ETV Bharat / bharat

ಕೇರಳ ಪೊಲೀಸರಿಂದ ಸಾರ್ವಜನಿಕರಿಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮ ಅಭಿವೃದ್ಧಿ!

ಶಸ್ತ್ರಾಸ್ತ್ರ ನಿಯಮದಡಿ ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ 13 ದಿನಗಳ ಶಸ್ತ್ರಾಸ್ತ್ರ ತರಬೇತಿ ನೀಡಲು ಕೇರಳ ಪೊಲೀಸ್ ಇಲಾಖೆ ನಿರ್ಧರಿಸಿದೆ. ತರಬೇತಿ ಸಂದರ್ಭದಲ್ಲಿ ಪಠ್ಯ ಮತ್ತು ಪ್ರಯೋಗಿಕ ತರಗತಿಗಳು ಇರಲಿವೆ.

Kerala poilce to give gun handling training to civilians
ಕೇರಳ ಪೊಲೀಸರಿಂದ ಸಾರ್ವಜನಿಕರಿಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮ ಅಭಿವೃದ್ಧಿ!
author img

By

Published : Jun 7, 2022, 7:58 PM IST

ತಿರುವನಂತಪುರಂ (ಕೇರಳ): ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡುವ ಯೋಜನೆಯನ್ನು ಕೇರಳ ಪೊಲೀಸರು ಜಾರಿ ತರಲು ಮುಂದಾಗಿದ್ದಾರೆ. ಜೊತೆಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮವನ್ನೂ ಅಭಿವೃದ್ಧಿಪಡಿಸಲಾಗಿದೆ.

ಖಾಸಗಿ ವ್ಯಕ್ತಿಗಳು ಬಂದೂಕು ಲೈಸನ್ಸ್ ಪಡೆದುಕೊಂಡರೆ ಆತ್ಮರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳಬಹುದು. ಆದರೆ, ಲೈಸನ್ಸ್ ಹೊಂದಿರುವವರಲ್ಲಿ ಎಷ್ಟೋ ಮಂದಿಗೆ ಬಂದೂಕು ಸಂರಕ್ಷಣೆ ಹೇಗೆ ಮಾಡಬೇಕು ಮತ್ತು ಅದನ್ನು ಬಳಲುಸುವುದು ಹೇಗೆ ಎಂಬುವುದು ಸೇರಿದಂತೆ ಹಲವು ಪ್ರಶ್ನೆಗಳು ಕಾಡುತ್ತಿರುತ್ತವೆ. ಆದ್ದರಿಂದ ಶಸ್ತ್ರಾಸ್ತ್ರ ನಿಯಮದಡಿ ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ 13 ದಿನಗಳ ಶಸ್ತ್ರಾಸ್ತ್ರ ತರಬೇತಿ ನೀಡಲು ಕೇರಳ ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಕುರಿತು ಮಾರ್ಚ್ 23ರಂದು ರಾಜ್ಯ ಪೊಲೀಸ್​ ಮುಖ್ಯಸ್ಥ ಅನಿಲ್​ ಕಾಂತ್​ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕೇರಳ ಪೊಲೀಸರಿಂದ ಸಾರ್ವಜನಿಕರಿಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮ ಅಭಿವೃದ್ಧಿ!
ಕೇರಳ ಪೊಲೀಸರಿಂದ ಸಾರ್ವಜನಿಕರಿಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮ ಅಭಿವೃದ್ಧಿ!

ಪಠ್ಯ ಹೇಗಿರುತ್ತದೆ?: ಬಂದೂಕು ತರಬೇತಿಯನ್ನು ಕ್ರಮಬದ್ಧವಾಗಿ ನೀಡಲು ಪೊಲೀಸ್ ಇಲಾಖೆ ಪಠ್ಯಕ್ರಮ ಸಿದ್ಧಪಡಿಸಿದೆ. ಇದರಲ್ಲಿ ಪಠ್ಯ ಮತ್ತು ಪ್ರಯೋಗಿಕ ತರಗತಿಗಳು ಸಹ ಇರಲಿವೆ. ಪಠ್ಯದಲ್ಲಿ ನಾಲ್ಕು ವಿಭಾಗಗಳನ್ನು ಸಂಯೋಜಿಸಲಾಗಿದೆ.

