ಚಂಡೀಗಢ: ಜೂನ್ 4 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಬೇಲಿದ್ದ ಖಾಲಿಸ್ತಾನ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮವು ಸಿಡ್ನಿ ಮೇಸೋನಿಕ್ ಸೆಂಟರ್‌ನಲ್ಲಿ ನಡೆಯಬೇಕಿತ್ತು. ಸ್ಥಳೀಯ ಭಾರತೀಯ ಮೂಲದ ನಿವಾಸಿಗಳು ಈ ಕಾರ್ಯಕ್ರಮವನ್ನು ವಿರೋಧಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಟಿಕೆಟ್ ಬುಕಿಂಗ್ ರದ್ದುಗೊಳಿಸಲಾಗಿದೆ. ಇಂತಹ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಭೇಟಿಯ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಜೊತೆ ಖಲಿಸ್ತಾನಿಗಳ ವಿಚಾರವನ್ನು ಪ್ರಸ್ತಾಪಿಸಿದ್ದರು.
ಕಾರ್ಯಕ್ರಮದ ಟಿಕೇಟ್ ಬುಕಿಂಗ್ ರದ್ದು: ತೀವ್ರ ವಿರೋಧ ವ್ಯಕ್ತವಾದ ಬೆನ್ನಲೆ ಸಿಡ್ನಿ ಮೇಸೋನಿಕ್ ಸೆಂಟರ್ (SMC) ವಿವಾದಾತ್ಮಕ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್‌ನ ಜನಾಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಆಸ್ಟ್ರೇಲಿಯನ್ ಮಾಧ್ಯಮಗಳ ವರದಿಯ ಪ್ರಕಾರ, ಸಿಖ್ ಫಾರ್ ಜಸ್ಟೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಬಹಿರಂಗವಾದಗಿನಿಂದ ನಿರಂತರವಾಗಿ ದೂರುಗಳು ಮತ್ತು ಬೆದರಿಕೆಗಳು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಭದ್ರತಾ ಏಜೆನ್ಸಿಗಳ ಸಲಹೆಯ ಮೇರೆಗೆ ಕಾರ್ಯಕ್ರಮದ ಟಿಕೆಟ್ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಮಾಡಿವೆ.
ಇದನ್ನೂ ಓದಿ:ಪಂಜಾಬ್ನ ಪ್ರಾಚೀನ ದೇವಾಲಯದ ಗೋಡೆ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಬರಹ
ಬುಕ್ಕಿಂಗ್ ಸಮಯದಲ್ಲಿ ಈ ಖಲಿಸ್ತಾನ್ ಘಟನೆಯ ವಿವಾದಾತ್ಮಕ ಕಾರ್ಯಕ್ರಮದ ಕುರಿತು ನಮಗೆ ಮಾಹಿತಿ ಇರಲಿಲ್ಲ, ಈ ಕುರಿತ ಹೆಚ್ಚಿನ ಚರ್ಚೆಯ ನಂತರ, ಸಿಡ್ನಿ ಮೇಸೋನಿಕ್ ಸೆಂಟರ್ ಸಮುದಾಯಕ್ಕೆ ಹಾನಿಯನ್ನುಂಟು ಮಾಡುವ ಯಾವುದೇ ಘಟನೆಯ ಭಾಗವಾಗಲು ನಾವು ಬಯಸುವುದಿಲ್ಲ ಎಂದು ಸಿಡ್ನಿ ಮೆಸೋನಿಕ್ ಸೆಂಟರ್‌ನ ವಕ್ತಾರರು ಸ್ವಷ್ಟಪಡಿಸಿದ್ದಾರೆ.
ಬ್ಯಾನರ್ಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವೈಭವೀಕರಣ - ಧರ್ಮೇಂದ್ರ ಯಾದವ್: ಸಿಖ್ ಫಾರ್ ಜಸ್ಟಿಸ್ ಅಭಿಯಾನದ ಕಾರ್ಯಕ್ರಮಕ್ಕಾಗಿ ನಿರ್ಮಿಸಲಾಗಿರುವ ಪೋಸ್ಟರ್ ಮತ್ತು ಬ್ಯಾನರ್ಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಜನರನ್ನು ವೈಭವೀಕರಿಸಿರುವ ಬಗ್ಗೆ ಧರ್ಮೇಂದ್ರ ಯಾದವ್ ಕಿಡಿಕಾರಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕಳೆದ ಐದಾರು ದಿನಗಳಿಂದ ಹಿಂದೂ ವಿರೋಧಿ ಘೋಷಣೆಗಳುಳ್ಳ ಬ್ಯಾನರ್‌ಗಳು ಕಂಡು ಬರುತ್ತಿವೆ, ಅದಕ್ಕಾಗಿ ದೂರು ದಾಖಲಿಸಿದ್ದೆವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ: ಖಲಿಸ್ತಾನಿಗಳಿಂದ ಕೃತ್ಯದ ಶಂಕೆ
ಆಸ್ಟ್ರೇಲಿಯಾದ ಮಾಧ್ಯಮ ವರದಿಗಳ ಪ್ರಕಾರ, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಸರ್ಕಾರವು ಉಭಯ ದೇಶಗಳ ನಡುವಿನ ಬಲವಾದ ಮತ್ತು ಆಳವಾದ ಬಾಂಧವ್ಯವನ್ನು ಹಾಳುಮಾಡಲು ಬಯಸುವ ಉಗ್ರಗಾಮಿ ಅಂಶಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದರು ಎಂದಿವೆ. ಖಾಲಿಸ್ತಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಈ ರೀತಿ ಅಂಶಗಳನ್ನು ಹತ್ತಿಕ್ಕಲು ಸರ್ಕಾರಗಳು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಖಲಿಸ್ತಾನ್ ಕಮಾಂಡೋ ಫೋರ್ಸ್ನ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಹತ್ಯೆ..!