ETV Bharat / bharat

ಭಾರತದ ಅತೀ ದೊಡ್ಡ ಅಂತಾರಾಷ್ಟ್ರೀಯ ಯೋಗ ಕೇಂದ್ರವಾಗಲಿದೆ ಕಾಶ್ಮೀರದ ಉಧಂಪುರ ಜಿಲ್ಲೆ - ಅಧಿಕಾರಿ ಠಾಕೂರ್ ಶೇರ್ ಸಿಂಗ್

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಯೋಗ ಕೇಂದ್ರಕ್ಕಾಗಿ 9,782 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಆದ್ದರಿಂದ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಈಜುಕೊಳಗಳು, ವ್ಯಾಪಾರ ಸಮಾವೇಶ ಕೇಂದ್ರಗಳು, ಹೆಲಿಪ್ಯಾಡ್‌ಗಳು, ಸ್ಪಾಗಳು, ಕೆಫೆಟೇರಿಯಾ ಮತ್ತು ಡೈನಿಂಗ್ ಹಾಲ್‌ಗಳು, ಕಾಟೇಜ್-ವಿನ್ಯಾಸಗೊಳಿಸಿದ ಪರಿಸರ ವಸತಿಗೃಹಗಳೊಂದಿಗೆ ಆಧುನಿಕ ದೃಷ್ಟಿಕೋನವನ್ನು ನೀಡಲಾಗಿದೆ.

Kashmir's Udhampur district will become an international yoga center
ಭಾರತದ ಅತೀ ದೊಡ್ಡ ಅಂತರಾಷ್ಟ್ರೀಯ ಯೋಗ ಕೇಂದ್ರವಾಗಲಿದೆ ಕಾಶ್ಮೀರದ ಉಧಂಪುರ ಜಿಲ್ಲೆ
author img

By

Published : Dec 3, 2022, 7:31 PM IST

ಉಧಮ್‌ಪುರ (ಜೆ&ಕೆ): ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿ ತನ್ನ ಉದ್ದಕ್ಕೂ ಪರ್ವತಗಳಿಂದ ಆವರಿಸಿದೆ. ಇದೀಗ ಅದೇ ಜಾಗದಲ್ಲಿ ಭಾರತದ ಅತೀ ದೊಡ್ಡ ಅಂತಾರಾಷ್ಟ್ರೀಯ ಯೋಗ ಕೇಂದ್ರವು ಸ್ಥಾಪಿಸಲ್ಪಟ್ಟಿದ್ದು, ಎಲ್ಲೆಡೆ ಸುದ್ದಿ ಮಾಡುತ್ತಿದೆ. ಈ ಯೋಗ ಕೇಂದ್ರವನ್ನು ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಚೆನಾನಿ ತೆಹಸಿಲ್‌ನ ಮಂಟಲೈ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಈ ಕೇಂದ್ರವು ಬಯಲು ಮತ್ತು ಬೆಟ್ಟಗಳೆರಡರ ನೈಸರ್ಗಿಕ ಸುಂದರ ಬಾಹ್ಯ ನೋಟವನ್ನು ಹೊಂದಿದೆ.

ಇಲ್ಲಿ ಸೂರ್ಯಪುತ್ರಿ ಎಂದೂ ಕರೆಯಲ್ಪಡುವ ನದಿಯು ಕೈಲಾಸ ಕುಂಡ್ ಹಿಮನದಿಯಿಂದ ಹುಟ್ಟುತ್ತದೆ. ಈ ನದಿಯ ನೀರಿನ ಸ್ಪರ್ಶದಿಂದ ವ್ಯಕ್ತಿಯ ಜೀವನದ ಕಾಯಿಲೆಗಳು ನಿವಾರಣೆ ಆಗುತ್ತದೆ. ಜೊತೆಗೆ ರೋಗವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಚೆನಾನಿ ಸಕಾರಾತ್ಮಕತೆಯನ್ನು ಹೊಂದಿರುವ ಪಟ್ಟಣವಾಗಿದೆ ಎಂದು ನಂಬಲಾಗಿದೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಯೋಗ ಕೇಂದ್ರಕ್ಕಾಗಿ 9,782 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಆದ್ದರಿಂದ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಈಜುಕೊಳಗಳು, ವ್ಯಾಪಾರ ಸಮಾವೇಶ ಕೇಂದ್ರಗಳು, ಹೆಲಿಪ್ಯಾಡ್‌ಗಳು, ಸ್ಪಾಗಳು, ಕೆಫೆಟೇರಿಯಾ ಮತ್ತು ಡೈನಿಂಗ್ ಹಾಲ್‌ಗಳು, ಕಾಟೇಜ್-ವಿನ್ಯಾಸಗೊಳಿಸಿದ ಪರಿಸರ ವಸತಿಗೃಹಗಳೊಂದಿಗೆ ಆಧುನಿಕ ದೃಷ್ಟಿಕೋನವನ್ನು ನೀಡಲಾಗಿದೆ.

ಇಷ್ಟಲ್ಲದೇ ಇದರ ಜೊತೆಗೆ ಸೋಲಾರಿಯಮ್ ಹೊಂದಿರುವ ಗುಡಿಸಲುಗಳು, ಜಿಮ್ನಾಷಿಯಂ ಆಡಿಟೋರಿಯಮ್‌ಗಳು, ಬ್ಯಾಟರಿ ಚಾಲಿತ ಕಾರುಗಳು, ಧ್ಯಾನದ ಎನ್‌ಕ್ಲೇವ್‌ಗಳು ಇದ್ದು ಬಹಳ ಗಮನಾರ್ಹವಾಗಿ ಕೇಂದ್ರದ ನಿರ್ಮಾಣ 90 ಪ್ರತಿಶತದಷ್ಟು ಈಗಾಗಲೇ ಪೂರ್ಣಗೊಂಡಿದೆ.

