ETV Bharat / bharat

ಮೊಹರಂ ಮುಗಿಸಿ ಬೆಂಗಳೂರಿಗೆ ಬೈಕ್​ ಮೇಲೆ ತೆರಳುತ್ತಿದ್ದ ಸಹೋದರರು.. ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವು - ಕೂಲಿಗಾಗಿ ಬೆಂಗಳೂರಿಗೆ ವಲಸೆ

ಮೊಹರಂ ಮುಗಿಸಿ ಬೆಂಗಳೂರಿಗೆ ಬೈಕ್​ ಮೇಲೆ ತೆರಳುತ್ತಿದ್ದ ಸಹೋದರರು ಆಂಧ್ರಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.

Karnataka persons died  Andhra Pradesh road accident  people died in road accident at Anantapur  Andhra Pradesh news  ಮೊಹರಂ ಮುಗಿಸಿ ಬೆಂಗಳೂರಿಗೆ ಬೈಕ್​ ಮೇಲೆ ತೆರಳುತ್ತಿದ್ದ ಸಹೋದರರು  ಆಂಧ್ರದಲ್ಲಿ ಸಂಭವಿಸಿದ ಅಪಘಾತ  ಕೂಲಿಗಾಗಿ ಬೆಂಗಳೂರಿಗೆ ವಲಸೆ  ಕಾರು ಮತ್ತು ಬೈಕ್ ಡಿಕ್ಕಿ
ಮೊಹರಂ ಮುಗಿಸಿ ಬೆಂಗಳೂರಿಗೆ ಬೈಕ್​ ಮೇಲೆ ತೆರಳುತ್ತಿದ್ದ ಸಹೋದರರು.
author img

By

Published : Aug 13, 2022, 2:03 PM IST

ಅನಂತಪುರ, ಆಂಧ್ರಪ್ರದೇಶ: ಗಾರ್ಲದಿನ್ನೆ ತಾಲೂಕಿನ ಕಾನುಂಪಲ್ಲಿಯಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮೃತರನ್ನು ಕರ್ನಾಟಕದ ಕಲಬುರಗಿ ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಕೂಲಿಗಾಗಿ ಬೆಂಗಳೂರಿಗೆ ವಲಸೆ ಬಂದಿರುವುದು ಗೊತ್ತಾಗಿದ್ದು, ಮೃತರ ವಿಳಾಸ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿಗೆ ಸೇರಿದ ಚಾಕಲಿ ಭೀಮಪ್ಪ ಮತ್ತು ಚಾಕಲಿ ಮೋನಪ್ಪ ಎಂದು ಗುರುತಿಸಲಾಗಿದೆ. ಇವರಿಬ್ಬರು ಸಹೋದರರೆಂದು ತಿಳಿದು ಬಂದಿದೆ.

ಮೊಹರಂ ಆಚರಣೆಗಾಗಿ ಚಾಕಲಿ ಭೀಮಪ್ಪ ಮತ್ತು ಚಾಕಲಿ ಮೋನಪ್ಪ ಇಬ್ಬರು ಸ್ವಗ್ರಾಮಕ್ಕೆ ಆಗಮಿಸಿದ್ದರು. ಹಬ್ಬ ಮುಗಿಸಿಕೊಂಡು ಬೈಕ್​ನಲ್ಲಿ ಹೊರಡುತ್ತಿರುವಾಗ ಕಾರು ಮತ್ತು ಬೈಕ್​ ಮಧ್ಯೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಘಟನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಬಚಾವ್: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.