ಶಾಮ್ಲಿ (ಉತ್ತರ ಪ್ರದೇಶ): ನಿಮ್ಮ ಟ್ರ್ಯಾಕ್ಟರ್ಗಳನ್ನು ಸಿದ್ಧವಾಗಿರಿಸಿಕೊಳ್ಳಿ, ನಾವು ಯಾವಾಗ ಬೇಕಾದರೂ ಮತ್ತೆ ರಾಷ್ಟ್ರ ರಾಜಧಾನಿಗೆ ಹೋಗಬಹುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದ್ದಾರೆ.
"ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಬೇಕು, ಜೊತೆಗೆ ತಮ್ಮ ಟ್ರ್ಯಾಕ್ಟರ್ಗಳಿಗೆ ಡೀಸೆಲ್ ತುಂಬಿಸಿಕೊಂಡು ಸಿದ್ಧವಿರಬೇಕು. ಏಕೆಂದರೆ ಯಾವಾಗ ಬೇಕಾದರೂ ದೆಹಲಿಗೆ ಬರಬೇಕಾಗಬಹುದು" ಎಂದು ಟಿಕಾಯತ್ ಹೇಳಿದ್ದಾರೆ.
ಕೇಂದ್ರವು ರೈತರ ಒಪ್ಪಿಗೆಯಿಲ್ಲದೆ ಹೊಸ ಕೃಷಿ ಕಾನೂನುಗಳನ್ನು ರೂಪಿಸಿದೆ. ಹಾಗಾಗಿ ಈ ಕಾನೂನುಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಓದಿ:ಕೃಷಿ ಕಾಯ್ದೆಗಳ ವಿರುದ್ಧ 40 ಲಕ್ಷ ಟ್ರ್ಯಾಕ್ಟರ್ಗಳೊಂದಿಗೆ ಸಂಸತ್ ಮುತ್ತಿಗೆ
ದೇಶಾದ್ಯಂತ ಮಹಾಪಂಚಾಯತ್‌ಗಳನ್ನು ನಡೆಸುವುದು ಅವಶ್ಯಕವಾಗಿದೆ. ಏಕೆಂದರೆ ಇದು ಇಡೀ ರಾಷ್ಟ್ರದ ಸಮಸ್ಯೆಯಾಗಿದೆ. ಈ ಪಂಚಾಯಿತಿಗಳ ಜೊತೆಗೆ ಧರಣಿಯೂ ಮುಂದುವರಿಯುತ್ತದೆ. ಈಗಿನಂತೆ ನಾವು ಮಾರ್ಚ್ 24 ರವರೆಗೆ ಕಾರ್ಯಕ್ರಮಗಳನ್ನು ಯೋಜಿಸಿದ್ದೇವೆ. ನಾವು ದೇಶಾದ್ಯಂತ ಪ್ರಯಾಣಿಸುತ್ತೇವೆ ಎಂದು ಟಿಕಾಯತ್ ಹೇಳಿದರು.
ರೈತರ ಬೇಡಿಕೆಗಳಿಗೆ ಸರ್ಕಾರ ಸಮ್ಮತಿಸದ ಕಾರಣ 'ಧರಣಿ' ಮುಂದುವರಿಯಲಿದೆ ಎಂದೂ ಅವರು ಪ್ರತಿಪಾದಿಸಿದರು. ಫೆಬ್ರವರಿ 24 ರಂದು ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ಕಿಸಾನ್ ಮಹಾಪಂಚಾಯತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಮೂರು ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ರೈತರು 40 ಲಕ್ಷ ಟ್ರ್ಯಾಕ್ಟರ್ಗಳಲ್ಲಿ ಸಂಸತ್ತನ್ನು 'ಘೆರಾವ್' ಹಾಕುತ್ತಾರೆ ಎಂದಿದ್ದಾರೆ.