ಹೆರಿಟೇಜ್ ಆಗ್ಮೆಂಟೇಶನ್ ಡ್ರೈವ್ ಯೋಜನೆಯಡಿ ಅಭಿವೃದ್ಧಿ: ಅಲ್ಲದೇ, ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಹೆರಿಟೇಜ್ ಆಗ್ಮೆಂಟೇಶನ್ ಡ್ರೈವ್ ಯೋಜನೆಯಡಿ ಕತ್ರಾ-ವೈಷ್ಣೋ ದೇವಿಯ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿಗಾಗಿ 52 ಕೋಟಿ ರೂಪಾಯಿಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಮಂಟಾಲೈನಲ್ಲಿರುವ ಕೇಂದ್ರ ಮತ್ತು ಕತ್ರಾ ಪ್ರವಾಸೋದ್ಯಮ, ಇದರಿಂದಾಗಿ ಇವೆರಡೂ ರಾಜ್ಯದ ಆರ್ಥಿಕ ಭವಿಷ್ಯವನ್ನು ಹೆಚ್ಚಿಸುವ ಮತ್ತು ಆಧ್ಯಾತ್ಮಿಕ ಏರಿಕೆಯ ಉತ್ಸಾಹವನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯಿದೆ.

ಈ ಒಂದು ಯೋಗ ಕೇಂದ್ರ ಕನಿಷ್ಠ 150 ಪ್ರವಾಸಿಗರಿಗೆ ಮತ್ತು ಕಲಿಯುವವರಿಗೆ ಅವಕಾಶ ಕಲ್ಪಿಸಲಿದೆ. ಹಾಗೆ ಕೇಂದ್ರದ ಉದ್ಘಾಟನಾ ದಿನಾಂಕವನ್ನು ಸರ್ಕಾರವು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಪಟ್ನಿಟಾಪ್ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಠಾಕೂರ್ ಶೇರ್ ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯೋಜನೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮೇಲಿನ ಯೋಜನೆಗಳ ಮೌಲ್ಯವನ್ನು ಜನಪ್ರಿಯಗೊಳಿಸಲು, ಶಾಲಾ ಶಿಕ್ಷಣ ನಿರ್ದೇಶನಾಲಯ ಕಾಶ್ಮೀರವು ಭಾರತ ಸರ್ಕಾರದ ಪ್ರಾಯೋಜಿತ ಶಾಲೆಗಳಲ್ಲಿ 100 ಗಿಡಮೂಲಿಕೆ ಉದ್ಯಾನಗಳನ್ನು ಸ್ಥಾಪಿಸಿದೆ ಮತ್ತು ಇದಕ್ಕೆ ಜಮ್ಮು ಮತ್ತು ಕಾಶ್ಮೀರ ಔಷಧೀಯ ಸಸ್ಯಗಳ ಮಂಡಳಿಯು ಶಿಫಾರಸು ಮಾಡಿದೆ.

ದೋಡಾ ಜಿಲ್ಲೆಯ ಭದೆರ್ವಾದಲ್ಲಿ 'ದಿ ಇನ್‌ಸ್ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ಮೆಡಿಸಿನಲ್ ಪ್ಲಾಂಟ್ಸ್' ಎಂಬ ಹೆಸರಿನೊಂದಿಗೆ 100 ಕೋಟಿ ರೂಪಾಯಿಗಳ ಯೋಜನೆಯನ್ನು ಸಹ ಸ್ಥಾಪಿಸಲಾಗುತ್ತಿದೆ.

ಹಾಗೆ ಸರ್ಕಾರವು ಜಮ್ಮುವಿನ ಅಖ್ನೂರ್‌ನಲ್ಲಿ 16.19 ಕೋಟಿ ರೂಪಾಯಿ ಬಜೆಟ್‌ನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು, 32.50 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜ ಮತ್ತು ಆಸ್ಪತ್ರೆಯನ್ನು ಕಾಶ್ಮೀರದ ಗಂಡರ್‌ಬಾಲ್​ನಲ್ಲಿ ಮತ್ತು ಕುಪ್ವಾರಾ, ಕುಲ್ಗಾಮ್, ಸಾಂಬಾ, ಕಿಶ್ತ್ವಾರ್, ಕಥುವಾದಲ್ಲಿ 50 ಹಾಸಿಗೆಗಳ ಸಮಗ್ರ ಆಯುಷ್ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ.

ಈ ಎಲ್ಲ ಯೋಜನೆಗಳು ಜಮ್ಮುವಿನ ಕತ್ರಾ, ಪಟ್ನಿಟಾಪ್ ಮತ್ತು ಮನ್ಸಾರ್ ಪ್ರದೇಶಗಳಲ್ಲಿ ಮುಂಬರುವ ಆರು ವಿಶೇಷ ಆಯುಷ್ ಕ್ಷೇಮ ಕೇಂದ್ರಗಳು ಮತ್ತು ಕಾಶ್ಮೀರದ ಪಹಲ್ಗಾಮ್, ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್ ಪ್ರದೇಶಗಳಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ವೈದ್ಯಕೀಯ ಪ್ರವಾಸೋದ್ಯಮ ತಾಣವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿವೆ.

ಇದನ್ನೂ ಓದಿ:16ರ ಬಾಲಕ 70 ರ ವೃದ್ಧನಂತೆ ವರ್ತನೆ.. ಇದು ಕೋವಿಡ್​ ನೀಡಿದ ಮರ್ಮಾಘಾತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.