ಶ್ರೀನಗರ(ಜೆ&ಕೆ): ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದ ಯಾತ್ರಿಕರನ್ನ ಕಾಶ್ಮೀರಿ ಹಿಂದೂಗಳು ಶ್ರೀನಗರದಲ್ಲಿ ಆರತಿ ಬೆಳಗಿ, ಗುಲಾಬಿ ನೀಡುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರನ್ನು ಬರಮಾಡಿಕೊಂಡಿದ್ದು, ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಉಪಸ್ಥಿತರಿದ್ದರು.
ಮೆಕ್ಕಾದಿಂದ 145 ಯಾತ್ರಾರ್ಥಿಗಳ ಮೊದಲ ಬ್ಯಾಚ್ ಇಂದು ಶ್ರೀನಗರದ ಶೇಖ್ ಉಲ್ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಈ ವೇಳೆ ಅವರಿಗೆ ಆರತಿ ಬೆಳಗಿ, ಗುಲಾಬಿ ಹೂವು ನೀಡಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳು ಹಜ್ ಪ್ರವಾಸ ಕೈಗೊಳ್ಳುತ್ತಾರೆ. ಈ ಸಲವೂ ಒಟ್ಟು 8 ಸಾವಿರ ಜನರು ತೆರಳಿದ್ದು, ಇದರಲ್ಲಿ 7 ಸಾವಿರ ಯಾತ್ರಿಕರು ಜಮ್ಮು-ಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ.
ಇದನ್ನೂ ಓದಿರಿ: ಕೆಂಪು ಬಟ್ಟೆಯಲ್ಲಿ ರಶ್ಮಿಕಾ... ನೀವು ಸಖತ್ ಹಾಟ್ ಎಂದ ನೆಟಿಜನ್ಸ್!
ಸಹೋದರತೆ ಮತ್ತು ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಅಬ್ಬಾಸ್ ಮುಖ್ತಾರ್ ಅನ್ಸಾರಿ ಈ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.