ಶ್ರೀನಗರ (ಜಮ್ಮು ಕಾಶ್ಮೀರ): ಶ್ರೀನಗರದಲ್ಲಿ ಕೆಲ ಕೋಳಿಗಳಿಂದ ಸಂಗ್ರಹಿಸಿದ ಮಾದರಿಯಲ್ಲಿ ಏವಿಯನ್ ಇನ್ಫ್ಲುಯೆಂಜಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಶ್ರೀನಗರದಲ್ಲಿ ಹಕ್ಕಿ ಜ್ವರ ಸೋಂಕು ಕಾಣಿಸಿಕೊಂಡಿದ್ದು, ಕೋಳಿ ಮಾಂಸದಲ್ಲಿ ಸೋಂಕು ಇರುವುದು ದೃಢವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪಕ್ಷಿ ಜ್ವರ ಹರಡದಂತೆ ಅಧಿಕಾರಿಗಳು ಕೋಳಿ ಸಾಕಾಣಿಕೆ ಪ್ರದೇಶಗಳ ಸುತ್ತಮುತ್ತ ನಿರ್ಬಂಧ ವಿಧಿಸಿದ್ದಾರೆ.
"ಏವಿಯನ್ ಇನ್ಫ್ಲುಯೆಂಜಾ ಸೋಂಕು ಇರುವುದು ದೃಢ ಪಟ್ಟಿದ್ದು, ಪರೀಕ್ಷೆಗಾಗಿ ಪಕ್ಷಿ ಮಾದರಿಯನ್ನು ಕಳೆದ ವಾರ ಸಂಗ್ರಹಿಸಲಾಗಿತ್ತು. ಇತರ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರ ಹರಡುವುದನ್ನು ತಡೆಯಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ." ಎಂದು ಪೌಲ್ಟ್ರಿ ವಿಭಾಗದ (ಪಶುಸಂಗೋಪನಾ ವಿಭಾಗ) ಜಂಟಿ ನಿರ್ದೇಶಕ ಡಾ. ಮುಷ್ತಾಕ್ ಅಹ್ಮದ್ ಷಾ ಹೇಳಿದರು.
ಓದಿ : ಅತ್ಯಂತ ಕಳಪೆ ಮಟ್ಟ ತಲುಪಿದ ರಾಜಧಾನಿ ವಾಯು ಗುಣಮಟ್ಟ
ಕೋಳಿ ಉತ್ಪನ್ನಗಳ ಆಮದಿನ ಬಗ್ಗೆಯೂ ಇಲಾಖೆ ನಿಗಾ ವಹಿಸುತ್ತಿದೆ. ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಸ್ಥಳಗಳಲ್ಲಿ ಸ್ಕ್ರೀನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕೋಳಿ ಉತ್ಪನ್ನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.