ಹೈದರಾಬಾದ್: ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದ ನೆರೆಯ ಕೇರಳದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಕಳೆದ 24 ಗಂಟೆಗಳಲ್ಲಿ 13,049 ಹೊಸ ಪ್ರಕರಣಗಳು ವರದಿಯಾಗಿವೆ. 20,004 ಜನರು ಚೇತರಿಸಿಕೊಂಡಿದ್ದಾರೆ. 105 ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 35.65 ಲಕ್ಷ ತಲುಪಿದೆ. ಇದುವರೆಗೆ ಒಟ್ಟು 17,852 ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ 4,005 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 7,568 ಜನರು ಚೇತರಿಕೆ ಕಂಡಿದ್ದಾರೆ. ಮಹಾಮಾರಿಗೆ 68 ಜನರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇವಲ 39 ಪ್ರಕರಣಗಳು ದಾಖಲಾಗಿವೆ. ವೈರಸ್‌ನಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಉತ್ತರಾಖಂಡ್‌ನಲ್ಲಿಂದು ಬೆಳಿಗ್ಗೆ 6 ರಿಂದ ಆಗಸ್ಟ್ 17 ರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಘೋಷಿಸಲಾಗಿದೆ. ರಾಜ್ಯದಲ್ಲಿ 31 ಮಂದಿಗೆ ಸೋಂಕು ತಗುಲಿದೆ.
ಇತರ ರಾಜ್ಯಗಳಲ್ಲಿನ ಕೋವಿಡ್ ವಿವರ...
- ಕರ್ನಾಟಕದಲ್ಲಿ 1,186 ಹೊಸ ಪ್ರಕರಣಗಳು ವರದಿಯಾಗಿವೆ. 1,776 ಜನರು ಚೇತರಿಸಿಕೊಂಡಿದ್ದಾರೆ. 24 ಜನರು ಪ್ರಾಣ ಕಳೆದುಕೊಂಡಿದ್ದಾರೆ.
- ತಮಿಳುನಾಡಿನಲ್ಲಿ 1,929 ಸೋಂಕಿತರು ಪತ್ತೆಯಾಗಿದ್ದಾರೆ. 23 ಮಂದಿ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
- ಒಡಿಶಾದಲ್ಲಿ 886 ಮಂದಿಗೆ ಸೋಂಕು ದೃಢವಾಗಿದೆ. 66 ಜನ ಕೋವಿಡ್‌ಗೆ ಬಲಿಯಾಗಿದ್ದಾರೆ.
- ಹಿಮಾಚಲ ಪ್ರದೇಶದಲ್ಲಿ ಹೊಸದಾಗಿ 310 ಕೊರೊನಾ ಪ್ರಕರಣಗಳು ವರದಿಯಾಗಿವೆ. 185 ಜನರು ಚೇತರಿಸಿಕೊಂಡಿದ್ದರೆ, ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
- ಉತ್ತರ ಪ್ರದೇಶದಲ್ಲಿ 23 ಜನರಿಗೆ ಕೊರೊನಾ ಇರುವುದು ವರದಿಯಾಗಿವೆ. ಒಬ್ಬರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ.
- ಬಂಗಾಳದಲ್ಲಿ 557 ಪ್ರಕರಣಗಳು ದಾಖಲಾಗಿದ್ದು, 11 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.