1. ಬಂದೂಕು ಮತ್ತು ಮದ್ದುಗುಂಡುಗಳ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ. 2. ಅವುಗಳ ಸಂರಕ್ಷಣೆ ಮತ್ತು ಸಾಗಣೆ. 3. ಶಸ್ತ್ರಾಸ್ತ್ರ ಕಾಯಿದೆ ಮತ್ತು ನಿಯಮಗಳ ಪ್ರಮುಖ ನಿಬಂಧನೆಗಳು. 4. ಬಂದೂಕು ಬಳಕೆ ಬಗ್ಗೆ ಮಾಹಿತಿ.. ಹೀಗೆ ಪಠ್ಯ ಇರುತ್ತದೆ. ಇದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಆರು ಸೆಷನ್ಸ್​ಗಳಲ್ಲಿ ಇರಲಿದೆ.

ಪ್ರಾಯೋಗಿಕದಲ್ಲಿ ಏನಿರುತ್ತದೆ?: ಪ್ರಾಯೋಗಿಕ ಅವಧಿಗಳಲ್ಲಿ ಗುಂಡು ಹಾರಿಸುವ ತರಬೇತಿ ಮತ್ತು ಅದರ ಕಾರ್ಯ ವಿಧಾನಗಳಿಗೆ ಸಿದ್ಧತೆ, ಗುಂಡು ಹಾರಿಸುವ ಅಭ್ಯಾಸ ಮತ್ತು ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಫೈರಿಂಗ್ ತರಬೇತಿ ಎರಡು ಅವಧಿಗಳಲ್ಲಿ ನಡೆಯಲಿದೆ.

ಒಟ್ಟಾರೆ 13 ದಿನಗಳ ತರಬೇತಿ: ಪಠ್ಯ ಮತ್ತು ಪ್ರಾಯೋಗಿಕ ಸೇರಿ ಒಟ್ಟು 13 ದಿನಗಳ ತರಬೇತಿ ಇದಾಗಿದೆ. ಇದರಲ್ಲಿ 6 ದಿನಗಳು ಪಠ್ಯ, 5 ದಿನಗಳು ಪ್ರಾಯೋಗಿಕ ತರಬೇತಿ ಹಾಗೂ 2 ದಿನಗಳ ಕಾಲ ಫೈರಿಂಗ್ ಪರೀಕ್ಷೆ ಹಾಗೂ ಲಿಖಿತ ಪರಬೇತಿ ಇರುತ್ತದೆ. ಇದಕ್ಕೆ 25 ಸಾವಿರ ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಪ್ರತಿ ಜನವರಿ, ಏಪ್ರಿಲ್​, ಜುಲೈ ಹಾಗೂ ಅಕ್ಟೋಬರ್​ನಲ್ಲಿ ಈ ತರಬೇತಿ ನಡೆಸಲು ಉದ್ದೇಶಿಸಲಾಗಿದೆ.

ಬಂದೂಕು ವಾಪಸ್​ ಯಾವಾಗ?: ಖಾಸಗಿ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡಲಾಗುತ್ತದೆ. ಬಂದೂಕು ಪರವಾನಗಿ ಬೇಕಾದರೆ ತಾವು ವಾಸವಿರುವ ಜಿಲ್ಲೆಯ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆ ಸಂದರ್ಭಗಳು, ಚುನಾವಣೆಗಳು, ಸರ್ಕಾರವು ಸೂಚನೆ ನೀಡಿದಾಗಲೆಲ್ಲಾ ಬಂದೂಕನ್ನು ಅಧಿಕಾರಿಗಳಿಗೆ ಒಪ್ಪಿಸಬೇಕಾಗುತ್ತದೆ.

ಇದನ್ನೂ ಓದಿ: ಗ್ರಾಹಕರೇ ಎಚ್ಚರ: 55 ಸಾವಿರ ಸಾಲಕ್ಕೆ 2 ಲಕ್ಷ ರೂ. ಕಟ್ಟಿದರೂ ಯುವತಿಗೆ 76 ನಂಬರ್​​ಗಳಿಂದ ಅಶ್ಲೀಲ ಚಿತ್ರಗಳ ರವಾನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.