ನವದೆಹಲಿ: ಉಚಿತ ಅಥವಾ ವಿದ್ಯುತ್ ಬಿಲ್‌ನಲ್ಲಿ ಸಬ್ಸಿಡಿ ಪಡೆಯುವ ನಿಯಮದಲ್ಲಿ ಬದಲಾವಣೆ ತರಲು ದೆಹಲಿ ಸರ್ಕಾರ ಸಿದ್ಧತೆ ನಡೆಸಿದೆ. ಇದರೊಂದಿಗೆ ಕೇಜ್ರಿವಾಲ್ ಸರ್ಕಾರ ದೆಹಲಿಯ ಜನತೆಗೆ ಉಚಿತ ಮತ್ತು ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡುವ ಭರವಸೆಯನ್ನು ಹಿಂಪಡೆದಿರುವುದು ಸ್ಪಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ದೆಹಲಿ ಜನತೆ ಬೇಡಿಕೆ ಮೇರೆಗೆ ಮೇಲೆ ಮಾತ್ರ ಸಬ್ಸಿಡಿ ಲಾಭವನ್ನು ಪಡೆಯುತ್ತಾರೆ. ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಈ ಕ್ರಮಕ್ಕೆ ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಉಚಿತ ಮತ್ತು ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡುತ್ತೇವೆ ಎಂದು ಚುನಾವಣೆಯಲ್ಲಿ ಘೋಷಣೆ ಮಾಡಿದ ಕೇಜ್ರಿವಾಲ್, ಇಂದು ಅದನ್ನು ವಾಪಸ್ ತೆಗೆದುಕೊಂಡಿದ್ದಾರೆ. ಈಗ ಬೇಡಿಕೆಗೆ ಮಾತ್ರ ಸಹಾಯಧನ ನೀಡಲಾಗುವುದು. ಹಾಗಾಗಿ ಗುಜರಾತ್ ಮತ್ತು ಹಿಮಾಚಲದ ಜನರು ಕನಸನ್ನು ಕಾಣಬಾರದು ಎಂದು ಟಾಂಗ್ ನೀಡಿದ್ದಾರೆ.
ಸಬ್ಸಿಡಿ ಲಾಭ ಪಡೆಯಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 70113111111 ಈ ನಂಬರ್ಗೆ ಕರೆ ಮಾಡುವಂತೆ ಹೇಳಿದ್ದಾರೆ. ವಿದ್ಯುತ್ ಸಬ್ಸಿಡಿಯನ್ನು ಮುಂದುವರಿಸಲು ಅಥವಾ ಬಿಡಲು ಮಿಸ್ಡ್ ಕಾಲ್ ಮಾಡಬೇಕಾಗಿದೆ. ನಂತರ ಅವರು ಫಾರ್ಮ್ ಅನ್ನು ಪಡೆಯುತ್ತಾರೆ, ಬಳಿಕ ಅದನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಇದನ್ನೂ ಓದಿ: ಮೋದಿ ಬಳಿಕ ಸೋನಿಯಾ ಗಾಂಧಿ ಪ್ರಧಾನಿ: ಅರವಿಂದ್ ಕೇಜ್ರಿವಾಲ್ ಹೊಸ ಬಾಂಬ್
ದೆಹಲಿ ಸರ್ಕಾರವು ಗ್ರಾಹಕರಿಗೆ 200 ಯುನಿಟ್‌ಗಳವರೆಗೆ ಸಂಪೂರ್ಣ ಸಬ್ಸಿಡಿಯನ್ನು ನೀಡುತ್ತದೆ. 200 ರಿಂದ 400 ಯೂನಿಟ್‌ಗಳಷ್ಟು ಖರ್ಚು ಮಾಡುವ ಜನರಿಗೆ ಬಿಲ್‌ನಲ್ಲಿ ಶೇಕಡಾ 50 ರಷ್ಟು ಸಹಾಯಧನ ಅಥವಾ ಗರಿಷ್ಠ 800 ರೂ. ನೀಡಲಿದೆ. ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಸಬ್ಸಿಡಿ ಬೇಕು ಎನ್ನುವವರಿಗೆ ಮಾತ್ರ ನೀಡಲಾಗುವುದು. ದೆಹಲಿಯಲ್ಲಿ 27 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅವರು ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಬಳಸುತ್ತಾರೆ. ಈ ಸಂದರ್ಭದಲ್ಲಿ, ಅವರ ಬಿಲ್ ಶೂನ್ಯವಾಗಿರುತ್ತದೆ.