ETV Bharat / bharat

ಕೃಷಿ ಕಾನೂನುಗಳ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ - ಕೇರಳದಲ್ಲಿ ಕೃಷಿ ಕಾನೂನುಗಳ ವಿರೋಧ ಸುದ್ದಿ

ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾನೂನುಗಳಿಂದ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಉಲ್ಲೇಖಿಸಿ ಈ ಕಾನೂನುಗಳ ವಿರುದ್ಧ ನಿರ್ಣಯವನ್ನು ಮಂಡಿಸಲಾಗಿದೆ.

ಕೇರಳ ವಿಧಾನಸಭೆ
ಕೇರಳ ವಿಧಾನಸಭೆ
author img

By

Published : Dec 31, 2020, 1:37 PM IST

ತಿರುವನಂತಪುರಂ: ಮೂರು ಕೃಷಿ ಕಾನೂನುಗಳಿಂದ ರೈತರು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ವಿಧಾನಸಭೆಯು ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸದನದಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಮಂಡಿಸಿದರು. ಬಳಿಕ ಇದನ್ನು ಆಡಳಿತ ಮತ್ತು ಪ್ರತಿಪಕ್ಷದ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಆದರೆ ಈ ಕಾನೂನನ್ನು ಅಸೆಂಬ್ಲಿಯಲ್ಲಿರುವ ಏಕೈಕ ಬಿಜೆಪಿ ಶಾಸಕ ಒ. ರಾಜಗೋಪಾಲ್ ಅವರು ಬೆಂಬಲಿಸಿದ್ದಾರೆ.

ನಿರ್ಣಯ ಮಂಡಿಸಿ ಮಾತನಾಡಿದ ಸಿಎಂ, "ಈ ಕಾನೂನುಗಳ ಮೂಲಕ ಕೃಷಿ ಉತ್ಪಾದನೆಯ ವ್ಯಾಪಾರವನ್ನು ಏಕಸ್ವಾಮ್ಯಗೊಳಿಸಲು ಕೇಂದ್ರವು ಕಾರ್ಪೊರೇಟ್‌ಗಳಿಗೆ ಅನುಕೂಲ ಮಾಡಿಕೊಟ್ಟಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿದೆ" ಎಂದರು.

ಈ ವೇಳೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್​ ಪರವಾಗಿ ಮಾತನಾಡಿದ ಜೋಸೆಫ್, ಕೇಂದ್ರವು ಕಾನೂನುಗಳನ್ನು ಅಂಗೀಕರಿಸಿದ ನಂತರವೂ ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಿದೆ" ಎಂದು ವಾಗ್ದಾಳಿ ನಡೆಸಿದರು.

ಓದಿ: 'ಕೊರೊನಾ ವಾರಿಯರ್​​ಗಳನ್ನ ನೆನೆಯುವ ವರ್ಷದ ಕೊನೆ ದಿನ': ಏಮ್ಸ್ ಶಂಕುಸ್ಥಾಪನೆ ಬಳಿಕ ಮೋದಿ ಮಾತು

"ಕೃಷಿ ಕಾನೂನುಗಳನ್ನು ಚರ್ಚಿಸುವ ಸಲುವಾಗಿ ವಿಶೇಷ ಅಧಿವೇಶನ ಕರೆಯಲು ಅನುಮತಿ ನೀಡಿ ಎಂದು ಗವರ್ನರ್​ಗೆ ಮನವಿ ಮಾಡಲಾಗಿತ್ತು. ಆದರೆ ಎರಡು ಬಾರಿ ಅದನ್ನು ನಿರಾಕರಿಸಲಾಗಿದೆ. ರಾಜ್ಯ ಸರ್ಕಾರವು ರಾಜ್ಯಪಾಲರ ಬಗ್ಗೆ ಮೃದುವಾದ ನಿಲುವನ್ನು ಹೊಂದಿದೆ" ಎಂದು ಜೋಸೆಫ್ ಆರೋಪಿಸಿದರು.

ಈ ಮಧ್ಯೆ ಅಸೆಂಬ್ಲಿಯಲ್ಲಿರುವ ಏಕೈಕ ಬಿಜೆಪಿ ಶಾಸಕ ಒ. ರಾಜಗೋಪಾಲ್ ಅವರು ಕೇಂದ್ರದ ಕೃಷಿ ಕಾನೂನುಗಳನ್ನು ಬೆಂಬಲಿಸಿದರು. "ಕೇಂದ್ರದ ಕೃಷಿ ಕಾನೂನುಗಳು ರೈತರನ್ನು ರಕ್ಷಿಸಲು, ಮಧ್ಯವರ್ತಿಗಳು ಮತ್ತು ಏಜೆಂಟರ ಹಸ್ತಕ್ಷೇಪವಿಲ್ಲದೆ ದೇಶದಲ್ಲಿ ಎಲ್ಲಿಯಾದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತವೆ" ಎಂದು ಅವರು ಹೇಳಿದರು. ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸುವವರು ರೈತರ ವಿರುದ್ಧವಾಗಿದ್ದಾರೆ ಎಂದು ರಾಜಗೋಪಾಲ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.