ETV Bharat / bharat

ಕೇರಳದ ಆದಿವಾಸಿ ಜನಾಂಗದ ಮಧು ಹತ್ಯೆ ಪ್ರಕರಣ: 14 ಮಂದಿ ದೋಷಿ ಎಂದು ಪ್ರಕಟಿಸಿದ ಕೋರ್ಟ್​ - ಕೇರಳದ ಮಧು ಹತ್ಯೆ ಪ್ರಕರಣ

ಅಂಗಡಿಯೊಂದರಲ್ಲಿ ಆಹಾರ ಸಾಮಗ್ರಿ ಕಳವು ಮಾಡಿದ ಆರೋಪದ ಮೇಲೆ ಕೇರಳದ ಮಧು ಹತ್ಯೆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ.

kerala-tribal-youths-murder-case-14-found-guilty
ಕೇರಳದ ಆದಿವಾಸಿ ಜನಾಂಗದ ಮಧು ಹತ್ಯೆ ಪ್ರಕರಣ: 14 ಮಂದಿ ದೋಷಿ ಎಂದು ಪ್ರಕಟಿಸಿದ ಕೋರ್ಟ್​
author img

By

Published : Apr 4, 2023, 1:58 PM IST

Updated : Apr 4, 2023, 2:11 PM IST

ಪಾಲಕ್ಕಾಡ್ (ಕೇರಳ): ಕೇರಳದಲ್ಲಿ ಆಹಾರ ಸಾಮಗ್ರಿ ಕದ್ದ ಆರೋಪದ ಮೇಲೆ ಬುಡಕಟ್ಟು ಜನಾಂಗದ ಮಧು ಎಂಬ ಯುವಕನ ಕೊಲೆ ಪ್ರಕರಣದಲ್ಲಿ 14 ಮಂದಿ ಆರೋಪಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ನಾಳೆ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಕೋರ್ಟ್​ ಪ್ರಕಟಿಸಲಿದೆ.

2018ರ ಫೆಬ್ರವರಿ 22ರಂದು ಅಟ್ಟಪ್ಪಾಡಿಯ ಚಿಂದುಕೂರಿನ 27 ವರ್ಷದ ಮಧು ಅವರನ್ನು ಅಂಗಡಿಯೊಂದರಲ್ಲಿ ಆಹಾರ ಸಾಮಗ್ರಿ ಕಳವು ಮಾಡಿದ ಆರೋಪದ ಮೇಲೆ ಜನರ ಗುಂಪು ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ 16 ಜನರ ವಿರುದ್ಧ ಆರೋಪ ಕೇಳಿ ಬಂದಿತ್ತು. ಇದೀಗ ಮನ್ನಾರ್ಕ್ಕಾಡ್‌ನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯವು 14 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಉಳಿದ ಇಬ್ಬರನ್ನು ಖುಲಾಸೆಗೊಳಿಸಿದೆ.

