ETV Bharat / bharat

ಕಿಕ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ತಲೆಗೆ ಪೆಟ್ಟು ಬಿದ್ದು ಬಾಕ್ಸರ್​ ಸಾವು

author img

By

Published : Aug 24, 2022, 9:39 PM IST

ವಾಕೋ ಇಂಡಿಯಾ ಸೀನಿಯರ್ಸ್​​ ಹಾಗೂ ಮಾಸ್ಟರ್ಸ್​​ ಕಿಕ್​ ಬಾಕ್ಸಿಂಗ್​ನಲ್ಲಿ ಪಾಲ್ಗೊಂಡಿದ್ದ ಅರುಣಾಚಲ ಪ್ರದೇಶದ ಬಾಕ್ಸರ್​ ಮೃತಪಟ್ಟಿದ್ದಾರೆ.

kickboxer-yora-tade-died-in-chennai
ಕಿಕ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ತಲೆಗೆ ಪೆಟ್ಟು ಬಿದ್ದು ಬಾಕ್ಸರ್​ ಸಾವು

ಚೆನ್ನೈ (ತಮಿಳುನಾಡು): ಚೆನ್ನೈನಲ್ಲಿ ನಡೆಯುತ್ತಿರುವ ವಾಕೋ ಇಂಡಿಯಾ ಸೀನಿಯರ್ಸ್​​ ಹಾಗೂ ಮಾಸ್ಟರ್ಸ್​​ ಕಿಕ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ದುರಂತ ನಡೆದಿದೆ. ಪಂದ್ಯಾವಳಿಯಲ್ಲಿ ತಲೆಗೆ ಪೆಟ್ಟು ಬಿದ್ದು ಅರುಣಾಚಲ ಪ್ರದೇಶದ ಕಿಕ್​ಬಾಕ್ಸರ್​ 24 ವರ್ಷದ ಯೋರಾ ತಾಡೆ ಮೃತಪಟ್ಟಿದ್ದಾರೆ.

ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ಚಾಂಪಿಯನ್​ಶಿಪ್​ನಲ್ಲಿ ಯೋರಾ ತಾಡೆ ಕಳೆದ ಭಾನುವಾರದಿಂದ ಭಾಗವಹಿಸಿದ್ದರು. ಕಾದಾಟದ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ರಾಜೀವ್​ ಗಾಂಧಿ ಸರ್ಕಾರಿ ಜನರಲ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಎದುರಾಳಿ ಪಂಚ್​​ಗೆ ಕುಸಿದು ಬಿದ್ದು ಮೈಸೂರಿನ ಬಾಕ್ಸರ್ ಸಾವು.. ಕಿಕ್ ಬಾಕ್ಸಿಂಗ್ ವೇಳೆ ದುರ್ಘಟನೆ

ಆಸ್ಪತ್ರೆಯಲ್ಲಿ ಬ್ರೈನ್​ ಸರ್ಜರಿಗೂ ಯೋರಾ ತಾಡೆ ಒಳಗಾಗಿದ್ದರು. ಮೂರು ದಿನಗಳಿಂದ ಐಸಿಯುನಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಆದರೆ, ಮಂಗಳವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್ ನೋಡಿ 10ನೇ ತರಗತಿ ಬಾಲಕನಿಂದ ಕೊಲೆ: ವಿಚಾರಣೆಯಲ್ಲಿ ಆಘಾತಕಾರಿ ಸಂಗತಿ ಬಯಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.