ETV Bharat / bharat

ಗುಡ್ಡವೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯ ಮನವೊಲಿಸಿ ಪ್ರಾಣ ಕಾಪಾಡಿದ ಪೊಲೀಸ್!

ಗುಡ್ಡವನ್ನೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯನ್ನು ಕೇರಳದ ಪೊಲೀಸ್​ ಅಧಿಕಾರಿಯೊಬ್ಬರು ಆಕೆಯ ಮನಪರಿವರ್ತನೆ ಮಾಡಿ ಸುರಕ್ಷಿತವಾಗಿ ಕರೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯ ಮನವಪರಿವರ್ತಿಸಿ ಜೀವ ಉಳಿಸಿದ ಪೊಲೀಸ್​

author img

By

Published : Jun 9, 2022, 6:02 PM IST

Updated : Jun 9, 2022, 7:03 PM IST

ಇಡುಕ್ಕಿ: ಪೊಲೀಸರು ಎಂದರೆ ಹರಕುಬಾಯಿ, ಕೋಪಿಷ್ಠರು, ಮುಂಗೋಪಿಗಳು. ಜನರಿಗೆ ಕೆಟ್ಟದಾಗಿ ಬೈಯ್ಯುತ್ತಾರೆ ಎಂಬುದು ಅವರ ಮೇಲಿರುವ ಆರೋಪ. ಆದರೆ ಕೇರಳದ ಈ ಪೊಲೀಸ್ ಸಿಬ್ಬಂದಿ ಮಾತ್ರ ಇದಕ್ಕೆ ಅಪವಾದ. ಕಡಿದಾದ ಗುಡ್ಡವನ್ನೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯೊಬ್ಬಳನ್ನು ನಯವಾಗಿ ಮಾತನಾಡಿಸಿ ಆಕೆಯನ್ನು ಅಲ್ಲಿಂದ ಸುರಕ್ಷಿತವಾಗಿ ಕಾಪಾಡಿ ಕರೆ ತಂದಿದ್ದಾರೆ.

ಕೇರಳದ ಇಡುಕ್ಕಿಯ ಆದಿಮಾಲಿ ಪೊಲೀಸ್​ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಕೆ.ಎಂ.ಸಂತೋಷ್​ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯನ್ನು ರಕ್ಷಿಸಿದವರು. ಆದಿಮಾಲಿಯ ಕಡಿದಾದ ಪರ್ವತವನ್ನು ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ಬಗ್ಗೆ ಮಾಹಿತಿ ತಿಳಿದು ಅಪಾಯಕಾರಿ ಗುಡ್ಡವನ್ನು ಎಸ್​ಐ ಸಂತೋಷ್​ ಅವರ ಸಿಬ್ಬಂದಿ ಜೊತೆ ಹತ್ತಿ ಯುವತಿಯ ಬಳಿ ತೆರಳಿದ್ದಾರೆ.

ಗುಡ್ಡವೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯ ಮನವೊಲಿಸಿ ಪ್ರಾಣ ಕಾಪಾಡಿದ ಪೊಲೀಸ್!

ನಾನಿದ್ದೇನೆ ಎಂದು ಧೈರ್ಯ: ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾಗಿದ್ದ ಯುವತಿಯನ್ನು ಎಸ್​ಐ ಸಂತೋಷ್​ ದೂರದಿಂದಲೇ ಸಂತೈಸಿದ್ದಾರೆ. ಸಾವಿಗೆ ಕಾರಣ ಏನು, ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ. ಹೆದರಬೇಡ ನಾನಿದ್ದೇನೆ. ಸಾವೊಂದೇ ಸಮಸ್ಯೆಗೆ ಪರಿಹಾರ ಅಲ್ಲ ಎಂದು ಬಾಲಕಿಗೆ ಧೈರ್ಯ ತುಂಬಿದ್ದಾರೆ. ಏನೇ ಸಮಸ್ಯೆ ಇದ್ದರೂ ನಾನು ಅದನ್ನು ಬಗೆಹರಿಸಿಕೊಡುತ್ತೇನೆ. ಕೆಟ್ಟ ನಿರ್ಧಾರ ಮಾಡಬೇಡ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.

ಪೊಲೀಸ್​ ಮಾತಿನಿಂದ ನಿರ್ಧಾರ ಬದಲಿಸಿದಳು: ಪೊಲೀಸ್​ ಅಧಿಕಾರಿಯ ಮಾತಿನಿಂದ ಆತ್ಮಹತ್ಯೆ ನಿರ್ಧಾರವನ್ನು ಬದಲಿಸಿದ ಆ ಬಾಲಕಿ ಪೊಲೀಸರ ಜೊತೆ ವಾಪಸ್​ ಬಂದಿದ್ದಾಳೆ. ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯನ್ನು ದೂರದಿಂದಲೇ ಕೂತು ತಮ್ಮ ಮಾತಿನಿಂದಲೇ ಬದಲಿಸಿ ಸುರಕ್ಷಿತವಾಗಿ ಆಕೆಯನ್ನು ಕರೆತಂದ ಎಸ್​ಐ ಸಂತೋಷ್​ರಿಗೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

ಬಾಲಕಿಯ ಜೊತೆ ಪೊಲೀಸ್​ ಅಧಿಕಾರಿ ಮಾತನಾಡುತ್ತಿರುವುದನ್ನು ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದಾರೆ. ಬಾಲಕಿ ಜೊತೆ ಮಾತನಾಡಿದ ರೀತಿ, ಆಕೆಯಲ್ಲಿ ಆತ್ಮವಿಶ್ವಾಸ ಮೂಡಿಸಿದ ಪರಿ ಮತ್ತು ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಿ ಜೀವವನ್ನು ಉಳಿಸಿದ ಎಸ್​ಐ ಸಂತೋಷ್​ ಉಳಿದ ಪೊಲೀಸರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ವಿಧಾನಸೌಧದ ಮತಕೇಂದ್ರದಲ್ಲಿ ಸಕಲ ಸಿದ್ಧತೆ

Last Updated : Jun 9, 2022, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.