ನವದೆಹಲಿ: . ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ನಿಂದ ಮೃತರಾದ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಅಷ್ಟೇ ಅಲ್ಲ ಅವರ ಕುಟುಂಬಗಳಿಗೆ ಪ್ರತಿತಿಂಗಳು 2500 ರೂ ಮಾಸಾಶನ ನೀಡುವುದಾಗಿಯೂ ಘೋಷಿಸಿದ್ದಾರೆ. ಇನ್ನು ಒಂದೊಮ್ಮೆ ಕೋವಿಡ್ ಪೀಡಿತ ಕುಟುಂಬದಲ್ಲಿ ಪತಿ ತೀರಿಕೊಂಡರೆ ಅವರ ಹೆಂಡತಿಗೆ, ಹೆಂಡತಿ ತೀರಿಕೊಂಡರೆ ಗಂಡನಿಗೆ ವೇತನ ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸಿಂಗಾಪುರಕ್ಕೆ ವಿಮಾನಯಾನ ರದ್ದು ಮಾಡಿ: ಕೇಜ್ರಿ ಆಗ್ರಹ
ಸಿಂಗಾಪುರದೊಂದಿಗಿನ ಎಲ್ಲಾ ವಾಯು ಸೇವೆಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ
ಅಲ್ಲಿ ಕಂಡುಬಂದ ಹೊಸ ಕೊರೊನಾ ವೈರಸ್ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಮೂರನೇ ಅಲೆಯ ರೂಪದಲ್ಲಿ ಭಾರತವನ್ನು ಆಕ್ರಮಿಸಬಹುದು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
“ಸಿಂಗಾಪುರದಲ್ಲಿ ಹೊಸ ರೀತಿಯ ಕರೋನವೈರಸ್ ಮಕ್ಕಳಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದು ಮೂರನೇ ತರಂಗದ ರೂಪದಲ್ಲಿ ದೆಹಲಿಯನ್ನು ತಲುಪಬಹುದು. ಕೇಂದ್ರ ಸರ್ಕಾರಕ್ಕೆ ನನ್ನ ಮನವಿ: 1. ಸಿಂಗಾಪುರದ ಎಲ್ಲಾ ವಿಮಾನ ಸೇವೆಗಳನ್ನು ತಕ್ಷಣದಿಂದ ರದ್ದುಗೊಳಿಸಿ 2. ಆದ್ಯತೆಯ ಆಧಾರದ ಮೇಲೆ ಮಕ್ಕಳಿಗೆ ಲಸಿಕೆ ನೀಡಲು ಪರ್ಯಾಯಗಳ ವ್ಯವಸ್ಥೆ ಕುರಿತು ಚಿಂತಿಸಿ” ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.