ETV Bharat / bharat

ಆರು ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಫೇಲ್​; ಸೋಲೇ ಗೆಲುವಿನ ಮೆಟ್ಟಿಲೆಂದು ಏಳನೇ ಬಾರಿಗೆ ಐಪಿಎಸ್​ ಆದ ಸಾಧಕ

author img

By

Published : Feb 11, 2023, 12:36 PM IST

ಅಂದುಕೊಂಡ ಗುರಿಯನ್ನು ಸಾಧಿಸುವಾಗ ಸೋಲು ಎಂಬುದು ಸಹಜ. ಈ ಸೋಲಿನಿಂದ ಕಂಗೆಡದೇ, ಹೇಗೆ ಜಯಶಾಲಿಯಾಗಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಕೇರಳದ ಶೆಹನ್ಶಾಶ್​.

Etv Bharat
Etv Bharat

ಹೈದರಾಬಾದ್​: ಸೋಲೆ ಗೆಲುವಿನ ಮೆಟ್ಟಿಲು. ಸೋತೆನೆಂದು ಕುಗ್ಗಿ ಇಟ್ಟು ಗುರಿಯಿಂದ ಹಿಂದೆ ಸರಿಯದೇ ಸತತ ಪ್ರಯತ್ನದಿಂದ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನೋದನ್ನು ಸಾಧನೆ ಮೂಲಕ ತೋರಿಸಿದ್ದಾರೆ ಕೇರಳದ ಯುವಕ. ಹೌದು, ಬರೋಬ್ಬರಿ ಆರು ಸಲ ವಿಫಲವಾದರೂ ಏಳನೇ ಬಾರಿ ಅಂದುಕೊಂಡ ಗುರಿ ಸಾಧಿಸುವ ಐಪಿಎಸ್​ ಅಧಿಕಾರಿಯಾದ ಕೇರಳ ಯುವಕನ ಯಶೋಗಾಥೆ ಇತರರಿಗೆ ಸ್ಫೂರ್ತಿದಾಯಕ ಕಥೆಯಾಗಿದೆ.

ಕೇರಳದ ತ್ರಿಸೂರ್​ನಲ್ಲಿ ಜನಿಸಿದ ಶೆಹನ್ಶಾಹ್, ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಮೆಕಾನಿಕಲ್​ ವಿಭಾಗದಲ್ಲಿ ಬಿಟೆಕ್​ ಪದವಿ ಪಡೆದಿದ್ದರು. ಇದಾದ ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಅಥ್ಲೇಟಿಕ್ಸ್​ನಲ್ಲಿ ತರಬೇತಿ ಪಡೆತ ಇವರು 8 ವರ್ಷದಲ್ಲಿ 30 ರಾಜ್ಯ ಮತ್ತು 14 ರಾಷ್ಟ್ರ ಮಟ್ಟದ ಪದಕಗಳನ್ನು ಪಡೆದಿದ್ದರು. ಇದಾದ ಬಳಿಕ ಸಿಐಎಸ್​ಎಫ್​ನಲ್ಲಿ ಅಸಿಸ್ಟಂಟ್​ ಕಮಾಂಡೆಂಟ್​ ಆಗಿ ಸೇವೆ ಸಲ್ಲಿಸಲು ಬಳಿಕ ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆಯಲ್ಲಿ (IRPFS) ವಿಭಾಗೀಯ ಭದ್ರತಾ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಐಆರ್​ಪಿಎಫ್​ಎಸ್​ನಲ್ಲಿ ಇಂಡೋರ್​ ಮತ್ತು ಔಟ್​ಡೋರ್​ನಲ್ಲಿ ಉತ್ತಮ ಅಭ್ಯರ್ಥಿಯಾದರು. ಅಷ್ಟೇ ಅಲ್ಲದೇ, ಐಆರ್​ಪಿಎಫ್​ಎಸ್​ ತರಬೇತಿಯಲ್ಲಿ 48ನೇ ಬ್ಯಾಚ್​ನ ಉತ್ತಮ ಸಾಧನೆ ತೋರಿದರು. .

