ETV Bharat / bharat

ವಯನಾಡ್​ನ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿ ಎಸ್‌ಎಫ್‌ಐ ಕಾರ್ಯಕರ್ತರ ದಾಂಧಲೆ - ವಯನಾಡ್​ನಲ್ಲಿ ರಾಹುಲ್ ಗಾಂಧಿ ಕಚೇರಿ ಮೇಲೆ ದಾಳಿ

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿ ರಾಹುಲ್​ ಗಾಂಧಿ ಗೆದ್ದಿದ್ದರು.

Congress MP Rahul Gandhi's office in Wayanad vandalised.
ವಯನಾಡ್​ನಲ್ಲಿ ರಾಹುಲ್ ಗಾಂಧಿ ಕಚೇರಿ ಧ್ವಂಸ
author img

By

Published : Jun 24, 2022, 5:50 PM IST

Updated : Jun 24, 2022, 6:14 PM IST

ವಯನಾಡ್​ (ಕೇರಳ): ಕೇರಳದ ವಯನಾಡ್​ನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಪರಿಸರ ಸೂಕ್ಷ್ಮ ವಲಯ ಸಂಬಂಧ ರಾಹುಲ್​ ಗಾಂಧಿ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಆರೋಪಿಸಿ ಎಸ್‌ಎಫ್‌ಐ ಕಾರ್ಯಕರ್ತರು ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಕಚೇರಿಗೆ ನುಗ್ಗಿದಾಗ ಪೊಲೀಸರೂ ಸ್ಥಳದಲ್ಲಿದ್ದರು. ಆದರೆ, ಪೊಲೀಸರನ್ನೇ ತಳ್ಳಿಕೊಂಡು ಕಾರ್ಯಕರ್ತರು ಕಚೇರಿಯ ಗೋಡೆಗಳನ್ನೇರಿ ಒಳ ನುಗ್ಗಿದ್ದಾರೆ. ಪೀಠೋಪಕರಣ ಹಾಗೂ ಕಚೇರಿಯನ್ನು ಧ್ವಂಸ ಮಾಡಿದ್ದಲ್ಲದೇ, ಎಸ್‌ಎಫ್‌ಐ ಧ್ವಜಗಳನ್ನು ಹಾರಿಸಿದ್ದಾರೆ.

  • One can watch the goons holding the flags of SFI as they climb the wall of Sh. Rahul Gandhi Ji's Wayanad office and vandalises it.

    But, remember, Congress's ideology is engraved in India, it will not be damaged by your poor attempt. pic.twitter.com/0MACGutLrM

    — Indian Youth Congress (@IYC) June 24, 2022 " class="align-text-top noRightClick twitterSection" data=" ">

"ಘಟನೆಯ ಹಿಂದೆ ಸಿಪಿಎಂ ಕೈವಾಡವಿದೆ. ಎಸ್‌ಎಫ್‌ಐ ಕಾರ್ಯಕರ್ತರನ್ನು ಅವರು ಕಳುಹಿಸಿದ್ದಾರೆ" ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ. ಕಚೇರಿಯ ಸಿಬ್ಬಂದಿ ಆಗಸ್ಟಿನ್ ಪುಲ್ಪಲ್ಲಿ ಅವರಿಗೂ ಎಸ್‌ಎಫ್‌ಐ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಶೂನಿಂದ ಶಿಕ್ಷಕಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಾಂಶುಪಾಲ

Last Updated : Jun 24, 2022, 6:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.