ETV Bharat / bharat

ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡಲ್ಲ: ಕೇರಳ ಸಿಎಂ ಸ್ಪಷ್ಟನೆ - ಕನ್ನಡ ಹೆಸರಿನ ಗ್ರಾಮ

ಯಾವುದೇ ಕಾರಣಕ್ಕೂ ಗಡಿಯಲ್ಲಿನ ಹೆಸರು ಬದಲಾವಣೆ ಮಾಡುವ ನಿರ್ಧಾರ ನಾವು ತೆಗೆದುಕೊಂಡಿಲ್ಲ ಎಂದು ಕೇರಳ ಸಿಎಂ ಸ್ಪಷ್ಟನೆ ನೀಡಿದ್ದಾರೆ.

Kerala CM
Kerala CM
author img

By

Published : Jun 29, 2021, 8:26 PM IST

ತಿರುವನಂತಪುರಂ(ಕೇರಳ): ನೆರೆಯ ಕೇರಳ ರಾಜ್ಯ ಗಡಿ ಪ್ರದೇಶಗಳಲ್ಲಿನ ಕೆಲವೊಂದು ಗ್ರಾಮಗಳ ಹೆಸರು ಮರುನಾಮರಣ ಮಾಡಲಿದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಖುದ್ದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸ್ಪಷ್ಟನೆ ನೀಡಿದ್ದಾರೆ.

ಕೇರಳ ಸರ್ಕಾರ ರಾಜ್ಯದ ಯಾವುದೇ ಸ್ಥಳದ ಹೆಸರು ಬದಲಾವಣೆ ಮಾಡಲು ಯೋಚನೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸುವ ಮೂಲಕ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ನೆರೆಯ ಕೇರಳ ರಾಜ್ಯವು ತನ್ನ ಗಡಿ ಪ್ರದೇಶಗಳಲ್ಲಿನ ಕೆಲವು ಗ್ರಾಮಗಳನ್ನು ಮರುನಾಮಕರಣ ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.

ಪ್ರಮುಖವಾಗಿ ಕಾಸರಗೋಡಿನ ಗಡಿ ಜಿಲ್ಲೆಯಲ್ಲಿನ ಗ್ರಾಮಗಳನ್ನ ಮಲಯಾಳಿಯ ಕೆಲವೊಂದು ಹೆಸರು ಮರುನಾಮಕರಣ ಮಾಡುವ ಉಹಾಪೋಹ ಎಂದಿತ್ತು. ತಿರುವನಂತಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ, ಕೇರಳ ಸರ್ಕಾರ ಯಾವುದೇ ಸ್ಥಳದ ಹೆಸರು ಬದಲಾವಣೆ ಮಾಡಲು ನಿರ್ಧರಿಸಿಲ್ಲ. ಇದರ ಹಿಂದೆ ಏನಾದರೂ ಪಿತೂರಿ ಇದೆಯೇ ಎಂದು ಪರಿಶೀಲಿಸಬೇಕಾಗಿದೆ. ಯಾವುದೇ ವರದಿ ಪ್ರಕಟಗೊಳ್ಳುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು ಎಂದಿದ್ದಾರೆ.

ಕರ್ನಾಟಕ ಸಿಎಂರಿಂದ ಪತ್ರ ಬಂದಿಲ್ಲ

ಗಡಿಯಲ್ಲಿನ ಗ್ರಾಮಗಳ ಹೆಸರು ಬದಲಾವಣೆ ಮಾಡುವ ವದಂತಿ ಹಬ್ಬುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಕೇರಳ ಸಿಎಂಗೆ ಪತ್ರ ಬರೆದಿದ್ದರು. ಆದರೆ, ಆ ಪತ್ರ ನನಗೆ ತಲುಪಿಲ್ಲ ಎಂದು ವಿಜಯನ್​ ತಿಳಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಸರಗೋಡಿನ ಜಿಲ್ಲಾಧಿಕಾರಿ ಸಹ ವರದಿ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿರಿ: ಜಿಂಕೆ ಹಿಂಡಿನ ಮೇಲೆ ಏಕಾಏಕಿ ದಾಳಿ ಮಾಡಿದ ಹುಲಿ.. ವಿಡಿಯೋ ನೋಡಿ!

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಕೂಡ ಕೇರಳ ಸಿಎಂಗೆ ಪತ್ರ ಬರೆದು, ಈ ನಿರ್ಧಾರ ಕೈಬಿಡುವಂತೆ ಮನವಿ ಮಾಡುತ್ತೇವೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.