ETV Bharat / bharat

'ಪರಿಸ್ಥಿತಿ ಆತಂಕಕಾರಿಯಾಗಿದೆ': ಕೇರಳದ 11ನೇ ತರಗತಿ ಪರೀಕ್ಷೆಗಳಿಗೆ ಸುಪ್ರೀಂಕೋರ್ಟ್ ತಡೆ - kerala exam

ರಾಜ್ಯ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಹೊಂದಿದೆ. ಆದರೆ ಕೋವಿಡ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ ಎಂದು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ಅಭಿಪ್ರಾಯಪಟ್ಟಿದೆ.

ಕೇರಳದಲ್ಲಿ 11 ನೇ ತರಗತಿಯ ಪರೀಕ್ಷೆಗಳಿಗೆ ತಡೆ
ಕೇರಳದಲ್ಲಿ 11 ನೇ ತರಗತಿಯ ಪರೀಕ್ಷೆಗಳಿಗೆ ತಡೆ
author img

By

Published : Sep 3, 2021, 4:39 PM IST

ನವದೆಹಲಿ: ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಪರಿಸ್ಥಿತಿಯಿಂದ ಆತಂಕಗೊಂಡ ಸುಪ್ರೀಂಕೋರ್ಟ್ ಇಂದು 11ನೇ ತರಗತಿಯ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ.

ಪರೀಕ್ಷೆಗಳನ್ನು ಒಂದು ವಾರದವರೆಗೆ ತಡೆಹಿಡಿಯಲು ನ್ಯಾಯಾಲಯವು ಆದೇಶಿಸಿದೆ. ಕೇರಳದಲ್ಲಿ ಆತಂಕಕಾರಿ ಸನ್ನಿವೇಶವಿದೆ. ರಾಜ್ಯವು ದೇಶದಲ್ಲಿ ಶೇ. 70ಕ್ಕಿಂತಲೂ ಹೆಚ್ಚಿನ ಕೋವಿಡ್ ಪ್ರಕರಣಗಳನ್ನು ಹೊಂದಿದೆ. ಸುಮಾರು 35,000 ದೈನಂದಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠ ಹೇಳಿದೆ.

ನ್ಯಾಯಮೂರ್ತಿ ರಾಯ್ ಅವರು ಈ ಬಗ್ಗೆ ಉಲ್ಲೇಖಿಸಿ, 'ರಾಜ್ಯವು ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಹೊಂದಿದೆ. ಆದರೆ ಕೋವಿಡ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ' ಎಂದು ಹೇಳುವ ಮೂಲಕ ಮೂಲಕ ಸಮಸ್ಯೆಯ ಗಂಭೀರತೆಯನ್ನು ಒತ್ತಿ ಹೇಳಿದರು.

'ನಾನು ಕೇರಳದ ಮುಖ್ಯ ನ್ಯಾಯಮೂರ್ತಿಯಾಗಿದ್ದೆ. ಕೇರಳವು ದೇಶದ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯ ಹೊಂದಿದೆ ಅನ್ನೋದನ್ನು ನಾನು ಹೇಳಬಲ್ಲೆ. ಅದರ ಹೊರತಾಗಿಯೂ ಕೇರಳವು ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ' ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.