ETV Bharat / bharat

ನಾಡ ಬಂದೂಕು ತಯಾರಿಕಾ ಘಟಕದ ಮೇಲೆ ದಾಳಿ: ಇಬ್ಬರು ವ್ಯಕ್ತಿಗಳ ಬಂಧನ - ನಾಡ ಬಂದೂಕು ತಯಾರಿಕಾ ಘಟಕದ ಮೇಲೆ ಕೇರಳ ಪೊಲೀಸರ ದಾಳಿ

ಖಚಿತ ಮಾಹಿತಿ ಮೆರೆಗೆ ಕೇರಳ ಪೊಲೀಸರು ಈ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಅಸೀಮ್ (44) ಸುರೇಂದ್ರನ್ (62) ಬಂಧಿತ ಆರೋಪಿಗಳಾಗಿದ್ದಾರೆ. ದೇಶಿ ನಿರ್ಮಿತ ಬಂದೂಕುಗಳನ್ನು ತಯಾರಿಸಲು ಬಳಸುವ ಉಪಕರಣಗಳು ದಾಳಿ ವೇಳೆ ಪತ್ತೆಯಾಗಿವೆ.

ನಾಡ ಬಂದೂಕು ತಯಾರಿ: ಇಬ್ಬರು ವ್ಯಕ್ತಿಗಳ ಬಂಧನ
ನಾಡ ಬಂದೂಕು ತಯಾರಿ: ಇಬ್ಬರು ವ್ಯಕ್ತಿಗಳ ಬಂಧನ
author img

By

Published : Apr 27, 2022, 8:59 AM IST

ತಿರುವನಂತಪುರ( ಕೇರಳ): ವೆಂಜರಮೂಡು ಎಂಬಲ್ಲಿನ ಮನೆಯೊಂದರ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ನಾಡ ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ಪರಿಕರಗಳನ್ನು ಇದೇ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೆರೆಗೆ ಕೇರಳ ಪೊಲೀಸರು ಈ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಅಸೀಮ್ (44) ಸುರೇಂದ್ರನ್ (62) ಬಂಧಿತ ಆರೋಪಿಗಳಾಗಿದ್ದಾರೆ. ದೇಶಿ ನಿರ್ಮಿತ ಬಂದೂಕುಗಳನ್ನು ತಯಾರಿಸಲು ಬಳಸುವ ಉಪಕರಣಗಳು ದಾಳಿ ವೇಳೆ ಪತ್ತೆಯಾಗಿದ್ದು, ಟ್ರಿಗರ್ ಗಾರ್ಡ್‌, ಗನ್ ಬ್ಯಾರೆಲ್‌, ಟ್ರಿಗರ್ ಅಸೆಂಬ್ಲಿ ಘಟಕಗಳು ಸೇರಿದಂತೆ ಹಲವು ಹಳೆಯ ಗನ್‌ಗಳ ಬಿಡಿ ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮರಗೆಲಸದ ನೆಪದಲ್ಲಿ ಇವರಿಬ್ಬರು ವಾಣಿಜ್ಯ ಆಧಾರದ ಮೇಲೆ ಬಂದೂಕುಗಳನ್ನು ತಯಾರಿಸುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇತರರ ಕೈವಾಡ ಗುರುತಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನು ಓದಿ:ಪತಿ, ನಾದಿನಿ ಕಿರುಕುಳ ಆರೋಪ: ಚಾಮರಾಜನಗರದ ಫಿಸಿಯೋ ಥೆರಪಿಸ್ಟ್ ಆತ್ಮಹತ್ಯೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.