ETV Bharat / bharat

ಕಿಡ್ನಾಪ್​, ಕಾಡಿನಲ್ಲಿ ಒತ್ತೆಯಾಳು, 3 ತಿಂಗಳು ಗ್ಯಾಂಗ್​ ರೇಪ್​.. ಅತ್ಯಾಚಾರ ಸಂತ್ರಸ್ತೆಯ ಕಣ್ಣೀರ ಕಥೆ - ಗ್ಯಾಂಗ್​ ರೇಪ್,

ಮಹಿಳೆವೋರ್ವಳನ್ನು ಅಪಹರಿಸಿ ಬಳಿಕ ಕಾಡಿನಲ್ಲಿ ಒತ್ತೆಯಾಳನ್ನಾಗಿರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

mirzapur  city & states  mirzapur  uttar pradesh  mirzapur news  mirzapur molestation woman hostage  latest news crime mirzapur  mirzapur News  crime Headlines  ಮಹಿಳೆ ಮೇಲೆ ಮೂರು ತಿಂಗಳ ಸಾಮೂಹಿಕ ಅತ್ಯಾಚಾರ  ಮಿರ್ಜಾಪುರದಲ್ಲಿ ಮಹಿಳೆ ಮೇಲೆ ಮೂರು ತಿಂಗಳ ಸಾಮೂಹಿಕ ಅತ್ಯಾಚಾರ  ಮಿರ್ಜಾಪುರ ಅಪರಾಧ ಸುದ್ದಿ
ಇದು ಸಂತ್ರಸ್ತೆಯ ನೋವಿನ
author img

By

Published : Jun 28, 2021, 12:57 PM IST

ಮಿರ್ಜಾಪುರ: ಲಾಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯ ಮಹಿಳೆಯನ್ನು ಅಪಹರಿಸಿ ಮೂರು ತಿಂಗಳ ಕಾಲ ಕಾಡಿನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆಲ ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸಿ ಮೂರು ತಿಂಗಳ ಕಾಲ ಕಾಡಿನಲ್ಲಿ ಒತ್ತೆಯಾಳಾಗಿರಿಸಿದ್ದರು. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪರಿಸ್ಥಿತಿ ಹದಗೆಟ್ಟಾಗ ದುಷ್ಕರ್ಮಿಗಳು ಆಕೆಯ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಈ ವೇಳೆ ಆಕೆ ಸಾವನ್ನಪ್ಪಿದ್ದಾಳೆಂದು ದುಷ್ಕರ್ಮಿಗಳು ತಿಳಿದಿದ್ದು, ದೇಹವನ್ನು ಕಾಡಿನಲ್ಲಿ ಎಸೆದಿದ್ದಾರೆ.

ಕುರಿಗಾಹಿಗಳು ಕಾಡಿನಲ್ಲಿ ಕುರಿಗಳನ್ನು ಮೇಯಿಸಲು ಹೋದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ನೋಡಿದ್ದಾರೆ. ಕೂಡಲೇ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಂತ್ರಸ್ತೆಯನ್ನು ಪಿಎಚ್‌ಸಿ ಪಟೇರಾಗೆ ದಾಖಲಿಸಿದರು.

ಪ್ರಜ್ಞೆ ಮರಳಿ ಬಂದ ನಂತರ ಮಹಿಳೆಯನ್ನು ಆಕೆಯ ಗಂಡನಿಗೆ ಒಪ್ಪಿಸಲಾಯಿತು. ಆದರೆ ಆಕೆಯ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಉತ್ತಮ ಚಿಕಿತ್ಸೆಗಾಗಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಬಳಿಕ ಘಟನೆ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ, ಸಂಬಂಧಿಕರು ಈ ಬಗ್ಗೆ ಮುಖ್ಯಮಂತ್ರಿಗಳ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿದ್ದರು. ಈ ಕುರಿತು ಪೊಲೀಸರು ತಡರಾತ್ರಿ ಸಕ್ರಿಯರಾಗಿ ಆಸ್ಪತ್ರೆಗೆ ತಲುಪಿ ಸಂತ್ರಸ್ತೆಯಿಂದ ಘಟನೆ ಬಗ್ಗೆ ವಿಚಾರಿಸಿದರು.

