ETV Bharat / bharat

ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಕೇರಳ ಬಾಲಕ, ಕುಡಿದು ಆಸ್ಪತ್ರೆ ಸೇರಿದ ಸ್ನೇಹಿತ

ಯೂಟ್ಯೂಬ್​ನಲ್ಲಿ ಸಾಕಷ್ಟು ವಿಡಿಯೋಗಳು ಸಿಗುತ್ತವೆ. ಅದನ್ನೇ ನಕಲು ಮಾಡಲು ಹೋಗಿ ಕೆಲವೊಮ್ಮೆ ಅಚಾತುರ್ಯಗಳು ಸಂಭವಿಸುವುದಂಟು. ಕೇರಳದಲ್ಲಿ ಆಗಿದ್ದೂ ಇದೇ.

Youtube wine
ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಕೇರಳ ಬಾಲಕ
author img

By

Published : Jul 31, 2022, 6:59 AM IST

ತಿರುವನಂತಪುರಂ: ಯೂಟ್ಯೂಬ್​ ಮಾಹಿತಿ ಕಣಜ ಎಂದೇ ಹೇಳಬಹುದು. ಅದರಲ್ಲಿನ ವಿಡಿಯೋಗಳಲ್ಲಿ ಸಿಗುವ ಮಾಹಿತಿ ಆಧರಿಸಿ ಜನರು ನಕಲು ಮಾಡುವುದು ಸಹಜ. ಹೀಗೆ ಕೇರಳದ 12 ವರ್ಷದ ಬಾಲಕನೊಬ್ಬ ಯೂಟ್ಯೂಬ್​ನಲ್ಲಿನ ವಿಡಿಯೋ ನೋಡಿ ದ್ರಾಕ್ಷಿಯ ವೈನ್​ ತಯಾರಿಸಿದ್ದಾನೆ. ಅದನ್ನು ಸೇವಿಸಿ ಆತನ ಸ್ನೇಹಿತ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾನೆ.

ದ್ರಾಕ್ಷಿ ವೈನ್​ ಸೇವಿಸಿದ ಬಾಲಕ ಚೇತರಿಸಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಸಿಕ್ಕ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈನ್​ ತಯಾರಿಸಿದ ಬಾಲಕನ ವಿಚಾರಣೆ ನಡೆಸಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ಬಾಲಕ, ತಂದೆ- ತಾಯಿ ಖರೀದಿಸಿದ ದ್ರಾಕ್ಷಿಯನ್ನು ಬಳಸಿ ವೈನ್ ತಯಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರಲ್ಲಿ ಸ್ಪಿರಿಟ್ ಅಥವಾ ಇನ್ಯಾವುದೇ ಆಲ್ಕೋಹಾಲ್​ ಪದಾರ್ಥವನ್ನು ಬಳಸಿಲ್ಲ ಎಂದು ಹೇಳಿದ್ದಾನೆ.

ದ್ರಾಕ್ಷಿಯಿಂದ ವೈನ್​ ತಯಾರಿಸಿದ ಬಳಿಕ ಅದನ್ನು ಯೂಟ್ಯೂಬ್​ನಲ್ಲಿ ತೋರಿಸಿದಂತೆ ನೆಲದಡಿ ಹೂತಿಟ್ಟು ಬಳಿಕ ಅದನ್ನು ಶಾಲೆಗೆ ತಂದಿದ್ದ. ಆತನ ಸ್ನೇಹಿತ ಅದನ್ನು ಕುಡಿದಿದ್ದಾನೆ. ಬಳಿಕ ಆ ಬಾಲಕ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮಗ ವೈನ್​ ತಯಾರಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ತಾಯಿಗೆ ಗೊತ್ತಿದ್ದರೂ ಅದನ್ನು ಅವರು ನಿರ್ಲಕ್ಷಿಸಿದ್ದರು. ಬಾಟಲಿಗಳಲ್ಲಿನ ವೈನ್ ಮಾದರಿಗಳನ್ನು ಸಂಗ್ರಹಿಸಿ ನ್ಯಾಯಾಲಯದ ಅನುಮತಿ ಪಡೆದು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈನ್‌ನಲ್ಲಿ ಸ್ಪಿರಿಟ್ ಅಥವಾ ಇನ್ನಾವುದೇ ಆಲ್ಕೋಹಾಲ್ ಬೆರೆಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗೆ ಕಳುಹಿಸಲಾಗಿದೆ. ಅಂತಹದ್ದೇನಾದರೂ ಅಂಶ ಕಂಡುಬಂದಲ್ಲಿ ಬಾಲನ್ಯಾಯ ಕಾಯಿದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ದಂಡ ತಪ್ಪಿಸಿಕೊಳ್ಳಲು ಒಂದೇ ಬೈಕಿಗೆ ಎರಡು ನಂಬರ್ ಪ್ಲೇಟ್.. ಚಾಲಾಕಿ ಈಗ ಪೊಲೀಸರ ಅತಿಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.