ಹೈದರಾಬಾದ್: ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೆ, ಅವರನ್ನು ಆಯಾ ರಾಜ್ಯದ ಮುಖ್ಯಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಳ್ಳುವುದು ಶಿಷ್ಟಾಚಾರ. ಇದನ್ನು ಬಿಟ್ಟು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರೇಶೇಖರ ರಾವ್ ಅವರು ಪ್ರಧಾನಿಯ ಬದಲಾಗಿ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ಅವರನ್ನು ವಿಮಾನ ನಿಲ್ದಾಣಕ್ಕೆ ತೆರಳಿ ಆಹ್ವಾನಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಬೆಂಬಲ ಕೋರಲು ಯಶವಂತ್ ಸಿನ್ಹಾ ಅವರು ತೆಲಂಗಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ, ಸಿಎಂ ಕೆ. ಚಂದ್ರಶೇಖರ್ರಾವ್ ಅವರು ಸಂಪುಟ ಸಹೋದ್ಯೋಗಿಗಳ ಜೊತೆಗೂಡಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಬಂದು ಸಿನ್ಹಾ ಅವರನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಟಿಆರ್ಎಸ್ ಕಾರ್ಯಕರ್ತರು ಹಮ್ಮಿಕೊಂಡಿರುವ ಜಲವಿಹಾರ್ ಬೈಕ್ ರ್ಯಾಲಿಯಲ್ಲಿ ಭಾಗಿಯಾದರು. ಯಶವಂತ್ ಸಿನ್ಹಾ ಅವರು ತಮ್ಮನ್ನು ಬೆಂಬಲಿಸಲು ಕೋರಿ ಸಭೆ ಆಯೋಜಿಸಿದ್ದು, ಇದರಲ್ಲಿ ಸಿಎಂ ಭಾಗವಹಿಸುವ ಸಾಧ್ಯತೆ ಇದೆ.
ಇದು ಮೂರನೇ ಸಲ: ಈ ಹಿಂದೆ ಪ್ರಧಾನಿ ಮೋದಿ ಅವರು ಹೈದರಾಬಾದ್ಗೆ 2 ಬಾರಿ ಭೇಟಿ ನೀಡಿದಾಗಲೂ ಅನಾರೋಗ್ಯ ಮತ್ತು ಕೆಲಸ ಒತ್ತಡ ಕಾರಣ ನೀಡಿ ಬರಮಾಡಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದರು. ಇದೀಗ ಮೂರನೇ ಸಲವೂ ಗೈರಾಗಲಿದ್ದಾರೆ.
ಓದಿ: ಪ್ರಧಾನಿ ಸ್ವಾಗತಕ್ಕೆ ತೆರಳುತ್ತಿಲ್ಲ ಸಿಎಂ ಕೆಸಿಆರ್.. ಆರು ತಿಂಗಳಲ್ಲಿ ಇದು ಮೂರನೇ ಬಾರಿ