ಕನಸಿನತ್ತ ತುಡಿಯುತ್ತಿದ್ದ ಮನಸು: ಸರ್ಕಾರಿ ಕೆಲಸ ಪಡೆದು, ಇಷ್ಟೆಲ್ಲಾ ಸಾಧನೆ ಮಾಡಿದ ಬಳಿಕವೂ ತಾವು ಐಪಿಎಸ್​ ಆಗಬೇಕು ಎಂಬ ಕನಸು ಮಾತ್ರ ಶೆಹನ್ಶಾಹ್​ ಅವರನ್ನು ಕಾಡುತ್ತಲೇ ಇತ್ತು. ಇದಕ್ಕೆ ಕಾರಣ ಅವರ ಅಜ್ಜ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅಜ್ಜನನ್ನು ನೋಡಿ ಸ್ಪೂರ್ತಿಗೊಂಡಿದ್ದ ಶೆಹನ್ಶಾನ್​, ಬಾಲ್ಯದಲ್ಲೇ ಐಪಿಎಸ್​ ಅಧಿಕಾರಿಯಾಗುವ ಗುರಿ ಹೊಂದಿದ್ದರು. ಇದೇ ಕಾರಣಕ್ಕೆ ಅವರು ಹೈದರಾಬಾದ್​, ಲಕ್ನೋನಲ್ಲಿ ಸಿಐಎಸ್​ಎಫ್​ ಮಾಡುತ್ತಿದ್ದರೂ, ಯುಪಿಎಸ್​ಸಿಗೆ ತಯಾರಿ ಮಾತ್ರ ನಿಲ್ಲಿಸಿರಲಿಲ್ಲ. ಆರಂಭದಲ್ಲಿ ದಿನಕ್ಕೆ 10-12 ಗಂಟೆ ಓದುತ್ತಿದ್ದ ಶೆಹನ್ಶಾಹ್​, ಬಳಿಕ ಸಿಐಎಸ್​ಎಫ್​ ಕೆಲಸದಿಂದ ದಿನಕ್ಕೆ 4 ರಿಂದ 6 ಗಂಟೆ ಅಭ್ಯಾಸಕ್ಕೆ ಮುಂದಾದರು. ಆರು ಬಾರಿ ಮುಖ್ಯ ಪರೀಕ್ಷೆ ಬರೆದ ಇವರು ನಾಲ್ಕು ಬಾರಿ ಸಂದರ್ಶನದಲ್ಲಿ ಸಫಲವಾಗಲಿಲ್ಲ. ಹಾಗೆಂದ ಮಾತ್ರಕ್ಕೆ ಇವರು ಪ್ರಯತ್ನವನ್ನು ಕೈ ಬಿಡಲಿಲ್ಲ. ಮತ್ತೆ, ಮತ್ತೆ ಪ್ರಯತ್ನಿಸಿ, ಕಡೆಗೆ ಏಳನೇ ಪ್ರಯತ್ನದಲ್ಲಿ ಅಂದುಕೊಂಡ ಗುರಿ ಸಾಧಿಸಿದರು.

ಸೋಲಿನಿಂದ ಹೊರಬರುವವನೇ ಚಾಂಪಿಯನ್​: ತಮ್ಮ ಈ ಅವಿರಹಿತ ಪ್ರಯತ್ನ ಕುರಿತು ಮಾತನಾಡಿರುವ ಶೆಹನ್ಶಾಹ್, ಅಥ್ಲೇಟಿಕ್ಸ್​ನಲ್ಲಿ ಸೋಲು ಒಂದು ಭಾಗ. ಕ್ರೀಡಾ ಚಾಂಪಿಯನ್​ ಆದ ನನಗೆ ಇಂತಹ ಸೋಲುಗಳಿಂದ ಹೊರಬರುವುದು ಗೊತ್ತು. ಇದೇ ತತ್ವವನ್ನು ನಾನು ಯುಪಿಎಸ್​ಸಿಯಲ್ಲಿ ಅಳವಡಿಸಿಕೊಂಡೆ. ನಮ್ಮ ಕಠಿಣ ಕೆಲಸ ಮತ್ತು ಅವಿರಹಿತ ಶ್ರಮದಲ್ಲಿ ನಂಬಿಕೆ ಇಟ್ಟರೆ ಮಾತ್ರ ಯಶಸ್ಸು ಎಂದು ನಂಬಿದೆ. ಇದೇ ಕಾರಣಕ್ಕೆ ಆರು ಬಾರಿ ಸೋತರು ಏಳನೇ ಬಾರಿ 142ನೇ ರ್ಯಾಂಕ್​ ಪಡೆದೆ. ಪೊಲೀಸ್​ ಕೆಲಸದ ಬಗ್ಗೆ ಇಚ್ಛೆ ಹೊಂದಿದ್ದ ಕಾರಣ ಐಎಎಸ್​ ಸಿಗದ ಹಿನ್ನೆಲೆ ಐಪಿಎಸ್​ ಆರಿಸಿಕೊಂಡೆ. ನನ್ನ ರಾಜ್ಯದ ಜನರ ಸೇವೆಗೆ ನಾನು ಸಿದ್ಧನಾಗಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದರು.

ತಮ್ಮ ತರಬೇತಿಯಲ್ಲಿ ಯಶಸ್ವಿಯಾಗಿ ಮುಗಿಸಿರುವ ಶೆಹನ್ಶಾಹ್​ ಕೆಎಸ್​ ಇದೀಗ ತಮ್ಮ ತರಬೇತಿಯಲ್ಲಿ ಆಲ್​ ರೌಂಡರ್​ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ಶೆಹನ್ಶಾಹ್​ ಕೆಎಸ್ 74ನೇ ಆರ್​ಆರ್​ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ: ಐಪಿಎಸ್​ ಆಧಿಕಾರಿಗಳ ಸ್ಫೂರ್ತಿದಾಯಕ ಕಥೆ; ಕನಸನ್ನು ನನಸಾಗಿಸಿಕೊಂಡು ಗುರಿ ಮುಟ್ಟಿದ ಮಹಿಳಾ ಸಾಧಕಿಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.