ETV Bharat / bharat

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ಕ್ಯಾನ್ಸರ್​ಗೆ ಬಲಿ - Kashmiri separatist leader Altaf Shah

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ಕ್ಯಾನ್ಸರ್​ ರೋಗದಿಂದ ಬಳಲಿ ಇಂದು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Kashmiri separatist leader Altaf Shah passes away

author img

By

Published : Oct 11, 2022, 1:40 PM IST

Updated : Oct 17, 2022, 2:35 PM IST

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಕ್ಕಾಗಿ ಹೋರಾಡಿ ಜೈಲು ಶಿಕ್ಷೆಗೆ ಒಳಗಾಗಿದ್ದ ನಾಯಕ, ಸೈಯದ್ ಅಲಿ ಶಾ ಗಿಲಾನಿ ಅವರ ಅಳಿಯ ಅಲ್ತಾಫ್ ಶಾ ಕ್ಯಾನ್ಸರ್​ ರೋಗದಿಂದ ಬಳಲಿ ಇಂದು ನಿಧನರಾಗಿದ್ದಾರೆ.

ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಅಲ್ಪಾಫ್​ ಶಾ ಕೈದಿಯಾಗಿಯೇ ಕೊನೆಯುಸಿರೆಳೆದಿದ್ದಾರೆ. ತಿಹಾರ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಲ್ತಾಫ್​ ಶಾರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕ್ಯಾನ್ಸರ್ ರೋಗ ಉಲ್ಬಣಗೊಂಡಿದ್ದ ಕಾರಣ ಅಸುನೀಗಿದ್ದಾರೆ.

ಇದನ್ನು ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಷಾ ಅವರ ಮಗಳು ಟ್ವೀಟ್‌ ಮಾಡಿ ಬಹಿರಂಗಪಡಿಸಿದ್ದಾರೆ. ಶ್ರೀನಗರದ ಸೌರಾ ಪ್ರದೇಶದ ನಿವಾಸಿಯಾದ ಹುರಿಯತ್ ನಾಯಕ ಅಲ್ತಾಫ್​ನನ್ನು 2017 ರಲ್ಲಿ 6 ಜನರ ಜೊತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಬಳಿಕ ಆತನಿಗೆ ಮೂತ್ರಪಿಂಡದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ಓದಿ: ಡಿವೈ ಚಂದ್ರಚೂಡ್​ರನ್ನು ಸುಪ್ರೀಂಗೆ ಮುಂದಿನ ಸಾರಥಿಯಾಗಿ ಹೆಸರಿಸಿದ ಸಿಜೆಐ ಯುಯು ಲಲಿತ್

Last Updated : Oct 17, 2022, 2:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.