ಮಾರ್ಚ್ 1 ರಂದು ಮಹಿಳೆ ನಾಪತ್ತೆಯಾಗಿದ್ದಳು. ಬಳಿಕ ಪತಿ ಲಾಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆ ಕುರಿತು ಪ್ರಕರಣ ದಾಖಲಿಸಿದ್ದರು. ಜೂನ್ 7 ರಂದು ಮಹಿಳೆ ಪತೇರಾ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕುರಿಗಾಹಿಗಳ ಮಾಹಿತಿಯ ಮೇರೆಗೆ ಆಕೆಯನ್ನು ಪೊಲೀಸರು ಅಪರಿಚಿತ ಎಂದು ಪತೇರಾ ಪಿಎಸ್‌ಸಿಗೆ ದಾಖಲಿಸಿದ್ದರು. ಸಂತ್ರಸ್ತೆಗೆ ಮತ್ತೆ ಪ್ರಜ್ಞೆ ಬಂದಾಗ ಆಕೆಯಿಂದ ಮಾಹಿತಿ ಪಡೆದರು. ಈ ಸುದ್ದಿಯನ್ನು ಮಹಿಳೆಯ ಪತಿಗೆ ತಿಳಿಸಿದರು. ಆಸ್ಪತ್ರೆಯಲ್ಲಿ ಪತಿಯನ್ನು ಗುರುತಿಸಿದ ನಂತರ ಆಕೆಯನ್ನು ಮನೆಗೆ ಕಳುಹಿಸಲಾಯಿತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 23 ರಂದು ಮಹಿಳೆಯ ಆರೋಗ್ಯವು ಹದಗೆಟ್ಟಾಗ, ಪತಿ ಆಕೆಯನ್ನು ಜಿಲ್ಲಾ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು. ಮಾರ್ಚ್ 1 ರಂದು ಹಳ್ಳಿಯ ಯುವಕನೊಬ್ಬ ಕಿಡ್ನಾಪ್​ ಮಾಡಿ ಬಳಿಕ ಕಾರಿನಲ್ಲಿ ಆಕೆಯನ್ನು ಕಾಡಿಗೆ ಕರೆದೊಯ್ದು ಒತ್ತೆಯಾಳಾಗಿಸಿಕೊಂಡಿದ್ದಾನೆ. ಅವನೊಂದಿಗೆ ಇನ್ನೂ ಮೂವರು ಕಾಮುಕರಿದ್ದರು. ಅವರೆಲ್ಲರೂ ಮೂರು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದರು. ನನ್ನ ಮೇಲೆ ಹಲ್ಲೆ ಸಹ ಮಾಡಿದರು. ಈ ವೇಳೆ ನಾನು ಮೂರ್ಛೆ ಹೋದೆ. ಬಳಿಕ ಅವರು ನಾನು ಮೃತಪಟ್ಟಿದ್ದೇನೆ ಎಂದು ಊಹಿಸಿ ನನ್ನ ದೇಹವನ್ನು ಕಾಡಿನಲ್ಲೇ ಎಸೆದು ಹೋಗಿದ್ದಾರೆ ಎಂದು ತಾನು ಅನುಭವಿಸಿದ ಚಿತ್ರಹಿಂಸೆಯ ಬಗ್ಗೆ ದೂರಿನಲ್ಲಿ ಎಳೆಎಳೆಯಾಗಿ ಉಲ್ಲೇಖಿಸಿದ್ದಾಳೆ.

ಮಹಿಳೆಯ ಪತಿಯು ಪೊಲೀಸರ ಮೇಲೆ ಅನುಮಾನ: ದೂರು ನೀಡಿದಾಗ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಸಂತ್ರಸ್ತೆಯ ಪತಿ, ಬಳಿಕ ನಾವು ಪೋರ್ಟಲ್‌ನಲ್ಲಿ ಈ ದೂರು ನೀಡಿದ್ದೆವು. ಭಾನುವಾರ ರಾತ್ರಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಅವರು ಈ ಬಗ್ಗೆ ತನಿಖೆ ನಡೆಸಲು ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ.

ಮಹಿಳಾ ಪೊಲೀಸ್​ ಠಾಣೆಯ ಉಸ್ತುವಾರಿ ಸೀಮಾ ಸಿಂಗ್ ಸಂತ್ರಸ್ತೆಯಿಂದ ಹೇಳಿಕೆ ಪಡೆದರು. ಈ ವೇಳೆ ಸಂತ್ರಸ್ತೆಯ ಪತಿ, ಘಟನೆ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾನೆ. ಸಂತ್ರಸ್ತೆ ಅತ್ಯಾಚಾರದ ಆರೋಪ ಮಾಡುತ್ತಿದ್ದಾರೆ. ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಎಸ್‌ಪಿ ಅಜಯ್ ಕುಮಾರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.