ETV Bharat / bharat

ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಾಡಿಗೆ ಸೇವೆ ಪ್ರಾರಂಭ: ವಾಯು ಮಾಲಿನ್ಯ, ಇಂಧನ ದರಗಳ ವಿರುದ್ಧ ಹೋರಾಡುವ ಗುರಿ..

author img

By

Published : Jan 17, 2023, 6:54 PM IST

ಶ್ರೀನಗರದ ಸ್ನೇಹಿತರ ಗುಂಪು, ಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಸ್‌ಎಸ್‌ಸಿಎಲ್) ಸಹಯೋಗದೊಂದಿಗೆ ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ಬೈಸಿಕಲ್ ಬಾಡಿಗೆ ಸೇವೆಯನ್ನು ಪ್ರಾರಂಭ - ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಮಾತ್ರವಲ್ಲದೇ, ನಗರದಲ್ಲಿ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುವ ಗುರಿ ಇ-ಬೈಸಿಕಲ್ ಸೇವೆಯದ್ದು

e bike service on different routes of Srinagar
ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಾಡಿಗೆ ಸೇವೆ ಪ್ರಾರಂಭ

ಶ್ರೀನಗರ(ಜಮ್ಮು ಕಾಶ್ಮೀರ) :ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ವಾಯು ಮಾಲಿನ್ಯ ತಡೆಗಟ್ಟಲು ಶ್ರೀನಗರದ ಸ್ನೇಹಿತರ ಗುಂಪು, ಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಸ್‌ಎಸ್‌ಸಿಎಲ್) ಸಹಯೋಗದೊಂದಿಗೆ ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ಬೈಸಿಕಲ್ ಬಾಡಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಇ-ಬೈಸಿಕಲ್​ಗಳು ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಮಾತ್ರವಲ್ಲದೇ, ನಗರದಲ್ಲಿ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿವೆ.

ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಮತ್ತು ವಾಯು ಮಾಲಿನ್ಯ ಕಡಿಮೆ ಮಾಡಲು ಇ-ಬೈಸಿಕಲ್:ನಾವು 15 ದಿನಗಳ ಹಿಂದೆ ನಗರದಲ್ಲಿ ಕರ್ವ್ ಎಲೆಕ್ಟ್ರಿಕ್​ ಎಂಬ ಹೆಸರಿನ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಪ್ರಸ್ತುತ, ನಾವು 100 ಕ್ಕೂ ಹೆಚ್ಚು ಬ್ಯಾಟರಿ ಜೊತೆಗೆ ಪೆಡಲ್ ಚಾಲಿತ ಬೈಸಿಕಲ್​ಗಳನ್ನು ಹೊಂದಿದ್ದೇವೆ. ಈ ಇ-ಬೈಸಿಕಲ್​ಗಳು ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿರುವುದರ ಜೊತೆಗೆ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕರ್ವ್ ಎಲೆಕ್ಟ್ರಿಕ್ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಜುಬೈರ್ ಭಟ್​ ತಿಳಿಸಿದ್ದಾರೆ.

750 ಮೆಟ್ರಿಕ್ ಟನ್ ಇಂಗಾಲ ತಡೆಗಟ್ಟಲಾಗಿದೆ: ಈ ಇ-ಬೈಸಿಕಲ್​ಗಳು ತಾಂತ್ರಿಕವಾಗಿ ಅಭಿವೃದ್ದಿಪಡಿಸಿದ್ದು, ಜಿಪಿಎಸ್ ಅಳವಡಿಸಲಾಗಿದೆ ಮತ್ತು ಇ-ಬೈಸಿಕಲ್ ಪ್ರತಿ ಚಾರ್ಜ್ ಗೆ 55 ಕಿಲೋಮೀಟರ್ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಚಲಿಸುತ್ತದೆ ಎಂದು ಸಹ ಸಂಸ್ಥಾಪಕ ಜುಬೈರ್ ಭಟ್ ಹೇಳಿದ್ದಾರೆ. ಶ್ರೀನಗರ ನಗರದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ತಮ್ಮ ಕೈಲಾದಷ್ಟು ಸೇವೆ ಮಾಡುವ ಉದ್ದೇಶವಾಗಿದೆ ಎಂದು ಅವರು ಹೇಳಿದರು, ಇಂಧನ ಬೆಲೆಗಳ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಈ ಉದ್ಯಮದಿಂದ ಒಂದೇ ವರ್ಷದಲ್ಲಿ ಸುಮಾರು 750 ಮೆಟ್ರಿಕ್ ಟನ್ ಇಂಗಾಲವನ್ನು ತಡೆಗಟ್ಟಲಾಗಿದೆ ಎಂದು ಅವರು ಅಂದಾಜಿಸಿದ್ದಾರೆ.

