ETV Bharat / bharat

ತಂದೆ ಜೊತೆ ಶಬರಿಮಲೆಗೆ ತೆರಳಲು ಬಾಲಕಿಗೆ ಕೇರಳ ಹೈಕೋರ್ಟ್‌ ಅನುಮತಿ - 9 ವರ್ಷದ ಬಾಲಕಿ

ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆಯಲು ಅನುಮತಿ ಕೋರಿದ್ದ 9 ವರ್ಷದ ಬಾಲಕಿಯ ಮನವಿಯನ್ನು ಕೇರಳ ಹೈಕೋರ್ಟ್‌ ಪುರಸ್ಕರಿಸಿ ಮಧ್ಯಂತರ ಆದೇಶ ನೀಡಿದೆ.

Kerala HC allows minor girl to accompany father to Sabarimala for darshan
ತಂದೆ ಜೊತೆ ಶಬರಿಮಲೆಗೆ ತೆರಳಲು 9 ವರ್ಷದ ಬಾಲಕಿಗೆ ಕೇರಳ ಹೈಕೋರ್ಟ್‌ ಅನುಮತಿ
author img

By

Published : Aug 17, 2021, 2:01 PM IST

ಕೊಚ್ಚಿ(ಕೇರಳ): ಬಾಲಕಿಯೊಬ್ಬಳಿಗೆ ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕೇರಳ ಹೈಕೋರ್ಟ್ ಇಂದು ಅನುಮತಿಸಿತು. ಇದೇ ವರ್ಷದ ಏಪ್ರಿಲ್‌ ತಿಂಗಳಲ್ಲಿ ನೀಡಿದ್ದ ಆದೇಶ ಹಾಗೂ ಆಗಸ್ಟ್ 4 ರಂದು ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್‌ ಈ ಅನುಮತಿ ನೀಡಿದೆ.

9 ವರ್ಷದ ಬಾಲಕಿ ತನ್ನ ತಂದೆಯ ಜೊತೆ ಆಗಸ್ಟ್ 23 ರಂದು ಶಬರಿಮಲೆಗೆ ಹೋಗಲು ಅನುಮತಿ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಳು.

ಬಾಲಕಿಯ ಪರ ವಾದ ಮಂಡಿಸಿದ ವಕೀಲರು, ಆಕೆ 10 ವರ್ಷ ತುಂಬುವ ಮುನ್ನವೇ ಶಬರಿಮಲೆಗೆ ಹೋಗಲು ಬಯಸಿದ್ದಾಳೆ. ಈ ಅವಕಾಶ ತಪ್ಪಿದಲ್ಲಿ ಮುಂದಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.