ಪಾಟ್ನಾ (ಬಿಹಾರ್): ಎಂಟು ವರ್ಷಗಳ ಹಿಂದೆ ಬಿಹ್ತಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಬಿಲ್ಡರ್ ಒಬ್ಬರ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಕಾರ್ತಿಕೇಯ ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸ್ಥಳೀಯ ನ್ಯಾಯಾಲಯವೊಂದರಲ್ಲಿ ನಡೆಯಲಿದೆ. ಈ ಹಿಂದೆ ದಾನಾಪುರ್ ಕೋರ್ಟ್ ಹೊರಡಿಸಿದ್ದ ಜಾಮೀನು ಸಹಿತ ವಾರಂಟ್ ಅನ್ನು ಹಿಂಪಡೆದು ಜಾಮೀನು ರಹಿತ ವಾರಂಟ್ ನೀಡುವಂತೆ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನ್ಯಾಯಾಧೀಶರು ಗೈರುಹಾಜರಾದ ಕಾರಣ ಈ ಪ್ರಕರಣದ ವಿಚಾರಣೆಯನ್ನು ಎರಡು ಬಾರಿ ಮುಂದೂಡಲಾಗಿದೆ. ಸಿಂಗ್ ವಿರುದ್ಧ ವಾರಂಟ್ ಜಾರಿಯಾದರೆ ಪೊಲೀಸರು ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಬಹುದು ಎನ್ನಲಾಗಿದೆ. ನ್ಯಾಯಾಲಯವು ಸಿಂಗ್‌ಗೆ ಸೆಪ್ಟೆಂಬರ್ 1 ರವರೆಗೆ ಜಾಮೀನು ನೀಡಿತ್ತು. ಅದರ ನಂತರ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ.
ಬಿಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಟು ವರ್ಷಗಳ ಹಿಂದೆ ಬಿಲ್ಡರ್ ರಾಜೀವ್ ರಂಜನ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜಾಮೀನು ನೀಡಬಹುದಾದ ವಾರಂಟ್‌ನಲ್ಲಿ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದು ಪೊಲೀಸರು ನಿರೀಕ್ಷಿಸಿದ್ದರು. ಆದಾಗ್ಯೂ, ದಾನಾಪುರ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಆದೇಶ ಪಡೆದ ನಂತರ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ನ್ಯಾಯಾಧೀಶರು ಲಭ್ಯವಿಲ್ಲದ ಕಾರಣ ವಿಚಾರಣೆ ಮುಂದೂಡಲಾಗಿದೆ.
ಆಗಸ್ಟ್ 16 ರಂದು ಕಾರ್ತಿಕೇಯ ಸಿಂಗ್ ಅವರು ನಿತೀಶ್ ಕುಮಾರ್ ಅವರ ಮೊದಲ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ನಂತರ ನಿತೀಶ್ ಕುಮಾರ್ ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಿದ್ದರು. ಆದರೆ, ಅಪಹರಣ ಪ್ರಕರಣದ ವಿವಾದದಿಂದಾಗಿ ಕಾರ್ತಿಕೇಯ ಅವರನ್ನು ಕಾನೂನು ಸಚಿವ ಸ್ಥಾನದಿಂದ ಕಿತ್ತೊಗೆಯಲಾಯಿತು. ನಂತರ ಅವರನ್ನು ಕಬ್ಬು ಕೈಗಾರಿಕೆಗಳ ಸಚಿವರನ್ನಾಗಿ ಮಾಡಲಾಗಿತ್ತು. ಆದರೆ, ಕೆಲವೇ ಗಂಟೆಗಳ ನಂತರ ಕಾರ್ತಿಕೇಯ ಸಿಂಗ್ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಅಪಹರಣ ಕೃತ್ಯದ ಆರೋಪಿ ಬಿಹಾರ ಸಚಿವರ ರಾಜೀನಾಮೆ