ಹೈದರಾಬಾದ್: ದೇಶದ ಗಮನ ಸೆಳೆದಿದ್ದ ತೆಲಂಗಾಣದ ಮುನುಗೋಡು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಭ್ಯರ್ಥಿ ಕೆ ಪ್ರಭಾಕರ್ ರೆಡ್ಡಿ ಅವರು ಬಿಜೆಪಿಯ ಕೆ ರಾಜಗೋಪಾಲ್ ರೆಡ್ಡಿ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕೆ ರಾಜಗೋಪಾಲ್ ರೆಡ್ಡಿ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಪಕ್ಷ ತೊರೆದು ಬಿಜೆಪಿ ಸೇರಿದ್ದು, ಉಪಚುನಾವಣೆ ನಡೆದಿತ್ತು. ಮುನುಗೋಡು ಉಪಚುನಾವಣೆಯ ಪ್ರಚಾರಕ್ಕಾಗಿ ಟಿಆರ್‌ಎಸ್ ಮತ್ತು ಬಿಜೆಪಿ ಜಿದ್ದಿಗೆ ಬಿದ್ದು ಪ್ರಚಾರ ನಡೆಸಿದ್ದವು.
ಇದನ್ನೂ ಓದಿ: ಮುನುಗೋಡು ಚುನಾವಣೆ ಫಲಿತಾಂಶ ದೇಶಕ್ಕೆ ಸಂದೇಶ.. ಕೇಂದ್ರದ ವಿರುದ್ಧ ಕೆಸಿಆರ್ ವಾಗ್ದಾಳಿ
ಇಂದು ಸಂಜೆ ಫಲಿತಾಂಶ ಹೊರಬರುತ್ತಿದ್ದಂತೆ ಟಿಆರ್‌ಎಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯೆದುರು ಸಂಭ್ರಮಾಚರಣೆ ಮಾಡಿದರು. ನವೆಂಬರ್ 3 ರಂದು ನಡೆದ ಈ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇ. 93 ರಷ್ಟು ಮತದಾನವಾಗಿತ್ತು.