ETV Bharat / bharat

ಶೀಲ ಶಂಕಿಸಿ ಪತ್ನಿ ಕೊಂದ.. ಮಕ್ಕಳನ್ನೂ ಬಿಡಲಿಲ್ಲ ಪಾಪಿ !

ಪತ್ನಿ ಯಾರೊಂದಿಗೋ ಫೋನ್​​ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಪ್ರಕಾಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಶೀಲ ಶಂಕಿಸಿ ಪತ್ನಿ ಕೊಂದ.. ಮಕ್ಕಳನ್ನೂ ಬಿಡಲಿಲ್ಲ ಪಾಪಿ !
killed his wife He didn't even leave the children
author img

By

Published : Sep 29, 2022, 3:37 PM IST

ಕೊಲ್ಲಾಪುರ: ಜಿಲ್ಲೆಯ ಕಾಗಲ್ ನಲ್ಲಿ ತ್ರಿವಳಿ ಮರ್ಡರ್ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಶೀಲಶಂಕಿಸಿದ ಪತಿಯೇ ಆಕೆಯನ್ನು ಹಾಗೂ ತನ್ನೆರಡು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಪತಿಯನ್ನು ಪ್ರಕಾಶ ಬಾಳಾಸೋ ಮಾಳಿ (42) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ 2 ರಿಂದ ರಾತ್ರಿ 8ರ ಮಧ್ಯೆ ತನ್ನ ಇಡೀ ಕುಟುಂಬದವರನ್ನು ಆತ ಕೊಲೆ ಮಾಡಿದ್ದಾನೆ.

ಮಕ್ಕಳನ್ನು ಯಾರು ನೋಡಿಕೊಳ್ಳುವವರು ಎಂದು ಅವರನ್ನೂ ಕೊಂದ: ಲಭ್ಯ ಮಾಹಿತಿಯ ಪ್ರಕಾರ ಪ್ರಕಾಶ ಮಾಳಿ ಇಲ್ಲಿನ ಹಮಿದ್ವಾಡ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಇಲ್ಲಿನ ಕಾಳಮ್ಮವಾಡಿ ಕಾಲೋನಿ ಬಳಿಯ ತಾಪಿ ಎಂಬ ಕಟ್ಟಡದ ನೆಲ ಮಹಡಿಯಲ್ಲಿ ವಾಸವಿದ್ದರು. ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಆತ ವಾಸಿಸುತ್ತಿದ್ದ. ಆದರೆ ಪತ್ನಿಯ ಶೀಲ ಶಂಕಿಸಿ ಆತ ಆಗಾಗ ಪತ್ನಿ ಗಾಯತ್ರಿ ಮಾಳಿ (ವಯಸ್ಸು 37) ಜೊತೆ ಜಗಳ ಮಾಡುತ್ತಿದ್ದ.

Children murdered by their own father
ತಂದೆಯಿಂದಲೇ ಕೊಲೆಗೀಡಾದ ಮಕ್ಕಳು

ನಿನ್ನೆ ಕೂಡ ಆಕೆ ಯಾರೊಂದಿಗೋ ಫೋನ್​​ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಪ್ರಕಾಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆತ ಪತ್ನಿಯ ಮೃತದೇಹದ ಎದುರಿಗೇ ತುಂಬಾ ಹೊತ್ತು ಕುಳಿತಿದ್ದಾನೆ. ಅದೇ ದಿನ ಸಂಜೆ ಶಾಲೆಯಿಂದ ಹಿಂತಿರುಗಿದ ತನ್ನ ಎಂಟನೇ ತರಗತಿಯ ಪೋಲಿಯೋ ಪೀಡಿತ ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಅದೇ ರೀತಿ 11ನೇ ತರಗತಿಯಲ್ಲಿ ಓದುತ್ತಿದ್ದ ಮಗಳು ಅದಿತಿ ಮಾಲಿ (17) ರಾತ್ರಿ 8 ಗಂಟೆ ಸುಮಾರಿಗೆ ಮರಳಿ ಬಂದ ಬಳಿಕ ಆಕೆಯನ್ನೂ ಕೊಲೆ ಮಾಡಲು ಯತ್ನಿಸಿದ್ದಾನೆ. ಆಕೆ ವಿರೋಧಿಸಿ ಕಿರುಚಾಡಿದಾಗ ತಲೆಯ ಮೇಲೆ ರುಬ್ಬುವ ಕಲ್ಲು ಎತ್ತಿಹಾಕಿ ಅವಳನ್ನು ಕೊಂದಿದ್ದಾನೆ. ಇಷ್ಟೆಲ್ಲ ಘೋರ ಕೃತ್ಯ ಎಸಗಿದ ಆರೋಪಿ ಪ್ರಕಾಶ್ ಮಾಳಿ ಸ್ವತಃ ಪೊಲೀಸ್ ಠಾಣೆಗೆ ಹೋಗಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪುಷ್ಪಾ ಪಟದಾರಿ ಆತ್ಮಹತ್ಯೆ ಪ್ರಕರಣ: ಶವಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.