ETV Bharat / bharat

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ.. ವೈರಸ್​ಗೆ 12 ವರ್ಷದ ಬಾಲಕ ಬಲಿ - ನಿಫಾ ವೈರಸ್​,

ಕೇರಳದಲ್ಲಿ ಮತ್ತೆ ನಿಫಾ ವೈರಸ್ ಕಾಣಿಸಿಕೊಂಡಿದ್ದು, 12 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ಮಾಹಿತಿ ನೀಡಿದ್ದಾರೆ.

Nipah
ನಿಫಾ
author img

By

Published : Sep 5, 2021, 7:35 AM IST

Updated : Sep 5, 2021, 9:52 AM IST

ಕೋಯಿಕ್ಕೋಡ್ (ಕೇರಳ): 12 ವರ್ಷದ ಬಾಲಕ ನಿಫಾ ವೈರಸ್​ನಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಪುಣೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಬಾಲಕನ ಮಾದರಿಗಳನ್ನು ನಿಫಾ ಪರೀಕ್ಷೆಗೆ ಒಳಪಡಿಸಿದ್ದು, ವೈರಸ್ ಇರುವುದು ದೃಢಪಟ್ಟಿದೆ.

ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲು ತಂಡ ರಚನೆ

ನಿನ್ನೆ ಸಂಜೆ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ದುರದೃಷ್ಟವಶಾತ್ ಆತ ಇಂದು ಬೆಳಗ್ಗೆ ಐದು ಗಂಟೆಗೆ ಮೃತಪಟ್ಟಿದ್ದಾನೆ. ಸೋಂಕಿತನ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚಲು ನಾವು ತಂಡಗಳನ್ನು ರಚಿಸಿದ್ದೇವೆ. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಿ ತಪಾಸಣೆಗೊಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವೀಣಾ ತಿಳಿಸಿದ್ದಾರೆ.

ರಾಜ್ಯದತ್ತ ಕೇಂದ್ರ ತಂಡ ದೌಡು

ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದೆ. ತಾಂತ್ರಿಕ ನೆರವು ನೀಡುವ ಸಲುವಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ತಂಡ ರಾಜ್ಯಕ್ಕೆ ಬರಲಿದೆ. ಈ ತಂಡವು ಕಳೆದ 12 ದಿನಗಳಿಂದ ಬಾಲಕನ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚಿ, ಪರೀಕ್ಷಿಸುವ ಕೆಲಸ ಮಾಡುತ್ತದೆ.

ಬಂಗಾಳದಲ್ಲಿ ಮೊದಲ ಕೇಸ್

ಭಾರತದಲ್ಲಿ, 2001 ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. 2007 ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಎರಡನೇ ಪ್ರಕರಣ ವರದಿಯಾಗಿತ್ತು. ವೈದ್ಯರು ಕಚ್ಚಾ ಖರ್ಜೂರದ ರಸ ಸೇವಿಸಿ ಇವರು ರೋಗಕ್ಕೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದರು.

ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್​​ 2018 ರ ಮೇ 19 ರಂದು ಕೇರಳದ ಕೋಯಿಕ್ಕೋಡ್​​ ಜಿಲ್ಲೆಯಲ್ಲಿ ವರದಿಯಾಗಿತ್ತು. 2018 ರ ಜೂನ್ 1 ರವರೆಗೆ ರಾಜ್ಯದಲ್ಲಿ 17 ಸಾವುಗಳು ಮತ್ತು 18 ಪ್ರಕರಣಗಳು ದೃಢಪಟ್ಟಿದ್ದವು. 2019 ರಲ್ಲಿ ಕೇರಳದ ಕೊಚ್ಚಿಯಲ್ಲಿ ಮತ್ತೆ ನಿಫಾ ಕಾಣಿಸಿಕೊಂಡಿತ್ತು. ಆದರೆ, ಹರಡಲಿಲ್ಲ.

ರೋಗ ಹರಡುವುದು ಹೇಗೆ.. ಲಕ್ಷಣಗಳೇನು?

ನಿಫಾ ವೈರಸ್​ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಲಿದೆ. ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳಿಂದ ಮನುಷ್ಯರಿಗೂ ಈ ವೈರಸ್ ಹರಡುತ್ತದೆ.

ಸೋಂಕಿತರಿಗೆ ಮೊದಲು ಜ್ವರ, ತಲೆನೋವು, ವಾಂತಿ, ಗಂಟಲುನೋವು ಕಾಣಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ತಲೆಸುತ್ತು, ಅರೆ ನಿದ್ರಾವಸ್ಥೆ, ನರ ವೈಜ್ಞಾನಿಕ ಸಮಸ್ಯೆ ಅನುಭವಿಸುತ್ತಾರೆ. ಇನ್ನೂ ಕೆಲವರಿಗೆ ನ್ಯುಮೋನಿಯಾ, ಉಸಿರಾಟದ ತೊಂದರೆ ಸೇರಿ ತೀವ್ರವಾದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ರೋಗಲಕ್ಷಗಳು ತೀವ್ರವಾದರೆ, 24 ರಿಂದ 48 ಗಂಟೆಗಳಲ್ಲಿ ಆ ವ್ಯಕ್ತಿಯು ಕೋಮಾಗೆ ಹೋಗುವ ಸಾಧ್ಯತೆಯಿರುತ್ತದೆ.

Last Updated : Sep 5, 2021, 9:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.