ETV Bharat / bharat

ಕಾಶ್ಮೀರ ಕಣಿವೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಾರ್​ ರೇಸ್ - ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಪ್ರಥಮ ಮಹಿಳಾ ಕಾರ್​ ರೇಸ್

ಮೋಟಾರ್‌ ಸ್ಪೋರ್ಟ್​​ನಲ್ಲಿ ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 'ಜೆಕೆ ಆಟೋಎಕ್ಸ್​ ವುಮೆನ್​'​ ಸ್ಪರ್ಧೆ ನಡೆಸಲಾಗಿದೆ.

Kashmir Valley hosts its first ever women only motorsports event
ಪ್ರಪ್ರಥಮ ಮಹಿಳಾ ಕಾರ್​ ರೇಸ್​ಗೆ​ ಸಾಕ್ಷಿಯಾದ ಕಾಶ್ಮೀರ ಕಣಿವೆ
author img

By ANI

Published : Oct 22, 2023, 8:06 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶವಾದ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರ ಹೊಸ ದಾಖಲೆ ಬರೆದಿದೆ. ಸಾಮಾಜಿಕ ಕಟ್ಟುಪಾಡುಗಳನ್ನು ತೊಡೆದುಹಾಕುವ ಉದ್ದೇಶ ಹಾಗೂ ವಾಹನ ಸ್ಪರ್ಧೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು 'ಜೆಕೆ ಆಟೋಎಕ್ಸ್​ ವುಮೆನ್​'​ ಎಂಬ ಹೆಸರಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಮಾತ್ರ ಸೀಮಿತವಾದ ಕಾರ್​ ರೇಸ್​​ ಸ್ಪರ್ಧೆ ಏರ್ಪಡಿಸಿದ್ದು, ಯಶಸ್ವಿಯಾಗಿದೆ.

ಪುರುಷ ಪ್ರಾಬಲ್ಯದ ಮೋಟಾರ್‌ ಸ್ಪೋರ್ಟ್​​ ಕ್ಷೇತ್ರದಲ್ಲಿ ಈಗಾಗಲೇ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ಅನೇಕ ಅಡೆತಡೆಗಳನ್ನೂ ಮೀರಿ ವಾಹನ ಕ್ರೀಡೋದ್ಯಮಕ್ಕೆ ತಮ್ಮದೇ ಆದ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಅನೇಕ ಮಹಿಳಾ ಚಾಲಕರು​​ ಹಲವಾರು ಸ್ಪರ್ಧೆಗಳಲ್ಲಿ ಅಗ್ರಸ್ಥಾನಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಈ ಮೂಲಕ ರೇಸಿಂಗ್​ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ.

ಇದೀಗ ಕಾಶ್ಮೀರವು ಮೋಟಾರ್‌ ಸ್ಪೋರ್ಟ್​​ನಲ್ಲಿನ ತಾರತಮ್ಯಗಳನ್ನು ನಿವಾರಿಸಿ, ಮಹಿಳೆಯರನ್ನು ಉತ್ತೇಜಿಸುವ ಸುದುದ್ದೇಶದಿಂದ ಪ್ರಪ್ರಥಮ 'ಜೆಕೆ ಆಟೋಎಕ್ಸ್​ ವುಮೆನ್​'​ ಸ್ಪರ್ಧೆಗೆ ಸಾಕ್ಷಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ಮೋಟಾರ್ ಸ್ಪೋರ್ಟ್ಸ್​​ ಫೆಡರೇಶನ್ ಹಾಗೂ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್​​ ಕ್ಲಬ್ ಆಫ್ ಇಂಡಿಯಾ ಒಟ್ಟಾಗಿ ಸಂಘಟಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.

''ಮಹಿಳೆಯರು ಉತ್ತಮ ಚಾಲಕರಲ್ಲ ಎಂಬ ಸುಳ್ಳನ್ನು ಬುಡಮೇಲು ಮಾಡುವುದೇ ಈ ರ‍್ಯಾಲಿಯ ಉದ್ದೇಶ. ಮಹಿಳೆಯರು ಚೆನ್ನಾಗಿ ವಾಹನ ಓಡಿಸರು ಎಂದು ಜನ ಹೇಳುತ್ತಾರೆ. ಆದರೆ, ನಾವು ಮನೆ ಮತ್ತು ಕಚೇರಿಗಳನ್ನು ನಡೆಸಬಹುದಾದರೆ ನಾವು ವಾಹನಗಳನ್ನೇಕೆ ಓಡಿಸಬಾರದು?'' ಎಂದು ಕಾರ್​ ರೇಸ್​ನಲ್ಲಿ ಭಾಗವಹಿಸಿದ್ದ ಮುಸ್ಕಾನ್ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಸವಾಲಿನ ಸ್ಪರ್ಧೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಅಧಿಕವಾಗಿದೆ. ಕಳೆದ ದಶಕದಿಂದ ಮೋಟಾರ್ ರೇಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಂಕಿ-ಅಂಶಗಳು ಖಾತರಿ ಪಡಿಸುತ್ತಿವೆ. ಇದರ ಮುಂದುವರೆದ ಭಾಗವಾಗಿ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಆಚರಣೆಯನ್ನು ಪ್ರತಿಬಿಂಬಿಸಲು ಈ ಜೆಕೆ ಆಟೋಎಕ್ಸ್​ ವುಮೆನ್ ಸ್ಪರ್ಧೆ ಸಂಘಟಿಸಲಾಗಿತ್ತು. ಮಹಿಳೆಯರು ಉತ್ಸಾಹಭರಿತರಾಗಿ ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದರು. ನುರಿತ ಮಹಿಳಾ ರೇಸರ್‌ಗಳಂತೆ ರೋಮಾಂಚನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಸ್ಫೂರ್ತಿ ನೀಡುವಂತಿತ್ತು.

ಇದನ್ನೂ ಓದಿ: ಹೈದರಾಬಾದಿನಲ್ಲಿ ಮತ್ತೊಮ್ಮೆ ಫಾರ್ಮುಲಾ ಇ ರೇಸ್.. ಯಾವಾಗ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.