ನಗರದ ಪ್ರಮುಖದ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಇ-ಬೈಸಿಕಲ್​ಗಳ ಸೇವೆ: ಪ್ರಸ್ತುತ 200 ಇ-ಬೈಸಿಕಲ್​ಗಳನ್ನು ನಿರ್ವಹಿಸಲು ಮಾತ್ರ ನಮಗೆ ಅನುಮತಿಯನ್ನು ನೀಡಲಾಗಿದೆ. ಸದ್ಯ ನಾವು ನಗರದ ಪ್ರಮುಖದ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಇ-ಬೈಸಿಕಲ್​ಗಳ ಸೇವೆ ನೀಡುತ್ತಿದ್ದೇವೆ ಎಂದು ಜುಬೈರ್ ಭಟ್ ಹೇಳಿದರು. ಇಲಾಹಿ ಬಾಗ್, ಸೌರಾ, ಟಿಆರ್ಸಿ, ಕೋಠಿ ಬಾಗ್, ರಾಜ್ ಬಾಗ್, ಸನತ್ ನಗರ, ಇಸ್ಲಾಮಿಯಾ ಕಾಲೇಜು, ಬೊಟಾನಿಕಲ್ ಗಾರ್ಡನ್, ಕಾಶ್ಮೀರ ವಿಶ್ವವಿದ್ಯಾಲಯ, ಬೆಮಿನಾ ಮತ್ತು ಇತರ ಸ್ಥಳಗಳು ಸೇರಿದಂತೆ ನಗರದ ಹಲವಾರು ಸ್ಥಳಗಳಲ್ಲಿ ನಾವು ಡಾಕಿಂಗ್ ಸ್ಥಾಪಿಸುತ್ತಿದ್ದೇವೆ. ಸದ್ಯಕ್ಕೆ ನಮ್ಮ ಇ-ಬೈಸಿಕಲ್​ಗಳು ದಾಲ್ಗೇಟ್, ಇಸ್ಲಾಮಿಯಾ ಕಾಲೇಜು, ನಿಶಾತ್ ಗಾರ್ಡನ್ ಮತ್ತು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಪ್ರಯಾಣಿಕರಿಗೆ ಲಭ್ಯವಿದೆ ಎಂದು ತಿಳಿಸಿದರು.

ಇ-ಬೈಸಿಕಲ್​ಗಳ ಬಾಡಿಗೆ ಮತ್ತು ಟ್ರ್ಯಾಕಿಂಗ್ ಕುರಿತು ಮಾತನಾಡಿದ ಅವರು, "ಯಾವುದೇ ಸವಾರರು ಬ್ಯಾಟರಿಯನ್ನು ಟ್ಯಾಂಪರ್ ಮಾಡಲು ಪ್ರಯತ್ನಿಸಿದರೆ, ನಾವು ನಮ್ಮ ಮೊಬೈಲ್ ಫೋನ್‌ಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸುತ್ತೇವೆ. ಯಾವುದೇ ಅನುಮಾನಾಸ್ಪದ ಚಲನವಲನ ಪತ್ತೆಯಾದರೆ ನಾವು ಅದರ ಬ್ಯಾಟರಿಯನ್ನು ರಿಮೋಟ್‌ನಿಂದ ಆಫ್ ಮಾಡಬಹುದು. ಕಣಿವೆಯಲ್ಲಿನ ಹವಾಮಾನವನ್ನು ಪರಿಗಣಿಸಿ, ನಾವು ಎಲ್ಲ ರೀತಿಯ ಹಿಮದಲ್ಲೂ ಚಲಿಸಬಹುದಾದ MTB ಟೈರ್‌ಗಳನ್ನು ಅಳವಡಿಸಿದ್ದೇವೆ. ಇದು ಯುನಿಸೆಕ್ಸ್ ಆಗಿದ್ದರೂ, ಮಹಿಳಾ ಸೈಕ್ಲಿಸ್ಟ್‌ಗಳು ನೀಡುವ ಕೊಡುಗೆಯನ್ನು ಗೌರವಿಸಲು ನಾವು ಕೆಲವು ಸ್ತ್ರೀಯರ ಬಣ್ಣಗಳನ್ನು ಸೇರಿಸಿದ್ದೇವೆ ಎಂದರು.

ಪ್ರತಿ ನಿಮಿಷಕ್ಕೆ 0.90 ರೂ ಬಾಡಿಗೆ: ಈ ಸೇವೆಯನ್ನು ಬಳಸಿಕೊಳ್ಳಲು, ಪ್ರಯಾಣಿಕರು ಮೊದಲ ಬಾರಿಗೆ ಫೋನ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಎರಡನ್ನೂ ಒದಗಿಸಬೇಕಾಗುತ್ತದೆ ಆದರೆ, ನಂತರ ಬಳಸಲು ಫೋನ್ ಸಂಖ್ಯೆ ಮಾತ್ರ ಬೇಕಾಗುತ್ತದೆ. ಪ್ರಯಾಣಿಕರು ನಿಮಿಷಕ್ಕೆ 0.90 ರೂ.ಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಆನ್ಲೈನ್ ಅಥವಾ ಆಫ್ಲೈನ್​ನಲ್ಲಿ ಡಾಕಿಂಗ್ ನಿಲ್ದಾಣದಲ್ಲಿ ಪಾವತಿಯನ್ನು ಮಾಡಬಹುದು. ಹೆಚ್ಚಿನ ಸಮಯದವರೆಗೆ ಇ-ಬೈಸಿಕಲ್​ಗಳನ್ನು ಬಾಡಿಗೆಗೆ ಪಡೆಯುವ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಇರುತ್ತದೆ. ಅಲ್ಲದೆ, ಕತ್ತಲೆಯ ಸಮಯದಲ್ಲಿ ಸೈಕ್ಲಿಂಗ್ ಸೂಕ್ತವಲ್ಲದ ಕಾರಣ ಇ-ಬೈಸಿಕಲ್​ಗಳು ರಾತ್ರಿ ವೇಳೆ ಲಭ್ಯವಿರುವುದಿಲ್ಲ" ಎಂದು ಸಹ ಸಂಸ್ಥಾಪಕ ಜುಬೈರ್ ಭಟ್ ತಿಳಿಸಿದ್ದಾರೆ.

ಇದನ್ನೂ ಓದಿ:ಗೂಗಲ್​ ಮೀಟ್​ ಹೊಸ ಅಪ್ಡೇಟ್: ಸ್ಪೀಕರ್​ ನೋಟ್ಸ್​ ಕಾಣಿಸುವ ಫೀಚರ್ ಅಳವಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.