ETV Bharat / bharat

ಕಾಂಗ್ರೆಸ್​ ಪಾಲಿಗೆ ಖರ್ಗೆ ಲಕ್​.. ಆರು ತಿಂಗಳ ಅಂತರದಲ್ಲಿ 'ಕೈ' ತೆಕ್ಕೆಗೆ ಎರಡು ರಾಜ್ಯಗಳು - ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಕರ್ನಾಟಕದಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದು ಮಾತ್ರವಲ್ಲದೆ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲೇ ಠಿಕಾಣಿ ಹೂಡಿದ್ದರು. ಕರ್ನಾಟಕದ ದಿಗ್ವಿಜಯ ಖರ್ಗೆ ಅವರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಈಟಿವಿ ಭಾರತ್​ನ ಅಮಿತ್ ಅಗ್ನಿಹೋತ್ರಿ ವಿಶ್ಲೇಷಣೆ ಇಲ್ಲಿದೆ.

kharge-lucky-for-congress-delivers-karnataka-after-himachal
ಕಾಂಗ್ರೆಸ್​ ಪಾಲಿಗೆ ಖರ್ಗೆ ಲಕ್​... ಆರು ತಿಂಗಳ ಅಂತರದಲ್ಲಿ 'ಕೈ' ತಕ್ಕೆಗೆ ಎರಡು ರಾಜ್ಯಗಳು!
author img

By

Published : May 14, 2023, 8:06 PM IST

Updated : May 14, 2023, 8:34 PM IST

ನವದೆಹಲಿ: ಕಳೆದ ವರ್ಷ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಹಳೆಯ ಪಕ್ಷದ ಪಾಲಿಗೆ ಲಕ್​ ತಂದಿದ್ದಾರೆ. ಅಕ್ಟೋಬರ್ 26ರಂದು ಪಕ್ಷದ ಅಧ್ಯಕರಾದ ತಕ್ಷಣವೇ ಅಖಾಡಕ್ಕೆ ಇಳಿದು ಬಿಜೆಪಿ ಆಡಳಿತವಿದ್ದ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಕೈಗೊಂಡು ಚುನಾವಣೆಯ ಮೇಲ್ವಿಚಾರಣೆ ಮಾಡಿದ್ದರು. ಡಿಸೆಂಬರ್ 8ರಂದು ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್​ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರ ಹಿಡಿಯಿತು. ಇದೀಗ ಬಿಜೆಪಿ ಆಡಳಿತದ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಮತ್ತೊಂದು ದಿಗ್ವಿಜಯ ಸಿಕ್ಕಿದೆ.

ಕರ್ನಾಟಕವು ಖರ್ಗೆ ಅವರಿಗೆ ತವರು ರಾಜ್ಯವಾಗಿರುವುದರಿಂದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕರ್ನಾಟಕದಾದ್ಯಂತ ಪ್ರಚಾರ ನಡೆಸಿದ್ದು ಮಾತ್ರವಲ್ಲದೆ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲೇ ಠಿಕಾಣಿ ಹೂಡಿದ್ದರು. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಬಣಗಳನ್ನು ಒಗ್ಗೂಡಿಸುವಲ್ಲೂ ಸಫಲರಾಗಿದ್ದರು.

''ಖಂಡಿತವಾಗಿಯೂ ಖರ್ಗೆ ಅವರು ಪಕ್ಷಕ್ಕೆ ಅದೃಷ್ಟವಂತರು. ಅವರು ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದ ಕೂಡಲೇ ಹಿಮಾಚಲ ಪ್ರದೇಶವನ್ನು ಗೆದ್ದರು. ಚುನಾವಣಾ ಹೋರಾಟದಲ್ಲಿನ ಅವರ ಅಪಾರ ಅನುಭವ ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ನೆರವಾಯಿತು. ಕರ್ನಾಟಕವು ಅವರ ತವರು ರಾಜ್ಯವಾಗಿರುವುದರಿಂದ ರಾಜ್ಯದ ಪ್ರತಿಯೊಂದು ಭಾಗ ಮತ್ತು ಅದರ ಚಲನಶೀಲತೆಯನ್ನು ತಿಳಿದಿದ್ದರು. ಅವರನ್ನು ಎಲ್ಲ ರಾಜ್ಯ ನಾಯಕರು ಗೌರವಿಸುತ್ತಾರೆ. ಹೀಗಾಗಿ ಸ್ಥಳೀಯ ತಂಡವನ್ನು ಒಗ್ಗೂಡಿಸಲು ಸಾಧ್ಯವಾಯಿತು. ಇದು ನಮ್ಮ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ'' ಎನ್ನುತ್ತಾರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ದಿಗ್ವಿಜಯ: ಅದ್ವಿತೀಯ ಸಾಧನೆಯ ಹಿಂದಿನ ರೂವಾರಿ ಇವರೇ ಅಂತೆ!

