಸ್ಥರು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟಾಲಿನ್ ಸರ್ಕಾರಕ್ಕೆ ಒಂದು ವರ್ಷ: ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಉಚಿತ ಉಪಾಹಾರ ಯೋಜನೆ ಘೋಷಣೆ
ಈ ಬಗ್ಗೆ ನಾನು ವಿಚಾರಣೆ ನಡೆಸಿದ್ದೇನೆ. ಕುಟುಂಬಸ್ಥರು ರೋಗಿ ಜೊತೆ ಮಧ್ಯಾಹ್ನ 1:30ಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ, ಮುಖ್ಯ ವೈದ್ಯರಿಂದ ರೋಗಿ ಪರೀಕ್ಷೆ ಮಾಡುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಯಾರಿಗೂ ಹೇಳದೆ ಸ್ಟ್ರೆಚರ್ನಲ್ಲಿ ವೈದ್ಯರ ನಿವಾಸಕ್ಕೆ ರೋಗಿಯನ್ನ ಕರೆದೊಯ್ದಿದ್ದಾರೆ. ಅಲ್ಲಿಯೇ ಅವರನ್ನ ಪರೀಕ್ಷೆಗೊಳಪಡಿಸಿರುವ ವೈದ್ಯರು, ಆಸ್ಪತ್ರೆಯಲ್ಲಿ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೆ ಒಪಿಡಿ 1 ಗಂಟೆಗೆ ಬಂದ್ ಮಾಡಲಾಗುತ್ತದೆ. ಆದರೆ, ಮಧ್ಯಾಹ್ನ 1:30ಕ್ಕೆ ಈ ಘಟನೆ ಸಂಭವಿಸಿದೆ. ನಾನು ಮಧ್ಯಾಹ್ನ 2:30ರವರೆಗೂ ಆಸ್ಪತ್ರೆಯಲ್ಲಿದ್ರೂ, ನನಗೆ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.