ತಿರುವನಂತಪುರಂ (ಕೇರಳ): ಇಲ್ಲಿನ ನಿವಾಸಿ ಶಫಿ ವಿಕ್ರಮನ್ ಕೋವಿಡ್ - ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ವಾಸ್ತವಿಕವಾಗಿ 16 ದೇಶಗಳ ವಿವಿಧ ವಿಶ್ವವಿದ್ಯಾಲಯಗಳಿಂದ 145 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ವಿಕ್ರಮನ್, ಲಾಕ್‌ಡೌನ್ ಸಮಯದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕೋರ್ಸ್ಗಳಿಗೆ ಅಪ್ಲಿಕೇಶನ್ ಹಾಕುವುದನ್ನು ಪ್ರಾರಂಭಿಸಿದ್ದರು. ಈ ಕೋರ್ಸ್‌ಗಳನ್ನು ಪಡೆಯಲು ಇವರು ನಿತ್ಯ ಇಪ್ಪತ್ತು ಗಂಟೆಗಳಿಗಿಂತ ಹೆಚ್ಚು ಸಮಯ ಮೀಸಲಿಡುತ್ತಿದ್ದರಂತೆ.
ಲಾಕ್‌ಡೌನ್ ಸಮಯದಲ್ಲಿ ಜನರು ಹೊರಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೀಗಾಗಿ ನಾನು ಆ ಸಮಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಂಡ ವಿಕ್ರಮನ್, ಕೆಲವು ಕೋರ್ಸ್‌ಗಳು ಆರಂಭಿಕ ಹಂತದಲ್ಲಿ ತುಂಬಾ ಕಠಿಣವಾಗಿದ್ದವು. ಆದರೆ, ಒಂದರ ನಂತರ ಒಂದನ್ನು ಪೂರ್ಣಗೊಳಿಸಿದ ಬಳಿಕ ಮುಂದೆ ಹೋಗಲು ಅವಕಾಶವಿದೆ ಎಂದು ಅರಿತುಕೊಂಡೆ ಎಂದು ಹೇಳಿಕೊಂಡಿದ್ದಾರೆ.
ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ನಾವು ಶೈಕ್ಷಣಿಕವಾಗಿ ಪ್ರತಿಭಾವಂತರಾಗಿರಬೇಕು ಅಥವಾ ಸಾಕಷ್ಟು ಬುದ್ಧಿವಂತರಾಗಿರಬೇಕು. ಪ್ರತಿಯೊಬ್ಬರೂ ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ವಿಕ್ರಮನ್.
ಈ ಕೋರ್ಸ್‌ಗಳಿಗೂ ಹಣ ಪಾವತಿಸಬೇಕಾಗುತ್ತದೆ. ಆದರೆ ನನ್ನ ಅದೃಷ್ಟ, ನಾನು ಯಾವುದೇ ಕೋರ್ಸ್‌ಗಳಿಗೂ ಹಣ ನೀಡಿಲ್ಲ ಎಂದು ಹೇಳಿದ್ದಾರೆ ವಿಕ್ರಮನ್.
ಈ ಕೋರ್ಸ್‌ಗಳು ಶುಲ್ಕ ರಹಿತವಾಗಿ ಸಿಗುತ್ತಿರದಿದ್ದರೆ, ನಾನು ಈ ಕೋರ್ಸ್‌ಗಳನ್ನು ಪೂರ್ಣಗೊಳಿಸುತ್ತಿರಲಿಲ್ಲ ಎಂದು ಖಚಿತವಾಗಿತ್ತು. ಏಕೆಂದರೆ ನಾವು ಅಷ್ಟು ಶುಲ್ಕವನ್ನು ಭರಿಸುವುದು ಕಷ್ಟವಾಗಿತ್ತು ಎಂದು ವಿಕ್ರಮನ್ ಹೇಳಿದ್ದಾರೆ.