ETV Bharat / bharat

ಪ್ರಸಿದ್ಧ ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ ವಿಧಿವಶ

ಪ್ರಸಿದ್ಧ ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ (81) ಸೋಮವಾರ ತಡರಾತ್ರಿ ವಿಧಿವಶರಾಗಿದ್ದು, ಗಣ್ಯರು ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Nelliyode Vasudevan Namboothiri
Nelliyode Vasudevan Namboothiri
author img

By

Published : Aug 3, 2021, 2:09 PM IST

Updated : Aug 3, 2021, 2:16 PM IST

ತಿರುವನಂತಪುರಂ: ಕೇರಳದ ಪ್ರಸಿದ್ಧ ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ (81) ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ದೀರ್ಘಕಾಲದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಸೋಮವಾರ ರಾತ್ರಿ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶಾಸ್ತ್ರೀಯ ನೃತ್ಯ-ನಾಟಕದಲ್ಲಿ 'ಚುವಣ್ಣ ತಡಿ' (ಕೆಂಪು ಗಡ್ಡ) ಪಾತ್ರ ಮಾಡುತ್ತಿದ್ದ ಅವರು "ವಟ್ಟಮುಡಿ" ಮತ್ತು "ಪೆಂಕರಿ" ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರು.

ಕಾಳಿ, ದುಶ್ಯಾಸನ ಮತ್ತು ಬಾಕನ್​ನಂತಹ ನಾಟಕಗಳಲ್ಲಿ ಖಳನಾಯಕನಾಗಿ ಅಭಿನಯಿಸಿ ಜನಮನ ಗೆದ್ದಿದ್ದರು. ಕುಚೇಲನ್​ನಂತಹ ಧಾರ್ಮಿಕ ಪಾತ್ರ ಮಾಡುವ ಮೂಲಕವೂ ಅವರು ಪ್ರಸಿದ್ಧರಾಗಿದ್ದರು. ಸಂಸ್ಕೃತ ಮತ್ತು ಹಿಂದೂ ಪುರಾಣಗಳಲ್ಲಿ ವಿದ್ವಾಂಸರಾಗಿದ್ದ ನಂಬೂತಿರಿ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ರಾಜ್ಯ ಕಥಕ್ಕಳಿ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದರು.

ವಾಸುದೇವನ್ ನಂಬೂತಿರಿ, ಪತ್ನಿ ಶ್ರೀದೇವಿ ಅಂತರ್ಜನಂ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

Last Updated : Aug 3, 2021, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.