''ಖರ್ಗೆ ಅವರು 80ರ ಹರೆಯದಲ್ಲೂ ಕರ್ನಾಟಕದಾದ್ಯಂತ ಹೆಚ್ಚಿನ ಶಕ್ತಿಯಿಂದ ಪ್ರಚಾರ ಮಾಡಿದರು. ದಲಿತ ನಾಯಕರು ಸಹ ಕಾಂಗ್ರೆಸ್ ಅಧ್ಯಕ್ಷರಾಗಬಲ್ಲ ಎಂಬ ಸಕಾರಾತ್ಮಕ ಸಂದೇಶವನ್ನು ಕರ್ನಾಟಕದ ಎಸ್‌ಸಿ, ಎಸ್‌ಟಿ ಮತದಾರರಲ್ಲಿ ರವಾನಿಸಿದರು. ಮತ್ತೊಂದೆಡೆ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ" ಎಂದು ಅನ್ವರ್ ಹೇಳಿದರು.

''ಕರ್ನಾಟಕದ ಈ ಗೆಲುವು 2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಸಾಧಿಸುವ ಖರ್ಗೆ ಅವರು ಪ್ರಯತ್ನಗಳಿಗೆ ಹೊಸ ಉತ್ತೇಜನಯನ್ನು ನೀಡುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಿಮಾಚಲ ಪ್ರದೇಶದಲ್ಲಿನ ಜಯವೇ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಬಹುದು ಮತ್ತು 2024ರ ಲೋಕಸಭೆ ಕದನ ಏಕಪಕ್ಷೀಯವಾಗಿರುವುದಿಲ್ಲ ಎಂದು ತೋರಿಸಿತ್ತು. ಈಗ ಕರ್ನಾಟಕದ ಗೆಲುವು ಆ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಕರ್ನಾಟಕದ ಗೆಲುವಿನಿಂದ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಪಕ್ಷದ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತಂದಿದೆ'' ಎಂದು ತಾರಿಕ್ ಅನ್ವರ್ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ ಚುನಾವಣೆ ಕ್ಲೈಮ್ಯಾಕ್ಸ್​: ಈ ವರ್ಷಾಂತ್ಯದಲ್ಲಿ ನಡೆಯುವ 4 ರಾಜ್ಯಗಳ ಚುನಾವಣೆಗಳತ್ತ ಕಾಂಗ್ರೆಸ್ ಚಿತ್ತ

''ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಖರ್ಗೆ ಅವರು ತಂದೆಯ ಸ್ಥಾನದಲ್ಲಿದ್ದಾರೆ. ಅವರನ್ನು ಪಕ್ಷದ ಉನ್ನತ ಹುದ್ದೆಗೆ ನೇಮಿಸಿರುವುದು ದೇಶಾದ್ಯಂತ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಅವರನ್ನು ಕೇವಲ ದಲಿತ ನಾಯಕರಾಗಿ ನೋಡದೆ ಸಮಾಜದ ಎಲ್ಲ ವರ್ಗಗಳಿಗೆ ಸೇರಿದವರಾಗಿ ಜನತೆ ಕಾಣುತ್ತಾರೆ. ಅವರು ಲಿಂಗಾಯತರು ಮತ್ತು ಒಬಿಸಿಗಳಿಗೆ ಮತ್ತು ಇತರ ಸಮುದಾಯಗಳಿಗೂ ಹತ್ತಿರವಾಗಿದ್ದಾರೆ'' ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್ ತಿಳಿಸಿದರು.

ಕಾಂಗ್ರೆಸ್​ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಖರ್ಗೆ ಅವರು ನವೆಂಬರ್ 6ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ರಾಜ್ಯ ನಾಯಕರು ಸನ್ಮಾನಿಸಿದರು. ಆಗ 2023ರ ಚುನಾವಣೆ ಗೆಲುವಿನತ್ತ ಗಮನ ಹರಿಸುವಂತೆ ಖರ್ಗೆ ರಾಜ್ಯ ತಂಡಕ್ಕೆ ಸಲಹೆ ನೀಡಿದ್ದರು. ಕರ್ನಾಟಕ ಚುನಾವಣಾ ಪ್ರಚಾರದ ಸಮಯದಲ್ಲಿ ಸುಮಾರು 36 ಸಾರ್ವಜನಿಕ ಸಭೆಗಳು ಮತ್ತು ಐದು ಮಾಧ್ಯಮಗೋಷ್ಟಿಗಳನ್ನು ಉದ್ದೇಶಿಸಿ ಮಾತನಾಡಿರುವ ಖರ್ಗೆ, ಅವರು ಬಿಜೆಪಿ ಮತ್ತು ಕೇಸರಿ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ ಪ್ರಧಾನಿಯನ್ನು ಕಟುವಾಗಿ ಟೀಕಿಸಿದ್ದರು.

ಇದನ್ನೂ ಓದಿ: ದೇಶದಲ್ಲಿ 'ಕೈ' ಬಲವರ್ಧನೆಗೆ ಖರ್ಗೆ ರಣತಂತ್ರ: ಪಕ್ಷ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಏಕಕಾಲದಲ್ಲಿ ರೂಪುರೇಷೆ

Last Updated : May 14, 2023, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.