ದೋಷಿಗಳು: ಈ ಪ್ರಕರಣದಲ್ಲಿ ಒಂದನೇ ಆರೋಪಿಯಾದ ಹುಸೇನ್ ಮೇಚೇರಿಲ್, ಮರಕಾರ, ಶಂಶುದ್ದೀನ್, ರಾಧಾಕೃಷ್ಣನ್, ಅಬೂಬಕ್ಕರ್, ಸಿದ್ದಿಕ್, ಉಬೈದ್, ನಜೀಬ್, ಜೈಜುಮೋನ್, ಸಜೀವ್, ಸತೀಶ್, ಬಿಜು, ಮುನೀರ್ ಸೇರಿ 14 ಜನರು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ಕೊಟ್ಟಿದೆ. ಇದೇ ವೇಳೆ, ನಾಲ್ಕನೇ ಆರೋಪಿ ಅನೀಶ್ ಹಾಗೂ 11ನೇ ಆರೋಪಿ ಅಬ್ದುಲ್ ಕರೀಂ ಅವರನ್ನು ಖುಲಾಸೆಗೊಳಿಸಲಾಗಿದೆ. ಎಲ್ಲ ಆರೋಪಿಗಳ ವಿರುದ್ಧ ಅಕ್ರಮ ಸಭೆ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಮತ್ತು ಗಾಯಗೊಳಿಸಿದ ಆರೋಪಗಳಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತೀರ್ಪು ಪ್ರಕಟಿಸುವ ದಿನವು ಮೂರು ಬಾರಿ ಮುಂದೂಡಿಕೆಯಾಗಿತ್ತು. ಇಂದು ಅಂತಿಮ ಆದೇಶ ಹೊರಡಿಸಲಾಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೇ, ಮಧು ಅವರ ತಾಯಿ ಮತ್ತು ಸಹೋದರಿಗೆ ಪೊಲೀಸರು ಭದ್ರತೆ ಕಲ್ಪಿಸಿದ್ದರು. ಈ ಬಗ್ಗೆ ಮಧು ಸಹೋದರಿ ಪ್ರತಿಕ್ರಿಯಿಸಿದ್ದು, "ಮಧುಗೆ ನ್ಯಾಯ ದೊರಕಿಸಿಕೊಡಲು ನಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಈ ಸಂದರ್ಭದಲ್ಲಿ ನಾವು ಅನೇಕ ಬೆದರಿಕೆಗಳನ್ನು ಅನುಭವಿಸಿದ್ದೇವೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂದಿರುವುದು ನಮಗೆ ಸಂತೋಷವಾಗಿದೆ. ಅಪರಾಧಿಗಳಿಗೆ ಏನು ಶಿಕ್ಷೆಯಾಗಲಿದೆ ಎಂದು ಕೇಳಲು ನಾವು ಕಾಯುತ್ತಿದ್ದೇವೆ'' ಎಂದು ಹೇಳಿದರು.

ದೇಶದಲ್ಲಿ ಸದ್ದು ಮಾಡಿದ್ದ ಕೊಲೆ ಕೇಸ್: ಆದಿವಾಸಿ ಜನಾಂಗದ ಮಲ್ಲನ್ ಮತ್ತು ಮಲ್ಲಿ ದಂಪತಿಯ ಪುತ್ರ ಮಧುವನ್ನು ಕಳ್ಳನೆಂದು ಆರೋಪಿಸಿ ಜನರ ಗುಂಪು ಹಲ್ಲೆ ಮಾಡಿತ್ತು. ಕೆಲ ಆರೋಪಿಗಳು ಮಧುವನ್ನು ಹಿಡಿದು ಥಳಿಸಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೆ, ಮಧುವಿನ ಚೀಲದಲ್ಲಿ ಅಕ್ಕಿ ಮತ್ತು ಕೊತ್ತಂಬರಿ ಪುಡಿ ಸಿಕ್ಕಿತ್ತು. ಹೀಗಾಗಿ ಹಸಿವಿನ ಕಾರಣ ಇವುಗಳನ್ನು ಮಧು ಕದ್ದಿದ್ದ ಎಂಬುವುದು ತಿಳಿದು ಬಂದಿತ್ತು.

ಮಧುವನ್ನು ಆರೋಪಿಗಳು ಥಳಿಸಿದ ವಿಷಯ ತಿಳಿದು ಪೊಲೀಸರು ರಕ್ಷಣೆ ಮಾಡಿದ್ದರು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.ಮತ್ತೊಂದೆಡೆ, ಈ ಘಟನೆ ನಡೆದು ನಾಲ್ಕು ವರ್ಷ ಕಳೆದರೂ ವಿಚಾರಣೆ ಆರಂಭವಾಗದ ಕಾರಣ ಮಧುವಿನ ತಾಯಿ 2022ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದರಿಂದ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿ ವಿಚಾರಣೆಯನ್ನು ಚುರುಕುಗೊಳಿಸುವಂತೆ ಸೂಚಿಸಿತ್ತು. ಇಡೀ ಪ್ರಕರಣವು ದೇಶದಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ: ಯಾಸಿನ್ ಭಟ್ಕಳ್ ಸೇರಿ 10 ಜನರ ವಿರುದ್ಧ ದೋಷರೋಪ ದಾಖಲಿಸಲು ಕೋರ್ಟ್​​ ಆದೇಶ

Last Updated : Apr 4, 2023, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.