ETV Bharat / bharat

ಸೈಕಲ್‌ನಲ್ಲಿ ಹಜ್ ಯಾತ್ರೆ ಹೊರಟ ಬಾಗಲಕೋಟೆ ಯುವಕ; ಯುಪಿ ಮುಸ್ಲಿಮರಿಂದ ಅದ್ಧೂರಿ ಸ್ವಾಗತ, ಬೀಳ್ಕೊಡುಗೆ - ಸೌದಿ ಅರೇಬಿಯಾ

Man rides bicycle on 6-month long Hajj pilgrimage: ಬಾಗಲಕೋಟೆಯ ಹಸನ್ ರಾಜ್ ಎಂಬವರು ಸೈಕಲ್ ಮೂಲಕವೇ ಹಜ್ ಯಾತ್ರೆ ನಡೆಸುತ್ತಿದ್ದು, ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ತಲುಪಿದ್ದಾರೆ. ನೇಪಾಳದಿಂದ ಚೀನಾ ಮಾರ್ಗವಾಗಿ ಸೌದಿ ಅರೇಬಿಯಾ ತೆರಳುವ ಗುರಿ ಹೊಂದಿದ್ದಾರೆ.

Karnataka man rides bicycle on six-month long Hajj pilgrimage
ಹಜ್ ಯಾತ್ರೆಗೆ ಸೈಕಲ್ ಮೇಲೆ ಹೊರಟ ಕರ್ನಾಟಕದ ಯುವಕ ಹಸನ್​ರಾಜ್
author img

By ETV Bharat Karnataka Team

Published : Nov 30, 2023, 9:10 AM IST

Updated : Nov 30, 2023, 2:20 PM IST

ಸೈಕಲ್‌ನಲ್ಲಿ ಹಜ್ ಯಾತ್ರೆ ಕೈಗೊಂಡ ಯುವಕ ಹಸನ್ ರಾಜ್

ಮೊರಾದಾಬಾದ್(ಉತ್ತರ ಪ್ರದೇಶ): ಹಜ್ ಯಾತ್ರೆ ಮುಸ್ಲಿಮರಿಗೆ ಕಡ್ಡಾಯ. ಇಸ್ಲಾಂ ಧರ್ಮದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ, ಮದೀನಾಕ್ಕೆ ಹೋಗಿ ಹಜ್ ಕರ್ಮಗಳನ್ನು ಮುಗಿಸಬೇಕೆಂಬುದು ಪ್ರತಿಯೊಬ್ಬ ಮುಸಲ್ಮಾನ ವ್ಯಕ್ತಿಯ ಇಚ್ಛೆ. ಹಜ್ ಇಸ್ಲಾಂ ಧರ್ಮದ ಐದು ಆಚರಣೆಗಳ ಪೈಕಿ ಒಂದಾಗಿದೆ.

ಇದೀಗ ಕರ್ನಾಟಕದ ಬಾಗಲಕೋಟೆಯ 26 ವರ್ಷದ ಯುವಕ ಹಸನರಾಜ್ ಎಂಬವರು ಹಜ್ ಯಾತ್ರೆಯನ್ನು ಸೈಕಲ್ ಮೂಲಕವೇ ಕೈಗೊಳ್ಳುವ ನಿರ್ಧಾರ ಮಾಡಿದ್ದು, ಈಗಾಗಲೇ ಉತ್ತರ ಪ್ರದೇಶ ತಲುಪಿದ್ದಾರೆ. ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾಕ್ಕೆ ಸೈಕಲ್ ಮೇಲೆ ಪ್ರಯಾಣ ಬೆಳೆಸಿರುವ ಹಸನ್ ರಾಜ್‌ ಮುಸ್ಲಿಂ ಸಮುದಾಯದ ಪ್ರಶಂಸೆ ಗಳಿಸಿದ್ದಾರೆ.

ಈ ಸುದೀರ್ಘ ಪಯಣದಲ್ಲಿ ಅವರು ಹಲವು ದೇಶಗಳನ್ನು ಸುತ್ತಬೇಕಿದೆ. ಆರು ತಿಂಗಳು ಸಮಯ ತೆಗೆದುಕೊಂಡು ವಿಶಿಷ್ಟ ಸಾಧನೆ ಪೂರ್ಣಗೊಳಿಸುವ ಪ್ರತಿಜ್ಞೆ ಅವರದ್ದು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯಿಂದ ಹಸನ್ ರಾಜ್ ಪ್ರಯಾಣ ಆರಂಭಿಸಿದ್ದು, ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಪ್ರಸಿದ್ಧ ನಗರ ಮೊರಾದಾಬಾದ್ ತಲುಪಿದ್ದಾರೆ.

ಈ ಸಂದರ್ಭದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, "ವರ್ಷಾರಂಭದಲ್ಲಿ ಕೇರಳದ ವ್ಯಕ್ತಿಯೊಬ್ಬರು ಕಾಲ್ನಡಿಗೆಯಲ್ಲಿ ಯಾತ್ರೆ ಮುಗಿಸಿದ್ದು ನನಗೆ ಸ್ಫೂರ್ತಿಯಾಗಿದೆ. ಇನ್ನು ಆರೂವರೆ ತಿಂಗಳಲ್ಲಿ ಸೌದಿ ಅರೇಬಿಯಾ ತಲುಪುತ್ತೇನೆ. ಈ ಹಿಂದೆ ಕಾಲ್ನಡಿಗೆ ಅಥವಾ ಸೈಕಲ್ ಮೂಲಕ ಹಜ್ ಯಾತ್ರೆ ಮುಗಿಸಿದ ಕೆಲವರು ನನಗೆ ಸ್ಫೂರ್ತಿ. ಕಳೆದ ವರ್ಷ ಯಾತ್ರೆಗಾಗಿ ಶಿಹಾಬ್ ಚೋಟ್ಟೂರ್ ಎಂಬವರು ಕೇರಳದಿಂದ ಸೌದಿ ಅರೇಬಿಯಾದವರೆಗೆ ನಡೆದುಕೊಂಡು ಬಂದಿದ್ದರು" ಎಂದು ಹೇಳಿದರು.

ಹಸನ್ ರಾಜ್ ಮೊರಾದಾಬಾದ್ ತಲುಪುತ್ತಿದ್ದಂತೆ ಸ್ಥಳೀಯ ಮುಸ್ಲಿಮರು ಅದ್ಧೂರಿ ಸ್ವಾಗತ ಕೋರಿ, ಸನ್ಮಾನಿಸಿದರು. ಊಟೋಪಚಾರ, ವಿವಿಧ ಹಣ್ಣಿನ ರಸಗಳನ್ನು ಒದಗಿಸಿದರು. ನಂತರ ಸೈಕಲ್ ಸವಾರಿ ಹಜ್ ಯಾತ್ರೆಗೆ ಬೈಕ್ ರ್ಯಾಲಿ ಮೂಲಕ ಬೀಳ್ಕೊಟ್ಟು ಶುಭ ಕೋರಿದರು.

ಇದನ್ನೂಓದಿ: ಬಿಹಾರದಲ್ಲಿ ನಡೆದ ವಿಶ್ವಪ್ರಸಿದ್ಧ ಸೋನ್​ಪುರ ಮೇಳ: ವಿಡಿಯೋ

Last Updated : Nov 30, 2023, 2:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.