ETV Bharat / bharat

ಹಿಜಾಬ್​ ಧರಿಸುವ ಬಗ್ಗೆ ಮಧ್ಯಂತರ ಆದೇಶಕ್ಕೆ ಹೈಕೋರ್ಟ್​ ನಕಾರ..ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗ

ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ವಿದ್ಯಾರ್ಥಿಗಳು 4 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್​ ನ್ಯಾಯಮೂರ್ತಿ ಎಸ್​.ಕೃಷ್ಣ ದೀಕ್ಷಿತ್​ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ.

author img

By

Published : Feb 9, 2022, 3:00 PM IST

Updated : Feb 9, 2022, 4:17 PM IST

high-court
ವಿಚಾರಣೆ ಶುರು

ಬೆಂಗಳೂರು: ಹಿಜಾಬ್​ ಮತ್ತು ಕೇಸರಿ ಪ್ರಕರಣವನ್ನು ಏಕಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಹೈಕೋರ್ಟ್​ ನ್ಯಾಯಮೂರ್ತಿ ಕೃಷ್ಣ ಎಸ್.​ ದೀಕ್ಷಿತ್​ ಅವರಿದ್ದ ಏಕಸದಸ್ಯ ಪೀಠದಿಂದ ಪ್ರಕರಣ ಕುರಿತು 2 ದಿನ ನಡೆದ ವಿಚಾರಣೆ ಅಂತ್ಯಗೊಂಡಿದೆ.

ಹಿಜಾಬ್​ ಧರಿಸಿ ಕಾಲೇಜಿಗೆ ತೆರಳಲು ಅವಕಾಶ ನೀಡಲು ಮಧ್ಯಂತರ ಆದೇಶಕ್ಕೆ ಅರ್ಜಿದಾರರು ಕೋರಿದ್ದರು. ಇದನ್ನು ನಿರಾಕರಿಸಿದ ಹೈಕೋರ್ಟ್​, ಪ್ರಕರಣ ಸೂಕ್ಷ್ಮವಾದ ಕಾರಣ ವಿಸ್ತೃತ ಪೀಠದಲ್ಲಿಯೇ ವಿಚಾರಣೆ ನಡೆಯಬೇಕು. ಇದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣವನ್ನು ವರ್ಗಾಯಿಸಲಾಗುವುದು. ವಿಸ್ತೃತ ಪೀಠ ರಚನೆ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳಿಗಿದೆ.

ಅವರೇ ಈ ಪ್ರಕರಣವನ್ನು ನಿರ್ಧರಿಸಬೇಕು. ಅಲ್ಲದೆ, ಪ್ರಕರಣದ ತುರ್ತು ವಿಚಾರಣೆ ಅಗತ್ಯವಿದೆ. ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ. ಸಂಪೂರ್ಣ ಕಡತಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿಸಿ ಎಂದು ನ್ಯಾ. ಕೃಷ್ಣ ಎಸ್​. ದೀಕ್ಷಿತ್​ ಅವರು ಹೈಕೋರ್ಟ್​ ರಿಜಿಸ್ಟ್ರಾರ್​ಗೆ ನಿರ್ದೇಶನ ನೀಡಿದರು. ಇದರಿಂದಾಗಿ ಹಿಜಾಬ್​ -ಕೇಸರಿ ಪ್ರಕರಣ ಇದೀಗ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ಬಂದಿದೆ.

ಹಿಜಾಬ್​ ಮತ್ತು ಕೇಸರಿ ವಿವಾದದ ಕುರಿತು ಹೈಕೋರ್ಟ್​ನಲ್ಲಿ 2ನೇ ದಿನದ ವಿಚಾರಣೆ ಇಂದು ಮಧ್ಯಾಹ್ನ 2.30 ರಿಂದ ಶುರುವಾಯಿತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ವಿದ್ಯಾರ್ಥಿಗಳು 4 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್​ ನ್ಯಾಯಮೂರ್ತಿ ಎಸ್​.ಕೃಷ್ಣ ದೀಕ್ಷಿತ್​ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ.

ಎರಡನೇ ದಿನದ ಆರಂಭದಲ್ಲಿಯೇ ಅರ್ಜಿದಾರರ ಪರ ಮತ್ತು ಸರ್ಕಾರದ ಪರ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ನೀಡಬಹುದೇ ಎಂದು ಪ್ರಶ್ನಿಸಿದರು.

ಈ ವೇಳೆ ಉತ್ತರಿಸಿದ ವಕೀಲರು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್​ ವಿವೇಚನೆಗೆ ಬಿಟ್ಟಿದ್ದು. ಕಾನೂನು ವಿಷಯವನ್ನು ನ್ಯಾಯಾಲಯವೇ ವಿಚಾರಿಸಬೇಕು. ಎಲ್ಲರೂ ಕೋರ್ಟ್​ ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ. ಯಾವ ತೀರ್ಪನ್ನಾದರೂ ಕೊಡಿ, ಬೇಗ ತೀರ್ಪು ನೀಡಿ ಎಂದು ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ಕೇಳಿಕೊಂಡರು. ಈ ವೇಳೆ ಸಮವಸ್ತ್ರ ಸಂಹಿತೆ ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆಯೇ ಎಂದು ಕೋರ್ಟ್​ ಪ್ರಶ್ನಿಸಿದಾಗ, 2 ತಿಂಗಳು ಹಿಜಾಬ್​ಗೆ ಅವಕಾಶ ಮಾಡಿಕೊಟ್ಟರೆ ಆಕಾಶ ಬೀಳಲ್ಲ.

ಹಿಜಾಬ್​ ಮೂಲಭೂತ ಹಕ್ಕು ಎನ್ನುವುದು ಪ್ರಶ್ನೆಯೇ ಅಲ್ಲ, ಸರ್ಕಾರಕ್ಕೆ ಸಮವಸ್ತ್ರ ಸಂಹಿತೆ ರೂಪಿಸುವ ಹಕ್ಕಿದೆಯೇ ಎಂಬುದೇ ಈಗಿನ ಪ್ರಶ್ನೆ ಎಂದು ಅರ್ಜಿದಾರರ ಪರ ವಕೀಲರರು ಪ್ರಶ್ನಿಸಿದರು. ಇದಕ್ಕೆ, ಹಿಜಾಬ್​ ಧರಿಸುವುದು ಅನಿವಾರ್ಯವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಹಿಜಾಬ್ ನಿರ್ಬಂಧಿಸದಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪ್ರಾರಂಭಿಸಿದ ಹೈಕೋರ್ಟ್

  • ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠದಲ್ಲಿ ಅರ್ಜಿಗಳ ವಿಚಾರಣೆ
  • ಪ್ರಕರಣವನ್ನು ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದ ಅಭಿಪ್ರಾಯಪಟ್ಟ ನ್ಯಾಯಮೂರ್ತಿ
  • ಎಲ್ಲರೂ ಒಪ್ಪಿದರೆ ವಿಸ್ತೃತ ಪೀಠಕ್ಕೆ ಒಪ್ಪಿಸಬಹುದು ಎಂದರು ನ್ಯಾ. ಕೃಷ್ಣ ಎಸ್ ದೀಕ್ಷಿತ್
  • ವಿಸ್ತೃತ ಪೀಠಕ್ಕೆ ಒಪ್ಪಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರ ಎಂದರು ಎಜಿ
  • ಪ್ರಕರಣ ವಿಸ್ತೃತ ಪೀಠಕ್ಕೆ ಒಪ್ಪಿಸುವ ಅಗತ್ಯವಿಲ್ಲ. ಈಗಾಗಲೇ ವಾದ ಮಂಡನೆಯಾಗಿದೆ ಅರ್ಜಿ ವಿಚಾರಣೆ ಮುಂದುವರೆಸಲು ವಕೀಲರ ಸಲಹೆ
  • ಅರ್ಜಿ ವಿಚಾರಣೆ ಮುಂದುವರೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್

ಅರ್ಜಿದಾರರ ಪರ ವಕೀಲ ಕಾಮತ್ ವಾದ ಮಂಡನೆ

  • ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಬಗ್ಗೆ ತಮಗೆ ಸಂಪೂರ್ಣ ಭರವಸೆ, ವಿಶ್ವಾಸವಿದೆ
  • ಏಕಸದಸ್ಯ ಪೀಠ ಅಥವಾ ವಿಸ್ತೃತ ಪೀಠವಿರಲಿ. ಯಾವ ಪೀಠ ವಿಚಾರಣೆ ನಡೆಸಿದರೂ ಒಪ್ಪುತ್ತೇವೆ
  • ಈ ಬಗ್ಗೆ ನಮ್ಮ ಆಕ್ಷೇಪವೇನೂ ಇಲ್ಲ - ಕಾಮತ್​

ಸರ್ಕಾರ ಪರ ಅಡ್ವೋಕೇಟ್​ ಜನರಲ್​​ ಪ್ರಭುಲಿಂಗ ನಾವದಗಿ ವಾದ ಮಂಡನೆ

  • ಹಿಜಬ್​ ಮೂಲ ಧಾರ್ಮಿಕ ಆಚರಣೆ ಅಲ್ಲ - ಸರ್ಕಾರ
  • ಇದನ್ನು ಇತರ ಕೋರ್ಟ್​ಗಳು ಕೂಡ ಸ್ಪಷ್ಟಪಡಿಸಿವೆ
  • ವಿದ್ಯಾರ್ಥಿಗಳು ಕಾಲೇಜಿನ ವಸ್ತ್ರ ಸಂಹಿತೆ ಕಾಪಾಡಬೇಕು

