ಎರ್ನಾಕುಲಂ : ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಪುತ್ರನನ್ನ ವಿಚಾರಣೆಗೊಳಪಡಿಸಲು ತನಿಖಾ ತಂಡ ಮುಂದಾದ ಮೇಲೆ ಕೊಡಕರ ಕಪ್ಪು ಹಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಮಧ್ಯೆ ಚುನಾವಣೆ ವೇಳೆ ನಾಮಪತ್ರ ಹಿಂಪಡೆಯುವಂತೆ ಬಿಎಸ್ಪಿ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಹಣ ನೀಡಿದ್ದ ಹಿನ್ನೆಲೆ ಸುರೇಂದ್ರನ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಧರ್ಮಜನ್ ಮತ್ತು ಕೆ ಸುರೇಂದ್ರನ್ ಅವರ ಪುತ್ರ ಕೆ ಎಸ್ ಹರಿ ಕೃಷ್ಣನ್ ಅವರು ಫೋನ್‌ನಲ್ಲಿ ಹಲವಾರು ಬಾರಿ ಮಾತನಾಡಿದ್ದರು ಎಂದು ತನಿಖಾ ತಂಡ ಕಂಡುಕೊಂಡಿದ್ದು, ಸುರೇಂದ್ರನ್ ಅವರ ಮಗನಿಂದ ಹೇಳಿಕೆ ತೆಗೆದುಕೊಳ್ಳಲಿದೆ. ಚುನಾವಣಾ ಸಮಯದಲ್ಲಿ ಇವಬ್ಬರು ಕೊನ್ನಿಯಲ್ಲಿ ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯಗಳು ದೊರೆತಿವೆ ಎಂದು ತನಿಖಾ ತಂಡ ತಿಳಿಸಿದೆ. ಧರ್ಮಜನ್ ಅವರು ತ್ರಿಶೂರ್‌ಗೆ 9.80 ಕೋಟಿ ರೂ.ಗಳನ್ನು ಸಾಗಿಸಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೊತ್ತದಲ್ಲಿ ತ್ರಿಶೂರ್‌ನಲ್ಲಿ 6.30 ಕೋಟಿ ರೂ. ತ್ರಿಶೂರ್ ಕ್ಷೇತ್ರದಲ್ಲಿ ಚುನಾವಣಾ ಕೆಲಸಕ್ಕಾಗಿ 2 ಕೋಟಿ ರೂ. ನೀಡಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಬಾಕಿ ಮೊತ್ತವನ್ನು 3.50 ಕೋಟಿ ರೂ.ಗಳನ್ನು ಬೇರೆ ಸ್ಥಳಕ್ಕೆ ಸಾಗಿಸುವಾಗ ಕಳವು ಮಾಡಲಾಗಿದೆ.
ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯಗಳು ದೊರೆತಿವೆ ಎಂದು ತನಿಖಾ ತಂಡ ತಿಳಿಸಿದೆ. ಧರ್ಮಜನ್ ಅವರು ತ್ರಿಶೂರ್‌ಗೆ 9.80 ಕೋಟಿ ರೂ.ಗಳನ್ನು ಸಾಗಿಸಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಇದರಲ್ಲಿ 6.30 ಕೋಟಿ ರೂ. ತ್ರಿಶೂರ್ ಕ್ಷೇತ್ರದಲ್ಲಿ ಚುನಾವಣಾ ಕೆಲಸಕ್ಕಾಗಿ 2 ಕೋಟಿ ರೂ. ನೀಡಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಬಾಕಿ ಮೊತ್ತವನ್ನು 3.50 ಕೋಟಿ ರೂ.ಗಳನ್ನು ಬೇರೆ ಸ್ಥಳಕ್ಕೆ ಸಾಗಿಸುವಾಗ ಕಳವು ಮಾಡಲಾಗಿದೆ.
ತನಿಖಾ ತಂಡ ಕೆ ಸುರೇಂದ್ರನ್ ಕಾರ್ಯದರ್ಶಿ ದೀಪನ್ ಮತ್ತು ಚಾಲಕ ಲೀಬೀಶ್ ಅವರನ್ನು ಪ್ರಶ್ನಿಸಿದೆ. ಘಟನೆಗೆ ಸಂಬಂಧಿಸಿದಂತೆ ನಟ ಸುರೇಶ್ ಗೋಪಿ ಅವರ ಹೇಳಿಕೆಯನ್ನು ಸಹ ದಾಖಲಿಸಲಾಗುವುದು. ತ್ರಿಶೂರದಲ್ಲಿರುವ ಸುರೇಶ್ ಗೋಪಿ ಅವರ ಚುನಾವಣಾ ಸಮಿತಿ ಕಚೇರಿಗೆ ಧರ್ಮರಾಜನ್ ಮತ್ತು ಅವರ ಗ್ಯಾಂಗ್ ಭೇಟಿ ನೀಡಿರುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿ ಖಚಿತ ಪಡಿಸಿದ್ದರು.
ಇನ್ನು, ಮಂಜೇಶ್ವರಂನಲ್ಲಿ ತಮ್ಮ ವಿರುದ್ಧ ಸ್ಪರ್ಧೆಗಿಳಿದಿದ್ದ ಬಿಎಸ್ಪಿ ಅಭ್ಯರ್ಥಿಗೆ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯಿಸಿ ಹಣ ನೀಡಿದ್ದು ಬಹಿರಂಗಗೊಂಡ ಹಿನ್ನೆಲೆ ಸುರೇಂದ್ರನ್ ವಿರುದ್ಧ ಮಂಜೇಶ್ವರಂ ಕ್ಷೇತ್ರದ ಎಲ್‌ಡಿಎಫ್ ಅಭ್ಯರ್ಥಿ ವಿ ವಿ ರಮೇಶನ್ ಅವರು ಸುರೇಂದ್ರನ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.