ಭೋಪಾಲ್: ಅಪ್ರಾಪ್ತ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಇತ್ತೀಚಿಗೆ ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ, ನವಜಾತ ಶಿಶುವಿನ ಆರೈಕೆ ಹಾಗೂ ಇಟ್ಟುಕೊಳ್ಳಲು ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ. ಮಗುವನ್ನು ನೋಡಿಕೊಳ್ಳಲು ಸರ್ಕಾರ ಅಥವಾ ಚೈಲ್ಡ್ ಲೈನ್ ಮತ್ತು ದತ್ತು ಪಡೆಯುವ ಸಂಸ್ಥೆಗಳಿಗೆ ಶಿಶು ಆರೈಕೆ ಮಾಡುವಂತೆ ಕುಟುಂಬ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ಅತ್ಯಾಚಾರ ಕೇಸ್ಗೆ ಸಂಬಂಧ ಪಟ್ಟಂತೆ ಪೊಲೀಸರು ವಿಚಾರಣೆ ನಡೆಸುತಿದ್ದು, ಇದೇ ಸಂದರ್ಭದಲ್ಲಿಯೇ ಸಂತ್ರಸ್ಥೆಯ ಪೋಷಕರು ನವಜಾತ ಶಿಶುವನ್ನು ತಿರಸ್ಕರಿಸಿದ್ದಾರೆ. ಅಪ್ರಾಪ್ತ ತಾಯಿ ಈಗ ಖಾಂಡ್ವಾದಲ್ಲಿರುವ ತನ್ನ ಪೋಷಕರ ಮನೆಯಲ್ಲಿ ನೆಲೆಸಿದ್ದು, ನವಜಾತ ಶಿಶುವನ್ನು ಖಾಂಡ್ವ ಮಕ್ಕಳ ಕಲ್ಯಾಣ ಸಮಿತಿ ಆರೈಕೆ ಮಾಡುತ್ತಿದೆ.
ಈ ಪ್ರಕರಣದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಾತನಾಡಿ ‘ಮಕ್ಕಳ ಕಲ್ಯಾಣ ಸಮಿತಿಯು ಸವಜಾತ ಶಿಶುವಿನ ಆರೈಕೆ ಮಾಡುತ್ತಿದ್ದು, ಅಪ್ರಾಪ್ತ ತಾಯಿ ಮತ್ತು ಆಕೆಯ ಪೋಷಕರನ್ನು ಸಂಪರ್ಕಿಸುವಂತೆ ಸಮಿತಿಯು ಚೈಲ್ಡ್ ಲೈನ್ಗೆ ಪತ್ರ ಬರೆಯಲಾಗಿದೆ. ನವಜಾತ ಶಿಶುವನ್ನು ಕುಟುಂಬಕ್ಕೆ ಹಸ್ತಾಂತರಿಸುವಾಗ ಕಾನೂನು ಕ್ರಮಗಳನ್ನು ಅನುಸರಿಸಲಾಗುವುದು. ಅವರು ನವಜಾತ ಶಿಶುವನ್ನು ಸ್ವೀಕರಿಸಲು ನಿರಾಕರಿಸಿದರೆ, ಮಗುವನ್ನು ಸ್ವೀಕರಿಸುತ್ತಿಲ್ಲ ಎಂಬ ಅರ್ಜಿಯನ್ನು ಇಲಾಖೆಗೆ ಸಲ್ಲಿಸಲು ಕೇಳುತ್ತೇವೆ. ನಂತರ ನವಜಾತ ಶಿಶುವನ್ನು ಆಡಳಿತಕ್ಕೆ ಹಸ್ತಾಂತರಿಸಲಾಗುವುದು’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಜಯ ಸಾನವಾ ಮಾಹಿತಿ ನೀಡಿದ್ದಾರೆ .
ದತ್ತು ಪಡೆಯಲು ಸಂಪರ್ಕಿಸಿ: ಮಗುವನ್ನು ದತ್ತು ಪಡೆಯಲು ಉತ್ಸುಕರಾಗಿರುವವರು ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (CARA) ಅನ್ನು ಸಂಪರ್ಕಿಸಬಹುದು. ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನಿಯಂತ್ರಿಸಲ್ಪಡುವ ಶಾಸನಬದ್ಧ ಸಂಸ್ಥೆಯಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು