ETV Bharat / bharat

ಕೇರಳದಲ್ಲಿ ನಿಫಾ: 20 ಮಂದಿಯ ವರದಿ ನೆಗೆಟಿವ್​ - ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್

ನಿಫಾ ಹರಡಿರುವ ಪ್ರದೇಶದ ಪ್ರಾಣಿಗಳಿಂದ ಮಾದರಿ ಸಂಗ್ರಹಿಸಲು ತಜ್ಞರ ತಂಡದೊಂದಿಗೆ, ರಾಜ್ಯದ ಆರೋಗ್ಯ ಇಲಾಖೆಯು ಸಮನ್ವಯ ಸಾಧಿಸಲಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

Kerala: 20 more close contacts of young Nipah victim test negative
ಕೇರಳದಲ್ಲಿ ನಿಫಾ: 20 ಮಂದಿಯ ವರದಿ ನೆಗೆಟಿವ್​
author img

By

Published : Sep 8, 2021, 12:22 PM IST

ಕೋಯಿಕ್ಕೋಡ್ (ಕೇರಳ): ನಿಫಾ ವೈರಸ್​ನಿಂದ ಕೇರಳ ಕಂಗಾಲಾಗಿದ್ದು, ಈ ಬೆನ್ನಲ್ಲೇ ಅಲ್ಲಿನ ಆರೋಗ್ಯ ಇಲಾಖೆಯಿಂದ ನಿರಾಳವಾದ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ನಿಫಾ ವೈರಸ್​ನಿಂದ ಮೃತಪಟ್ಟಿದ್ದ 12 ವರ್ಷದ ಬಾಲಕನ ನಿಕಟ ಸಂಪರ್ಕದಲ್ಲಿದ್ದ 20 ಮಂದಿಯ ವರದಿ ನೆಗೆಟಿವ್ ಬಂದಿದೆ.

20 ಮಾದರಿಗಳಲ್ಲಿ 15 ಪುಣೆಯಲ್ಲಿ ಮತ್ತು ಕೋಯಿಕ್ಕೋಡ್ 5 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಇಲ್ಲಿಯವರೆಗೆ ಸುಮಾರು 30 ಮಂದಿಯನ್ನು ಪರೀಕ್ಷೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ಪ್ರಸ್ತುತ ಕೋಯಿಕ್ಕೋಡ್​ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಸುಮಾರು 68 ಮಂದಿಯನ್ನು ಪ್ರತ್ಯೇಕವಾಗಿ ಇಡಲಾಗಿದೆ. ಅವರ ಆರೋಗ್ಯವನ್ನು 42 ದಿನಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿಫಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಲ್ಲರ ಆರೋಗ್ಯವೂ ಸರಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಿಫಾ ಹರಡಿರುವ ಪ್ರದೇಶದ ಪ್ರಾಣಿಗಳಿಂದ ಮಾದರಿ ಸಂಗ್ರಹಿಸಲು ತಜ್ಞರ ತಂಡದೊಂದಿಗೆ, ರಾಜ್ಯದ ಆರೋಗ್ಯ ಇಲಾಖೆಯು ಸಮನ್ವಯ ಸಾಧಿಸಲಿದೆ ಎಂದು ವೀಣಾ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ಮುಂಜಾನೆ 12 ವರ್ಷದ ಬಾಲಕ ನಿಫಾ ಸೋಂಕಿನಿಂದ ಸಾವನ್ನಪ್ಪಿದ್ದ. ಆತ ನಿಫಾ ವೈರಸ್​​ನಿಂದ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯಕೀಯ ಮೂಲಗಳು ದೃಢೀಕರಿಸಿದ ನಂತರ ಕೋಯಿಕ್ಕೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಯಿತು. ಸೋಂಕು ಬೇರೆಡೆ ಹರಡದಂತೆ ತಡೆಯಲು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದರು.

ಮೃತ ಬಾಲಕನ ಮನೆಯ ಸುತ್ತಲೂ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ, ನಿರ್ಬಂಧ ವಿಧಿಸಲಾಯಿತು. ಚತಮಂಗಲಂ ಪಂಚಾಯಿತಿಯ ಪಜೂರು (ವಾರ್ಡ್ -9)ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​​ನ ತಂಡ ಹುಡುಗನ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: ನಿಫಾ ವೈರಸ್ ಭೀತಿ.. ಚಾಮರಾಜನಗರದಲ್ಲಿ ಹೈಅಲರ್ಟ್.. ಮನೆ ಮನೆಗೆ ಆಶಾ ಕಾರ್ಯಕರ್ತೆಯರ ಭೇಟಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.