ಕಣ್ಣೂರು(ಕೇರಳ): ಕೇರಳ ವಿಧಾನಸಭೆಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ.
ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಣ್ಣೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿದರು. ಧರ್ಮದಂ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದಾರೆ.
-
Kannur: CM Pinarayi Vijayan files his nomination as CPI(M) candidate from Dharmadam constituency for the upcoming #KeralaElections2021 pic.twitter.com/VkLVeEeb5b
— ANI (@ANI) March 15, 2021 " class="align-text-top noRightClick twitterSection" data="
">Kannur: CM Pinarayi Vijayan files his nomination as CPI(M) candidate from Dharmadam constituency for the upcoming #KeralaElections2021 pic.twitter.com/VkLVeEeb5b
— ANI (@ANI) March 15, 2021Kannur: CM Pinarayi Vijayan files his nomination as CPI(M) candidate from Dharmadam constituency for the upcoming #KeralaElections2021 pic.twitter.com/VkLVeEeb5b
— ANI (@ANI) March 15, 2021
ಇದನ್ನೂ ಓದಿ: ತೆಲಂಗಾಣ: ಎಂಎಲ್ಸಿ ಮತದಾರರ ಪಟ್ಟಿಯಲ್ಲಿ ಪಿಎಂ ಮೋದಿ ಫೋಟೊ!
ಈ ಹಿಂದೆ ಇದೇ ಕ್ಷೇತ್ರದಿಂದ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದ ಪಿಣರಾಯಿ ಮತ್ತೊಮ್ಮೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ನಿಂದ ಉಮ್ಮನ್ ಚಾಂಡಿ ಸಿಎಂ ಅಭ್ಯರ್ಥಿಯಾಗಿ ಪುತುಪ್ಪಲ್ಲಿಯಿಂದ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಮೆಟ್ರೋಮ್ಯಾನ್ ಖ್ಯಾತಿಯ ಶ್ರೀಧರನ್ ಪಾಲಕ್ಕಾಡ್ನಿಂದ ಸ್ಪರ್ಧಿಸುತ್ತಿದ್ದಾರೆ.