ETV Bharat / bharat

ಬಿದಿರಿನಿಂದ ಬಾಟಲ್​ ತಯಾರಿ: ಕಾಜಿರಂಗ ಯುವಕನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಮನ್ನಣೆ

ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪರಿಸರ ಮಾಲಿನ್ಯವನ್ನು ತಡೆಯುವ ಸಲುವಾಗಿ, ಅಲ್ಲಿನ ಚಂದನ್​ ಎಂಬ ಯುವಕ ಬಿದಿರಿನಿಂದ ಬಾಟಲ್​ ತಯಾರಿಸಿದ್ದಾರೆ. ಇದಕ್ಕಾಗಿ ಅವರ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸೇರಿಸಲಾಗಿದೆ.

Kaziranga boy gets recognition for invention of bamboo bottle
ಬಿದಿರಿನಿಂದ ಬಾಟಲ್​ ತಯಾರಿ
author img

By

Published : Sep 1, 2022, 3:53 PM IST

ಕಾಜಿರಂಗ: ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಂದನ್​ ನಾಥ್​ ಎಂಬುವವರಿಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಲಾಗಿದೆ. ಇವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕಾಜಿರಂಗ ಬಾಮೂ ಬಾಟಲ್(Kaziranga Bamoo Bottle)​ಗಳನ್ನು ಸಂಶೋಧಿಸಿದ್ದಾರೆ. ಪ್ಲಾಸ್ಟಿಕ್​ ಬಾಟಲ್​ ಬಳಸುವುದನ್ನು ಕಡಿಮೆ ಮಾಡುವ ಸಲುವಾಗಿ, ಇದನ್ನು ಕಂಡುಹಿಡಿದಿದ್ದಾರೆ.

ಮಾಲಿನ್ಯದಿಂದ ಪರಿಸರ ಸಂರಕ್ಷಣೆ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಗಳನ್ನು ಮಾಡಿರುವ 100 ಜನರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಾಧಿಕಾರವು ಆಹ್ವಾನ ನೀಡಿದೆ. ಅವರಲ್ಲಿ ಚಂದನ್ ಕೂಡ ಒಬ್ಬರು. ಸೆಪ್ಟಂಬರ್ 11, 2022 ರಂದು ದೆಹಲಿಯಲ್ಲಿ ಈವೆಂಟ್ ನಡೆಯಲಿದೆ. ಚಂದನ್ ಅವರ ಹೆಸರನ್ನು 2021 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಪ್ರಸಕ್ತ ವರ್ಷ (2022) ಏಷ್ಯಾ ಬುಕ್ ಆಫ್ ರೆಕಾರ್ಡ್ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಿದಿರಿನಿಂದ ಬಾಟಲ್​ ತಯಾರಿ

ಚಂದನ್​​ ಕಾಜಿರಂಗ ಪ್ರದೇಶದ ಕೊಹೊರಾ ಚರಿಯಾಲಿ ನಿವಾಸಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರು, ಪ್ಲಾಸ್ಟಿಕ್​ ಬಾಟಲ್​ಗಳನ್ನು ಬಳಸದಂತೆ ಇವರು ಮನವಿ ಮಾಡಿಕೊಳ್ಳುತ್ತಿದ್ದರು. ಆದ್ರೆ ಇದರ ಬಳಕೆ ಮಾತ್ರ ಕಡಿಮೆಯಾಗಿರಲಿಲ್ಲ. ಹಾಗಾಗಿ ಚಂದನ್​ ಪರ್ಯಾಯ ಮಾರ್ಗವಾಗಿ ಬಿದಿರಿನ ಬಾಟಲಿಯನ್ನು ಕಂಡುಹಿಡಿದಿದ್ದಾರೆ. ಈಗ ಬಿದಿರಿನ ನೀರಿನ ಬಾಟಲಿಗಳು ಈ ಪ್ರದೇಶದಲ್ಲಿ ಜನಪ್ರಿಯವಾಗಿವೆ. ಕಾಜಿರಂಗಕ್ಕೆ ಬರುವ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಇದನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್ ಬಾಟಲ್​ ಮೇಲೆ 30 ಸಾವಿರ ಅಕ್ಷರ ಬರೆದು​ ಜಾಗೃತಿ: ಚನ್ನಪಟ್ಟಣದ ಯುವಕನಿಗೆ ನೊಬೆಲ್​ ವಿಶ್ವ ದಾಖಲೆ ಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.