ತಿರುವನಂತಪುರಂ: ದಿನವೊಂದರಲ್ಲಿ 41,953 ಹೊಸ ಕೋವಿಡ್ ಕೇಸ್ ಹಾಗೂ 58 ಸಾವು ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಮೇ 8ರಿಂದ ಮೇ 16ರವರೆಗೆ 9 ದಿನಗಳ ಲಾಕ್ಡೌನ್ ಘೋಷಿಸಿದೆ.
ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಲಾಕ್ಡೌನ್ನಂತಹ ಕಠಿಣ ನಿರ್ಬಂಧಗಳು ರಾಜ್ಯದಲ್ಲಿ ಜಾರಿಯಲ್ಲಿದ್ದು, ವೈರಸ್ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಲಾಕ್ಡೌನ್ ಹೇರಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಕೊರೊನಾ 2ನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: ಆರೋಗ್ಯ ಇಲಾಖೆಗೆ ಹೆಚ್ಚಿದ ಒತ್ತಡ
ಕೋವಿಡ್ ಕೇಸ್ಗಳ ಸಂಖ್ಯೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ನಂತರ ಮೂರನೇ ಸ್ಥಾನದಲ್ಲಿ ಕೇರಳ ಇದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 17,43,932ಕ್ಕೆ ಏರಿಕೆಯಾಗಿದ್ದು, ಈವರೆಗೆ 5,565 ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. 3,75,658 ಕೇಸ್ಗಳು ಸಕ್ರಿಯವಾಗಿವೆ.