ಅರ್ಜಿದಾರರ ಪರ ವಕೀಲ ಕಾಮತ್ ವಾದ ಮಂಡನೆ

  • ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸುವುದಾದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಿಜಾಬ್ ಧರಿಸಿ ಹೋಗಲು ಅವಕಾಶ ಕಲ್ಪಿಸಿಕೊಡಿ
  • ವಿದ್ಯಾರ್ಥಿಗಳು ಕಾಲೇಜುಗಳಿಂದ ಹೊರಗುಳಿಯುವುದರಿಂದ ಅವರಿಗೇ ನಷ್ಟವಾಗುತ್ತದೆ.
  • ಬಳಿಕ ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬಹುದು
  • ಶಿಕ್ಷಣದ ಕಾಯ್ದೆಯಲ್ಲಿ ಸಮವಸ್ತ್ರದ ಬಗ್ಗೆ ಎಲ್ಲಿಯೂ ಹೇಳಿಲ್ಲ
  • ಸರ್ಕಾರದ ನಿರ್ಧಾರವೇ ಅತ್ಯಂತ ಕೆಟ್ಟದ್ದು-ಕಾಮತ್​

ಪ್ರತಿ ವರ್ಷವೂ ಸಿಡಿಸಿ ಸಭೆ ನಡೆಯುತ್ತಿದೆ

  • ಈ ವರ್ಷವೂ ಈಗಿರುವ ಸಮವಸ್ತ್ರ ನೀತಿಯನ್ನೇ ಅನುಸರಿಸಲಾಗಿದೆ
  • ಕಾಲೇಜು ಸಮಿತಿ ಸಭೆ ನಡೆಸಿಯೇ ಸಮವಸ್ತ್ರ ಬಗ್ಗೆ ನಿರ್ಧಾರ
  • ಮಧ್ಯಂತರ ರಿಲೀಫ್​ ನೀಡಬೇಡಿ-ಕಾಲೇಜು ಸಮಿತಿ ಮನವಿ
  • ಶಾಲಾ ಆಡಳಿತ ಮಂಡಳಿ ಪರ ಸಜ್ಜನ್ ಪೂವಯ್ಯ ವಾದ

ಮಧ್ಯಂತರ ಆದೇಶದ ನೀಡುವಂತೆ ಅರ್ಜಿದಾರರ ಮನವಿ

  • ಮಧ್ಯಂತರ ಆದೇಶ ನೀಡುವಂತೆ ಸಂಜಯ್​ ಹೆಗಡೆ ಮನವಿ
  • ಸರ್ಕಾರದ ಆದೇಶವನ್ನು ವಜಾ ಮಾಡಿ-ಅರ್ಜಿದಾರರು
  • ಹಿಜಬ್ ಧರಿಸಿ ಶಾಲಾ ಕಾಲೇಜಿಗೆ ಹೀಗಲು ಅವಕಾಶ ನೀಡಿ
  • ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಂಜಯ್​ ಹೆಗಡೆ

ಮಧ್ಯಂತರ ಆದೇಶ ಅಗತ್ಯವಿಲ್ಲ

  • ಸರ್ಕಾರ ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡಿದೆ
  • ಸಮವಸ್ತ್ರ ವಿಚಾರದಲ್ಲಿ ಸಮಿತಿ ನಿರ್ಧಾರ ತೆಗೆದುಕೊಳ್ಳಬಹುದು
  • ಮಧ್ಯಂತರ ಆದೇಶ ನೀಡಬೇಡಿ ಎಂದು ಕಾಲೇಜು ಸಮಿತಿ ಮನವಿ

ಯೂನಿಫಾರಂ ಹಾಕದಿದ್ದರೆ ಕಾಲೇಜಿನಿಂದ ಹೊರಹಾಕುವಂತಿಲ್ಲ

  • ಹಿಜಬ್​ ಧರಿಸಿ ಕಾಲೇಜಿಗೆ ಬಂದರೆ ದಂಡ ವಿಧಿಸುವಂತಿಲ್ಲ-ಅರ್ಜಿದಾರರು
  • ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ
  • ಇದು ಸಮವಸ್ತ್ರ ಪ್ರಶ್ನೆಯೇ ಅಲ್ಲ-ಅರ್ಜಿದಾರರು

ಮಧ್ಯಂತರ ಆದೇಶ ಇಲ್ಲ

  • ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ
  • ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ಬಗ್ಗೆ ನಿರ್ಧರಿಸಿಲಿ-ಜಡ್ಜ್​
  • ವಿಸ್ತೃತ ಪೀಠ ರಚಿಸಿ ನ್ಯಾಯಮೂರ್ತಿಗಳು ಪ್ರಕರಣ ನಿರ್ಧರಿಸಲಿ

Last Updated : Feb 9, 2022, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.