ETV Bharat / bharat

ಪರವಾನಿಗೆ ಇಲ್ಲದ ಬಂದೂಕು : ಹಂದಿಗೆ ಹೊಡೆದಿದ್ದ ಗುಂಡು ಬೇಟೆಗಾರನಿಗೆ ತಗುಲಿ ಸಾವು - ಪರವಾನಗಿಯಿಲ್ಲದ ಬಂದೂಕು ಬಳಕೆ

ಮೂವರು ಹಂದಿಯ ಬೇಟೆಗೆ ತೆರಳಿದ ವೇಳೆ ಹಂದಿಗೆ ಹಾರಿಸಿದ ಗುಂಡು ಇರ್ಷಾದ್​ ಎಂಬಾತನ ಹೊಟ್ಟೆಗೆ ತಗುಲಿ ಸಾವನ್ನಪ್ಪಿದ್ದಾನೆ. ಸಹಚರರು ಆತನನ್ನು ಆಸ್ಪತ್ರೆಗೆ ದಾಕಲಿಸಿದ್ದರಾದರೂ, ಇರ್ಷಾದ್​ ಮೃತಪಟ್ಟಿದ್ದಾನೆ..

Man shot dead during pig hunt in Malappuram
ಹಂದಿಗೆ ಹೊಡೆದ ಗುಂಡು ಬೇಟೆಗಾರನ ಸಾವು
author img

By

Published : May 30, 2022, 1:37 PM IST

ಮಲಪ್ಪುರಂ : ಹಂದಿ ಬೇಟೆಯಲ್ಲಿ ಗುಂಡು ಹಾರಿಸಿದ ವೇಳೆ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮೃತರನ್ನು ಮಲಪ್ಪುರಂ ಜಿಲ್ಲೆಯ ಚಟ್ಟಿಪ್ಪರಂಬು ಮೂಲದ ಇರ್ಷಾದ್ (27) ಎಂದು ಗುರುತಿಸಲಾಗಿದೆ.

ಇರ್ಷಾದ್ ತನ್ನ ಇಬ್ಬರು ಸಹಚರರೊಂದಿಗೆ ಸೋಮವಾರ ಹಂದಿ ಬೇಟೆಗೆ ತೆರಳಿದ್ದ. ಬೇಟೆಯಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮೃತನ ಇಬ್ಬರು ಸಹಚರರನ್ನು ಸನೀಶ್ ಮತ್ತು ಅಕ್ಬರ್ ಅಲಿ ಎಂದು ಗುರುತಿಸಲಾಗಿದೆ. ಸಾವಿನ ವರದಿಯ ನಂತರ ಪ್ರಸ್ತುತ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಭಾನುವಾರ ಮಧ್ಯಾಹ್ನ 3 ಗಂಟೆಗೆ ಇರ್ಷಾದ್‌ ಸಾವನ್ನಪ್ಪಿದ್ದಾನೆ. ಈ ಮೂವರು ಚಟ್ಟಿಪರಂಬುವಿನ ಚೆಂಗೊತ್ತೂರು ರಸ್ತೆ ಬಳಿಯ ವ್ಯಕ್ತಿಯೊಬ್ಬನ ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದರು. ಹಂದಿಗೆ ಗುಂಡು ಹಾರಿಸುವಾಗ ಆಕಸ್ಮಿಕವಾಗಿ ಇರ್ಷಾದ್ ಹೊಟ್ಟೆಗೆ ಗುಂಡು ತಗುಲಿದೆ ಎಂದು ತಿಳಿದು ಬಂದಿದೆ.

ಗುಂಡು ತಗುಲಿದ ಇರ್ಷಾದ್​ನನ್ನು ಸನೀಶ್ ಮತ್ತು ಅಕ್ಬರ್ ಅಲಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೇಟೆಗೆ ಬಳಸಿದ ಬಂದೂಕಿಗೆ ಪರವಾನಿಗೆ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಹಲಸು ಮೇಳಕ್ಕೆ ಬಂದ ಇಬ್ಬರು ಸಮುದ್ರಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.